’ನಿಮಗಾಗಿ ಭಾರತದ ಜನರು ಕಾಯುತ್ತಿದ್ದಾರೆ..ಬನ್ನಿ‘-ಕಮಲಾ ಹ್ಯಾರಿಸ್​ಗೆ ಪ್ರಧಾನಿ ಮೋದಿಯವರಿಂದ ಆಮಂತ್ರಣ

| Updated By: Lakshmi Hegde

Updated on: Sep 24, 2021 | 10:08 AM

PM Narendra Modi: ಕೊರೊನಾ ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲಿ ಅಮೆರಿಕ ಮಾಡಿದ ಸಹಾಯವನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದರು.

’ನಿಮಗಾಗಿ ಭಾರತದ ಜನರು ಕಾಯುತ್ತಿದ್ದಾರೆ..ಬನ್ನಿ‘-ಕಮಲಾ ಹ್ಯಾರಿಸ್​ಗೆ ಪ್ರಧಾನಿ ಮೋದಿಯವರಿಂದ ಆಮಂತ್ರಣ
ನರೇಂದ್ರ ಮೋದಿ-ಕಮಲಾ ಹ್ಯಾರಿಸ್​ ಭೇಟಿ
Follow us on

ಪ್ರಧಾನಿ ನರೇಂದ್ರ ಮೋದಿ ನಿನ್ನೆ (ಸೆ.23) ಅಮೆರಿಕಕ್ಕೆ ತೆರಳಿದ್ದಾರೆ. ಅವರಿಂದ ಕ್ವಾಡ್​ ಶೃಂಗಸಭೆ (Quad Summit)ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮೊದಲು ನಿನ್ನೆ ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris)​​ರನ್ನು ಭೇಟಿಯಾಗಿದ್ದಾರೆ. ಕಮಲಾ ಹ್ಯಾರಿಸ್​ ಮತ್ತು ಪ್ರಧಾನಿ ನರೇಂದ್ರ ಮೋದಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿ, ನಂತರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಕಮಲಾ ಹ್ಯಾರಿಸ್​ರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ‘ನೀವು ಯುಎಸ್​ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಒಂದು ಅತ್ಯಂತ ಮುಖ್ಯವಾದ ಮತ್ತು ಐತಿಹಾಸಿಕ ಕ್ಷಣ’ ಎಂದು ಕಮಲಾ ಹ್ಯಾರಿಸ್​ಗೆ ಹೇಳಿದ್ದಾರೆ. ಅಷ್ಟೇ ಅಲ್ಲ, ಭಾರತಕ್ಕೆ ಬನ್ನಿ ಎಂದು ಆಹ್ವಾನವನ್ನೂ ನೀಡಿದ್ದಾರೆ.   

‘ಕಮಲಾ ಹ್ಯಾರಿಸ್​​ ಅವರೇ, ನೀವು ಇಡೀ ಜಗತ್ತಿನಾದ್ಯಂತ ಅನೇಕಾನೇಕರಿಗೆ ಸ್ಫೂರ್ತಿಯಾಗಿದ್ದೀರಿ.  ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಮತ್ತು ನಿಮ್ಮ ನಾಯಕತ್ವದಡಿ ಭಾರತ ಮತ್ತು ಯುಎಸ್​ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಎತ್ತರಕ್ಕೆ ಏರುವ ಆತ್ಮವಿಶ್ವಾಸ ನನಗೆ ಇದೆ. ನಮ್ಮ ಭಾರತದ ಜನರು ನಿಮ್ಮ ಆಗಮನಕ್ಕಾಗಿ ಕಾಯುತ್ತಿದ್ದಾರೆ. ನಮ್ಮ ರಾಷ್ಟ್ರಕ್ಕೆ ಭೇಟಿ ಕೊಡಿ ಎಂದು ಇದೇ ಹೊತ್ತಲ್ಲಿ ನಿಮಗೆ ಆಮಂತ್ರಣ ನೀಡುತ್ತಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಮಲಾ ಹ್ಯಾರಿಸ್​ ಬಳಿ ಹೇಳಿದ್ದಾರೆ ಎಎನ್​ಐ ವರದಿ ಮಾಡಿದೆ.

ಕೊರೊನಾ ಸೋಂಕಿನ ಎರಡನೇ ಅಲೆಯ ಸಂದರ್ಭದಲ್ಲಿ ಅಮೆರಿಕ ಮಾಡಿದ ಸಹಾಯವನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದರು. ಕಮಲಾ ಹ್ಯಾರಿಸ್​ ಭೇಟಿಯ ಬಳಿಕ ಟ್ವೀಟ್ ಮಾಡಿರುವ ಅವರು, ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಭೇಟಿಯಿಂದ ಸಂತೋಷ ಆಗಿದೆ. ಅವರು ತಮ್ಮ ಸಾಧನೆಯಿಂದ ಇಡೀ ಜಗತ್ತಿಗೇ ಸ್ಫೂರ್ತಿಯಾದವರು. ಭಾರತ ಮತ್ತು ಅಮೆರಿಕ ಬಾಂಧವ್ಯವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ, ಹಲವು ವಿಚಾರಗಳ ಬಗ್ಗೆ ನಾವು ಮಾತುಕತೆ ನಡೆಸಿದ್ದೇವೆ.  ಮೌಲ್ಯ ಮತ್ತು ಸಂಸ್ಕೃತಿ ಆಧಾರಿತ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.  ಕಮಲಾ ಹ್ಯಾರಿಸ್ ಕೂಡ ಭಾರತವನ್ನು ಹೊಗಳಿದ್ದಾರೆ. ಭಾರತ ಸರ್ಕಾರದ ಕೊರೊನಾ ಲಸಿಕೆ ಅಭಿಯಾನವನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: PM Modi in US: ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ರನ್ನು ಭೇಟಿಯಾದ ಪ್ರಧಾನಿ ಮೋದಿ; ದ್ವಿಪಕ್ಷೀಯ ಮಾತುಕತೆ

ಭಾರತ ಸರ್ಕಾರದ ಕೊರೊನಾ ಲಸಿಕೆ ಅಭಿಯಾನವನ್ನು ಹೊಗಳಿದ ಕಮಲಾ ಹ್ಯಾರಿಸ್​; ಪಾಕಿಸ್ತಾನಕ್ಕೊಂದು ಕಿವಿಮಾತು

(People Of India waiting for you PM Narendra Modi invites Kamala Harris)