ಭಾರತ ಸರ್ಕಾರದ ಕೊರೊನಾ ಲಸಿಕೆ ಅಭಿಯಾನವನ್ನು ಹೊಗಳಿದ ಕಮಲಾ ಹ್ಯಾರಿಸ್​; ಪಾಕಿಸ್ತಾನಕ್ಕೊಂದು ಕಿವಿಮಾತು

Kamala Harris: ಜಗತ್ತಿನಾದ್ಯಂತ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳೂ ಅಪಾಯದಲ್ಲಿವೆ. ದೇಶದ ಜನರ ಹಿತಾಸಕ್ತಿ ಕಾಪಾಡಲು ಪ್ರಜಾಪ್ರಭುತ್ವವನ್ನು ರಕ್ಷಿಸುವ ಅಗತ್ಯವಿದೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಭಾರತ ಸರ್ಕಾರದ ಕೊರೊನಾ ಲಸಿಕೆ ಅಭಿಯಾನವನ್ನು ಹೊಗಳಿದ ಕಮಲಾ ಹ್ಯಾರಿಸ್​; ಪಾಕಿಸ್ತಾನಕ್ಕೊಂದು ಕಿವಿಮಾತು
ಕಮಲಾ ಹ್ಯಾರಿಸ್​ ಮತ್ತು ಪ್ರಧಾನಿ ಮೋದಿ ಜಂಟಿ ಹೇಳಿಕೆ ಬಿಡುಗಡೆ
Follow us
TV9 Web
| Updated By: Lakshmi Hegde

Updated on:Sep 24, 2021 | 9:29 AM

ಯುಎಸ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ನಿನ್ನೆ ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ (US Vice President Kamala Harris)ರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಕೊವಿಡ್​ 19 ಸಾಂಕ್ರಾಮಿಕ, ಅಫ್ಘಾನ್​ ಬೆಳವಣಿಗೆ, ಹವಾಮಾನ ಬದಲಾವಣೆ ಸೇರಿ ಹಲವು ವಿಷಯಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದ್ದಾರೆ.  ದ್ವಿಪಕ್ಷೀಯ ಮಾತುಕತೆ ಬಳಿಕ ಜಂಟಿ ಹೇಳಿಕೆಯನ್ನೂ ಉಭಯ ನಾಯಕರು ನೀಡಿದ್ದಾರೆ. ಈ ವೇಳೆ ಕಮಲಾ ಹ್ಯಾರಿಸ್​ ಭಾರತವನ್ನು ತುಂಬ ಹೊಗಳಿದ್ದಾರೆ. ಅದರಲ್ಲೂ ಕೊವಿಡ್​ 19 ವಿರುದ್ಧ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಕೊರೊನಾ ಲಸಿಕಾ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಯುಎಸ್​ಗೆ ಭಾರತ ಅತ್ಯಂತ ಮುಖ್ಯ ಪಾಲುದಾರ. ಕೊರೊನಾ ಲಸಿಕೆ ರಫ್ತನ್ನು ಅಕ್ಟೋಬರ್​​ನಿಂದ ಮತ್ತೆ ಪ್ರಾರಂಭ ಮಾಡುವುದಾಗಿ ಭಾರತ ಸರ್ಕಾರ ಘೋಷಿಸಿದೆ. ಅದನ್ನು ನಾನು ಸ್ವಾಗತಿಸುತ್ತೇನೆ. ಇದು ಶ್ಲಾಘಿಸಬೇಕಾದ ವಿಷಯ..ಭಾರತ ಪ್ರತಿದಿನ ಸರಿಸುಮಾರು 10 ಮಿಲಿಯನ್ (ಒಂದು ಕೋಟಿ) ಜನರಿಗೆ ಕೊರೊನಾ ಲಸಿಕೆ ನೀಡುತ್ತಿದೆ ಎಂದು ಕೇಳಲ್ಪಟ್ಟೆ ಎಂದು ಹೇಳಿದರು.

