Petrol Rate Today: ಮೇ ತಿಂಗಳಿನಲ್ಲಿ 8 ಬಾರಿ ಏರಿಕೆ ಕಂಡ ಪೆಟ್ರೋಲ್​, ಡೀಸೆಲ್​ ದರ; ವಿವಿಧ ನಗರಗಳಲ್ಲಿನ ತೈಲ ಬೆಲೆ ವಿವರ ಇಲ್ಲಿದೆ

Petrol Diesel Price Today: ಇಂದು ಶುಕ್ರವಾರ ಪ್ರತಿ ಲೀಟರ್​ ಪೆಟ್ರೋಲ್​ ದರ 28 ರಿಂದ 29 ಪೈಸೆಯಷ್ಟು ಹೆಚ್ಚಳವಾಗಿದೆ. ಪ್ರತಿ ಲೀಟರ್​ ಡೀಸೆಲ್​ ದರ 34 ರಿಂದ 35 ಪೈಸೆ ಏರಿಕೆಯಾಗಿದೆ. ವಿವಿಧ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್​ ದರ ಎಷ್ಟಾಗಿದೆ ಎಂಬುದರ ವಿವರ ಇಲ್ಲಿದೆ.

Petrol Rate Today: ಮೇ ತಿಂಗಳಿನಲ್ಲಿ 8 ಬಾರಿ ಏರಿಕೆ ಕಂಡ ಪೆಟ್ರೋಲ್​, ಡೀಸೆಲ್​ ದರ; ವಿವಿಧ ನಗರಗಳಲ್ಲಿನ ತೈಲ ಬೆಲೆ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Edited By:

Updated on: May 14, 2021 | 9:54 AM

ದೆಹಲಿ: ಒಂದು ದಿನದ ವಿರಾಮದ ಬಳಿಕ ಮತ್ತೆ ಪೆಟ್ರೋಲ್​ ಮತ್ತು ಡೀಸೆಲ್​ ದರ ಇಂದು ಮೇ 14ರಂದು (ಶುಕ್ರವಾರ) ಏರಿಕೆಯಾಗಿದೆ. ಪ್ರತಿ ಲೀಟರ್​ ಪೆಟ್ರೋಲ್​ ದರ 28 ರಿಂದ 29 ಪೈಸೆಯಷ್ಟು ಹೆಚ್ಚಳವಾಗಿದೆ. ಹಾಗೆಯೇ ಪ್ರತಿ ಲೀಟರ್​ ಡೀಸೆಲ್​ ದರ 34 ರಿಂದ 35 ಪೈಸೆ ಏರಿಕೆಯಾಗಿದೆ. ಇಂದು ದರ ಏರಿಕೆಯ ಬಳಿಕ ಮೇ ತಿಂಗಳಿನಲ್ಲಿ ಒಟ್ಟು ಎಂಟು ಬಾರಿ ದರ ಏರಿಕೆಯಾಗಿದೆ.

ದರ ಏರುತ್ತಲೇ ಇರುವುದರಿಂದ ದೆಹಲಿ ಮತ್ತು ಮುಂಬೈನಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು. ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92.24 ರೂಪಾಯಿಗೆ ಏರಿಕೆಯಾದರೆ, ವಾಣಿಜ್ಯ ನಗರಿ ಮುಂಬೈನಲ್ಲಿ ಒಂದು ಲೀಟರ್​ ಪೆಟ್ರೋಲ್​ ದರ 98.65 ರೂಪಾಯಿಗೆ ಹೆಚ್ಚಳವಾಗಿದೆ. ತೈಲ ದರ ಏರಿಕೆಯ ಬಳಿಕ ಕೊಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 92.44 ರೂಪಾಯಿಗೆ ಏರಿಕೆಯಾಗಿದೆ. ಇನ್ನು, ಚೆನ್ನೈನಲ್ಲಿ ಒಂದು ಲೀಟರ್​ ಪೆಟ್ರೋಲ್ ದರ 94.09 ರೂಪಾಯಿ ಆಗಿದೆ. ಇನ್ನು, ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 95.41 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಪ್ರತಿ ಲೀಟರ್​ ಡೀಸೆಲ್​ ದರ 87.94 ರೂಪಾಯಿಗೆ ಏರಿಕೆಯಾಗಿದೆ.

ಮೇ ತಿಂಗಳಿನಲ್ಲಿ ಒಟ್ಟು ಎಂಟು ದಿನ ಡೀಸೆಲ್​ ದರ ಕೂಡಾ ಏರಿಕೆಯತ್ತ ಸಾಗಿದೆ. ಇಂದು ಪ್ರತಿ ಲೀಟರ್​ ಡೀಸೆಲ್​ ರದಲ್ಲಿ 34ರಿಂದ 35 ಪೈಸೆ ಹೆಚ್ಚಳದ ನಂತರ ವಾಣಿಜ್ಯ ನಗರಿ ಮುಂಬೈನಲ್ಲಿ ಒಂದು ಲೀಟರ್​ ಪೆಟ್ರೋಲ್​ ದರ 90.11 ರೂಪಾಯಿ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 82.95 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 85.79 ರೂಪಾಯಿಗೆ ಏರಿಕೆಯಾಗಿದೆ. ಇನ್ನು, ಚೆನ್ನೈನಲ್ಲಿ ಒಂದು ಲೀಟರ್​ ಡೀಸೆಲ್​ ದರ 87.81 ರೂಪಾಯಿ ಆಗಿದೆ.

ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ, ವಿದೇಶಿ ವಿನಿಮಯ ದರ ಮತ್ತು ದೈನಂದಿನ ದರ ಬದಲಾವಣೆ ಆಧಾರದ ಮೇಲೆ ಪ್ರತಿನಿತ್ಯದ ತೈಲ ದರವನ್ನು ಪರಿಷ್ಕರಿಸಿ ಬೆಲೆ ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಕಟ್ಟು ನಿಟ್ಟಿನ ಕ್ರಮ ಜಾರಿಯಲ್ಲಿದೆ. ಅನಗತ್ಯವಾಗಿ ಹೊರಗಡೆ ಸುತ್ತಾಡುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ತೈಲ ಬೇಡಿಕೆಯು ಕುಸಿದಿದ್ದು, ಶೇ. 3ರಷ್ಟು ತೈಲ ಬೇಡಿಕೆಯಲ್ಲಿ ಕುಸಿತ ಕಂಡು ಬಂದಿದೆ.

ಇದನ್ನೂ ಓದಿ: Petrol Diesel Rate Today: ಪೆಟ್ರೋಲ್​, ಡೀಸೆಲ್​ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ; ನಿಮ್ಮ ನಗರದಲ್ಲಿ ತೈಲ ದರ ಎಷ್ಟಿದೆ?

Published On - 9:39 am, Fri, 14 May 21