AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಇಂದು ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಪೆಟ್ರೋಲ್​-ಡೀಸೆಲ್​ ದರ ಹೀಗಿದೆ

Fuel Rate Today, 09-12-2021: ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ ಬಳಿಕ ಪಂಜಾಬ್​ ಕಾಂಗ್ರೆಸ್​ ಸರ್ಕಾರ ಸ್ಥಳೀಯ ವ್ಯಾಟ್​ ಅಥವಾ ಸ್ಥಳೀಯ ಮಾರಾಟ ತೆರಿಗೆಯನ್ನು ಕಡಿತ ಮಾಡಿದೆ. ಅದರ ಬೆನ್ನಲ್ಲೇ ಅಲ್ಲಿ ಪೆಟ್ರೋಲ್​ ಪ್ರತಿ ಲೀಟರ್​ಗೆ 16.02 ರೂಪಾಯಿ ಮತ್ತು ಡೀಸೆಲ್​ ಪ್ರತಿ ಲೀಟರ್​ಗೆ 19.61 ರೂ.ಕಡಿತಗೊಂಡಿದೆ.

Petrol Price Today: ಇಂದು ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಪೆಟ್ರೋಲ್​-ಡೀಸೆಲ್​ ದರ ಹೀಗಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Dec 09, 2021 | 7:54 AM

Share

Petrol Diesel Price Today | ಕೇಂದ್ರ ಸರ್ಕಾರ ಪೆಟ್ರೋಲ್​-ಡೀಸೆಲ್​ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿ ಒಂದು ತಿಂಗಳ ಮೇಲಾಯಿತು. ಹಾಗೇ, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿ ವಾರವಾಯಿತು. ಈ ಮಧ್ಯೆ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗದೆ ಸ್ಥಿರವಾಗಿಯೇ ಇದೆ. ನವೆಂಬರ್​ನಲ್ಲಿ ದೀಪಾವಳಿಯವರೆಗೆ ಪ್ರತಿದಿನವೆಂಬರಂತೆ ಪೆಟ್ರೋಲ್​-ಡೀಸೆಲ್​ ದರ ಏರಿಕೆಯಾಗುತ್ತಿತ್ತು. ರಾಷ್ಟ್ರದ ಬಹುತೇಕ ನಗರಗಳಲ್ಲಿ ಪೆಟ್ರೋಲ್​ ಬೆಲೆಯಂತೂ 100 ರೂ.ಮೇಲೆ ಇತ್ತು.  ದೀಪಾವಳಿ ಹಬ್ಬದ ಮುನ್ನಾದಿನ ಕೇಂದ್ರ ಸರ್ಕಾರ ಇಂಧನ ಬೆಲೆಗಳ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿತು. ಅದಾದ ಮೇಲೆ ಬಿಜೆಪಿ ಸರ್ಕಾರವಿರುವ ಎಲ್ಲ ರಾಜ್ಯಗಳಲ್ಲೂ ತತ್​ಕ್ಷಣಕ್ಕೇ ಇಂಧನದ ಮೇಲಿನ ವ್ಯಾಟ್​ ಕಡಿತಗೊಳಿಸಲಾಯಿತು.ಹಾಗೇ, ನವೆಂಬರ್​ 30ರಂದು ದೆಹಲಿಯ ಆಮ್​ ಆದ್ಮಿ ಪಕ್ಷದ ಸರ್ಕಾರ ಕೂಡ ಪೆಟ್ರೋಲ್​ ಮೇಲಿನ ಅಬಕಾರಿ ಸುಂಕವನ್ನು ಶೇ.19.40ಕ್ಕೆ ಇಳಿಸುವ ಮೂಲಕ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 8 ರೂಪಾಯಿ ಕಡಿತಗೊಳಿಸಿದೆ. 