ಪ್ರಜಾಪ್ರಭುತ್ವ ರಕ್ಷಣೆ ನಮ್ಮ ಹೊಣೆ ಜಗತ್ತಿನಾದ್ಯಂತ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳೂ ಅಪಾಯದಲ್ಲಿವೆ. ನಾವು ನಮ್ಮ ನಮ್ಮ ದೇಶದಲ್ಲಿ ಮತ್ತು ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ತತ್ವಗಳು, ಸಂಸ್ಥೆಗಳ ಮೇಲೆ ಅವಲಂಬಿತರಾಗುವುದು ಅನಿವಾರ್ಯ ಮತ್ತು ದೇಶದ ಜನರ ಹಿತಾಸಕ್ತಿ ಕಾಪಾಡಲು ಪ್ರಜಾಪ್ರಭುತ್ವವನ್ನು ರಕ್ಷಿಸುವ ಅಗತ್ಯವಿದೆ ಎಂದೂ ಹೇಳಿದ್ದಾರೆ.  ಹಾಗೇ, ಭಯೋತ್ಪಾದನೆ ವಿರುದ್ಧ ಮಾತನಾಡಿದ ಕಮಲಾ ಹ್ಯಾರಿಸ್​, ಉಗ್ರವಾದ ಪೋಷಿಸುವಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆಯೂ ಮಾತನಾಡಿದ್ದಾರೆ. ನಮ್ಮ ಯುಎಸ್​ನಲ್ಲಿ ಕೂಡ ಉಗ್ರಸಂಘಟನೆ ಇದೆ. ಅಂಥ ಉಗ್ರರಿಗೆ ಪಾಕಿಸ್ತಾನ ಬುದ್ಧಿ ಹೇಳಬೇಕು. ಅಮೆರಿಕ ಮತ್ತು ಭಾರತದ ಭದ್ರತೆಗೆ ಯಾವುದೇ ತೊಡಕು ಮಾಡಲೂ ಬಿಡಬಾರದು. ಪಾಕಿಸ್ತಾನ ಭಯೋತ್ಪಾದಕರನ್ನು ಪೋಷಿಸುವುದನ್ನು ಬಿಡಬೇಕು ಎಂದು ಹೇಳಿದ್ದಾರೆಂದು ಭಾರತದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಹರ್ಷವರ್ಧನ್​ ಶ್ರಿಂಗ್ಲಾ ತಿಳಿಸಿದ್ದಾರೆ.

ಭಾರತ-ಅಮೆರಿಕ ಸಹಜ ಪಾಲುದಾರರು ಕಮಲಾ ಹ್ಯಾರಿಸ್ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಅಮೆರಿಕ ಸಹಜ ಪಾಲುದಾರರಾಗಿದ್ದಾರೆ. ನಾವು ಸಮಾನ ರೂಪದ ಮೌಲ್ಯಗಳು, ಭಗೋಳಿಕ ಹಿತಾಸಕ್ತಿಗಳನ್ನು ಹೊಂದಿದ್ದೇವೆ. ಭಾರತ ಮತ್ತು ಯುಎಸ್​ಗಳು ಜಗತ್ತಿನ ಅತ್ಯಂತ ದೊಡ್ಡ ಮತ್ತು ಹಳೇ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆ. ನಮ್ಮ ಸಹಕಾರ, ಬಾಂಧವ್ಯ ವೃದ್ಧಿಯಾಗುತ್ತಿದೆ ಎಂದು ಹೇಳಿದ್ದಾರೆ.  ಇಂದು ಅಮೆರಿಕ, ಭಾರತ, ಜಪಾನ್​, ಆಸ್ಟ್ರೇಲಿಯಾ ಮತ್ತು ದಕ್ಷಿಣಾಫ್ರಿಕಾಗಳನ್ನು ಒಳಗೊಂಡ ಕ್ವಾಡ್​ ಶೃಂಗಸಭೆ ಇಂದು ನಡೆಯಲಿದೆ. ಹಾಗೇ, ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡ್​ ಜತೆ ಕೂಡ ಇಂದು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ: ನಮ್ಮ ಶಾಸಕರೇ ಡಿಸಿಸಿ ಬ್ಯಾಂಕ್‌ಗಳಲ್ಲಿ 245 ಕೋಟಿ ಸಾಲ ಪಡೆದು ಒಂದೇ ಒಂದು ರೂ ಕಟ್ಟಿಲ್ಲ! ಸಹಕಾರ ಸಚಿವ ಸೋಮಶೇಖರ್ ಅಳಲು

PM Modi in US: ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ರನ್ನು ಭೇಟಿಯಾದ ಪ್ರಧಾನಿ ಮೋದಿ; ದ್ವಿಪಕ್ಷೀಯ ಮಾತುಕತೆ

(US Vice President Kamala Harris lauds Centre’s Corona vaccine drive in a joint media appearance with PM Modi)

Published On - 9:23 am, Fri, 24 September 21

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್