ದೆಹಲಿ: ಕೊರೊನಾ ಆತಂಕದ ನಡೆವೆಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಮೇ ತಿಂಗಳೊಂದರಲ್ಲಿಯೇ 14 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳ ಕಂಡುಬಂದಿದೆ. ಆದರೆ ಇಂದು (ಶುಕ್ರವಾರ 28) ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ ನಿನ್ನೆ (ಗುರುವಾರ) ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 24 ಪೈಸೆ ಹೆಚ್ಚಿಸಿದರೆ, ಡೀಸೆಲ್ ಬೆಲೆಯನ್ನು ಲೀಟರ್‌ಗೆ 29 ಪೈಸೆ ಹೆಚ್ಚಿಸಿದೆ.
ದೆಹಲಿಯಲ್ಲಿ ಇಂದು ಪೆಟ್ರೋಲ್ ಲೀಟರ್‌ಗೆ 93.68 ರೂಪಾಯಿಯಾದರೆ, ಡೀಸೆಲ್ ಲೀಟರ್‌ಗೆ 84.61 ರೂಪಾಯಿಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಮೇ ತಿಂಗಳಲ್ಲಿ 3.28 ರೂಪಾಯಿ ಹೆಚ್ಚಾಗಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 3.88 ರೂಪಾಯಿ ಏರಿಕೆ ಕಂಡಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ 99.94 ರೂಪಾಯಿಯಾದರೆ, ಡೀಸೆಲ್ ಲೀಟರ್‌ಗೆ 91.87 ರೂಪಾಯಿಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಲೀಟರ್‌ಗೆ 95.28 ರೂಪಾಯಿಯಾದರೆ, ಡೀಸೆಲ್ ಲೀಟರ್‌ಗೆ 89.39 ರೂಪಾಯಿಯಾಗಿದೆ.
ಕೋಲ್ಕತಾದಲ್ಲಿ ಪೆಟ್ರೋಲ್ ಲೀಟರ್‌ಗೆ 93.72 ರೂಪಾಯಿಯಾದರೆ, ಡೀಸೆಲ್ ಲೀಟರ್‌ಗೆ 87.46 ರೂಪಾಯಿಯಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 96.80 ರೂಪಾಯಿಯಾದರೆ, ಡೀಸೆಲ್ ಲೀಟರ್‌ಗೆ 89.70 ರೂಪಾಯಿಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ರಾಜಸ್ಥಾನ ಹೊಂದಿದ್ದು, ಪೆಟ್ರೋಲ್ ಲೀಟರ್‌ಗೆ 104.67 ಮತ್ತು ಡೀಸೆಲ್ ಲೀಟರ್‌ಗೆ 97.49 ರೂಪಾಯಿ ಇದೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಅಬಕಾರಿ ಸುಂಕ, ವ್ಯಾಪಾರಿ ಆಯೋಗ ಮತ್ತು ಇತರ ಖರ್ಚುಗಳನ್ನು ಸೇರಿಸಿದ ನಂತರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ದ್ವಿಗುಣವಾಗುತ್ತದೆ. ಅದರಂತೆ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ನಿಗದಿಪಡಿಸಲಾಗಿದೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜೊತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.
ಇದನ್ನೂ ಓದಿ:
Petrol Price Today: ಇಂದು ಸಹ ಏರಿದ ಇಂಧನ ದರ; ಮುಂಬೈ ನಗರದಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಲು 6 ಪೈಸೆಗಳಷ್ಟೇ ಬಾಕಿ
Published On - 9:36 am, Fri, 28 May 21