AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coronavirus India Updates: ಕಳೆದ 24 ಗಂಟೆಗಳಲ್ಲಿ 3.43ಲಕ್ಷ ಹೊಸ ಪ್ರಕರಣ ಪತ್ತೆ, 4000 ರೋಗಿಗಳು ಸಾವು

Covid 19 India: ದೇಶದಲ್ಲಿ ಒಟ್ಟು ಕೊವಿಡ್ ರೋಗಿಗಳ ಸಂಖ್ಯೆ 2,40,46,809 ಆಗಿದ್ದು, 37,04,893 ಸಕ್ರಿಯ ಪ್ರಕರಣಗಳಿವೆ. ಈವರೆಗೆ 2,00,79,599 ಮಂದಿ ಚೇತರಿಸಿಕೊಂಡಿದ್ದು 2,62,317 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ .

Coronavirus India Updates: ಕಳೆದ 24 ಗಂಟೆಗಳಲ್ಲಿ 3.43ಲಕ್ಷ ಹೊಸ ಪ್ರಕರಣ ಪತ್ತೆ, 4000 ರೋಗಿಗಳು ಸಾವು
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on: May 14, 2021 | 10:54 AM

Share

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3.43 ಲಕ್ಷ ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 4,000 ಕೊವಿಡ್ ರೋಗಿಗಳು ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟು ರೋಗಿಗಳ ಸಂಖ್ಯೆ 2,40,46,809 ಆಗಿದ್ದು, 37,04,893 ಸಕ್ರಿಯ ಪ್ರಕರಣಗಳಿವೆ. ಈವರೆಗೆ 2,00,79,599 ಮಂದಿ ಚೇತರಿಸಿಕೊಂಡಿದ್ದು 2,62,317 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ . ಮಹಾರಾಷ್ಟ್ರದಲ್ಲಿ 42,582 ಹೊಸ ಪ್ರಕರಣಗಳು ವರದಿ ಆಗಿದ್ದು ಕೇರಳದಲ್ಲಿ ಪ್ರಕರಣಗಳ ಸಂಖ್ಯೆ 39,955 ಆಗಿದೆ. ಅತೀ ಹೆಚ್ಚು ಪ್ರಕರಣಗಳಿರುವ ಐದು ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಇಲ್ಲ. ಆಂಧ್ರಪ್ರದೇಶದಲ್ಲಿ 22,000 ಕ್ಕೂ ಹೆಚ್ಚು ಪ್ರಕರಣಗಳಿವೆ. ಗುರುವಾರ ವರದಿಯಾದ ಸಾವಿನ ಸಂಖ್ಯೆಗಳಲ್ಲಿ ಮಹಾರಾಷ್ಟ್ರದಲ್ಲಿ 882 ಮತ್ತು ಕರ್ನಾಟಕದಲ್ಲಿ 344 ಸಾವು ವರದಿ ಆಗಿದೆ.

ಕಳೆದ ಎರಡು ವಾರಗಳಲ್ಲಿ ಭಾರತದ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸೂಚನೆ ಇದೆ. ಆದಾಗ್ಯೂ, ಎರಡನೇ ಅಲೆ ಮುಗಿಯುವುದಕ್ಕೆ ಇನ್ನಷ್ಟು ದಿನ ಕಾಯಬೇಕಿದೆ. ಕಳೆದ ಗುರುವಾರ ದೇಶದಲ್ಲಿ 4.14 ಲಕ್ಷ ಪ್ರಕರಣಗಳು ವರದಿಯಾಗಿದ್ದು ಇತ್ತೀಚೆಗೆ ಗಮನಾರ್ಹ ಕುಸಿತಕಂಡಿದೆ.

ಭಾರತಕ್ಕೆ ಸರಬರಾಜು ಮಾಡಲು ಮೂರು ಜಾಗತಿಕ ಲಸಿಕೆ ತಯಾರಕರಾದ ಪೈಜರ್, ಮಾಡರ್ನಾ ಮತ್ತು ಜಾನ್ಸನ್ ಆಂಡ್ ಜಾನ್ಸನ್ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. ಫಾರ್ಮಾ ದೈತ್ಯರ ಜತೆ ಸಂವಹನ ನಡೆಸಿದ್ದು, ಅವರು Q3, 2021 (ಜುಲೈ ತಿಂಗಳಲ್ಲಿ) ಮಾತ್ರ ಚರ್ಚೆಗೆ ತೆರೆದುಕೊಳ್ಳಲಿದ್ದಾರೆ ಎಂದು ಹೇಳಿದೆ. ಹಾಗಿದ್ದರೂ, ಆಗಸ್ಟ್ ಮತ್ತು ಡಿಸೆಂಬರ್ ನಡುವೆ ಐದು ತಿಂಗಳಲ್ಲಿ ಎರಡು ಬಿಲಿಯನ್ ಡೋಸ್ ಕೊವಿಡ್ -19 ಲಸಿಕೆಗಳು ದೇಶದಲ್ಲಿ ಲಭ್ಯವಾಗಬಹುದು ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ವಿ ಕೆ ಪೌಲ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊವಿಡ್ ಪ್ರಕರಣಗಳು ಏರಿಕೆ ಆಗುತ್ತಿದ್ದು ಹೊಸ ಪ್ರಕರಣಗಳು ಇಳಿಯುತ್ತವೆ. ಮುಂಬೈನಲ್ಲಿ ಸಾವಿನ ಸಂಖ್ಯೆ 14 ಸಾವಿರ ಗಡಿ ದಾಟಿದೆ ಎಂದು ಆರೋಗ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ಬುಧವಾರ 816 ಸಾವುಗಳಿಗೆ ಹೋಲಿಸಿದರೆ, ರಾಜ್ಯದ ಸಾವುಗಳು ಗುರುವಾರ ಮತ್ತೆ 850 ಕ್ಕೆ ತಲುಪಿದೆ. ಗರಿಷ್ಠ 1,035 ಸಾವುಗಳಿಗೆ (ಏಪ್ರಿಲ್ 28) ಹೋಲಿಸಿದರೆ -ಈಗ 78,007 ರಿಂದ 78,857 ಕ್ಕೆ ತಲುಪಿದೆ.|