ಪಂಜಾಬ್​​ನಲ್ಲಿ ಅತ್ಯಂತ ಹೆಚ್ಚು ಕಡಿತ ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ ಬಳಿಕ ಪಂಜಾಬ್​ ಕಾಂಗ್ರೆಸ್​ ಸರ್ಕಾರ ಸ್ಥಳೀಯ ವ್ಯಾಟ್​ ಅಥವಾ ಸ್ಥಳೀಯ ಮಾರಾಟ ತೆರಿಗೆಯನ್ನು ಕಡಿತ ಮಾಡಿದೆ. ಅದರ ಬೆನ್ನಲ್ಲೇ ಅಲ್ಲಿ ಪೆಟ್ರೋಲ್​ ಪ್ರತಿ ಲೀಟರ್​ಗೆ 16.02 ರೂಪಾಯಿ ಮತ್ತು ಡೀಸೆಲ್​ ಪ್ರತಿ ಲೀಟರ್​ಗೆ 19.61 ರೂ.ಕಡಿತಗೊಂಡಿದೆ. ಕೇಂದ್ರ ಸರ್ಕಾರ ಇಂಧನ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಪೆಟ್ರೋಲ್​-ಡೀಸೆಲ್​ ರೇಟ್​ ಕಡಿಮೆ ಮಾಡಿದ ರಾಜ್ಯ ಪಂಜಾಬ್​ ಆಗಿದೆ. ಅದಾಗಿ ಎರಡನೇ ಸ್ಥಾನದಲ್ಲಿ ಲಡಾಖ್​ ಇದೆ. ಪೆಟ್ರೋಲ್​ಗೆ 9.52 ರೂ. ಕಡಿತಗೊಂಡಿದೆ.

ಎಷ್ಟಿದೆ ಮಹಾನಗರಗಳಲ್ಲಿ ಇಂದು ಇಂಧನ ದರ? ಭಾರತದ ಯಾವುದೇ ನಗರಗಳಲ್ಲೂ ಇಂದು ತೈಲಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್​ ಬೆಲೆ 100.58 ರೂ. ಮತ್ತು ಡೀಸೆಲ್​ ಬೆಲೆ 85.01 ರೂ. ಇದ್ದರೆ, ಮೈಸೂರಿನಲ್ಲಿ ಪೆಟ್ರೋಲ್​ ದರ 100.08 ರೂ., ಡೀಸೆಲ್​ ದರ 84.56 ರೂ. ಆಗಿದೆ. ಹಾಗೇ ಮಂಗಳೂರಿನಲ್ಲಿ ಪೆಟ್ರೋಲ್​ 99.76 ರೂ. ಮತ್ತು ಡೀಸೆಲ್​ 84.24 ರೂ.ಗೆ ಮಾರಾಟವಾಗುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಡೀಸೆಲ್​ ಬೆಲೆ ಪ್ರತಿ ಲೀಟರ್​ಗೆ 86.67 ರೂ. ಇದ್ದರೆ, ಪೆಟ್ರೋಲ್​ ದರ 95.41 ರೂ.ಆಗಿದೆ. ಮುಂಬೈ ಮಹಾನಗರಿಯಲ್ಲೂ ಸಹ ಯಾವುದೇ ಬದಲಾವಣೆಯಾಗಿಲ್ಲ. ಇಲ್ಲಿ ಪೆಟ್ರೋಲ್​ ದರ 109.98 ರೂ. ಮತ್ತು ಡೀಸೆಲ್​ ದರ 94.14 ರೂ. ಆಗಿದೆ. ಹಾಗೇ, ಚೆನ್ನೈನಲ್ಲಿ ಪೆಟ್ರೋಲ್​ ದರ 101.40 ರೂ. ಇದೆ.  ಡೀಸೆಲ್​ ದರ 91.43 ರೂ. ಆಗಿದೆ. ರಾಷ್ಟ್ರದ ಸುಮಾರು 27 ಮಹಾನಗರಗಳಲ್ಲಿ ಪೆಟ್ರೋಲ್​ ದರ 100 ರೂ.ಗಡಿ ದಾಟಿದೆ.

ಪೆಟ್ರೋಲ್​-ಡೀಸೆಲ್​ ದರದಲ್ಲಿ ಇಳಿಕೆ? ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಾದ ಬೆನ್ನಲ್ಲೇ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​-ಡೀಸೆಲ್​ ದರ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.  ಹೀಗಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ಇದೇ ವೇಳೆ ಯುಎಸ್​ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್​​ಗೆ 70 ಡಾಲರ್​ಗಳಷ್ಟು ಕುಸಿದಿದೆ. ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ 72 ರೂ.ಕಡಿಮೆಯಾಗಿದೆ.

ಇದನ್ನೂ ಓದಿ: 

ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.htm

Published On - 7:54 am, Thu, 9 December 21

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