ಹೊಸ ಸೋಂಕುಗಳ ಸಂಖ್ಯೆ 50 ಸಾವಿರಕ್ಕಿಂತಲೂ ಕಡಿಮೆಯಿತ್ತು. ಈಗ ಅದು 46,781 ರಿಂದ 42,582 ಕ್ಕೆ ಇಳಿದಿತ್ತು ಆದರೂ ಇದು ದಾಖಲೆಯ ಗರಿಷ್ಠ 68,631 (ಏಪ್ರಿಲ್ 18) ಗಿಂತ ಕಡಿಮೆಯಾಗಿದೆ. ರಾಜ್ಯದಲ್ಲೀಗ ಸೋಂಕುಗಳ ಸಂಖ್ಯೆ ಈಗ 52,26,710 ರಿಂದ 52,62,292 ಕ್ಕೆ ಏರಿದೆ. ಮುಂಬೈನ ದೈನಂದಿನ ಸಾವುಗಳು ಬುಧವಾರ 66 ರಿಂದ ಈಗ 68 ಕ್ಕೆ ಏರಿತು . ಇಲ್ಲೀಗ ಸಾವುಗಳ ಸಂಖ್ಯೆ 13,972 ರಿಂದ 14,040 ಕ್ಕೆ ತಲುಪಿದೆ.

ದೆಹಲಿಯಲ್ಲಿ 10,489 ಹೊಸ ಕೊವಿಡ್ ಪ್ರಕರಣ ಪತ್ತೆ ದೆಹಲಿಯಲ್ಲಿ ಕೊವಿಡ್ ಸಕಾರಾತ್ಮಕ ದರವು ಗುರುವಾರ ಒಂದು ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಕಳೆದ 24 ಗಂಟೆಗಳಲ್ಲಿ 10,489 ಕೊವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು ಮತ್ತು 308 ಸಾವು ಸಂಭವಿಸಿದೆ. ಪಾಸಿಟಿವಿಟಿ ದರ ಶೇ 14.24 ಆಗಿದೆ . ಈ ಪಾಸಿಟಿವಿಟಿ ದರವ ಏಪ್ರಿಲ್ 13, 2021 ರಿಂದ ದೆಹಲಿಯಲ್ಲಿ ಶೇ 13.14 ಕ್ಕೆ ದಾಖಲಾದ ನಂತರ ಅತ್ಯಂತ ಕಡಿಮೆ ದರವಾಗಿದೆ.

ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆ ಶೇ 40 ಕೊವಿಡ್ -19 ರ ಎರಡನೇ ಅಲೆಯ ಹೊತ್ತಲ್ಲಿ ದಾಖಲಾದ ಸಾವುಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡಿದೆ. 2020 ರಲ್ಲಿ ಸಾಂಕ್ರಾಮಿಕ ರೋಗವು ಭಾರತದಲ್ಲಿ ಅಪ್ಪಳಿಸಿದ ನಂತರದ ಒಟ್ಟು ಸಂಖ್ಯೆ ಈ ವಾರ 2,50,000 ದಾಟಿದೆ. ಈ ವರ್ಷದ ಮಾರ್ಚ್ ಆರಂಭದಿಂದ ಸುಮಾರು 40 ರಷ್ಟು ಸಾವುಗಳು ಸಂಭವಿಸಿವೆ. ಜಾಗತಿಕ ಮಟ್ಟದಲ್ಲಿ ನೋಡಿದರೆ ಭಾರತದಲ್ಲಿ ಕೋವಿಡ್ -19 ನಿಂದ ಹೆಚ್ಚು ಜನರು ಸಾಯುತ್ತಿದ್ದಾರೆ ಎಂದು ದೈನಂದಿನ ಸಾವಿನ ಸಂಖ್ಯೆಗಳು ತೋರಿಸುತ್ತವೆ. ಏಷ್ಯಾದಲ್ಲಿ ಪ್ರತಿದಿನ 5,600 ಕ್ಕೂ ಹೆಚ್ಚು ಕೊವಿಡ್ -19 ಸಾವುಗಳು ಸಂಭವಿಸಿವೆ, ಅದರಲ್ಲಿ 4,000 ಕ್ಕೂ ಹೆಚ್ಚು ಜನರು ಭಾರತದಲ್ಲಿ ಸಂಭವಿಸಿದ್ದಾಗಿದೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ರಾಷ್ಟ್ರೀಯ ಮರಣ ಪ್ರಮಾಣವು ಶೇಕಡಾ 1.09 ರಷ್ಟಿದೆ.

ಇದನ್ನೂ ಓದಿ: ಆಗಸ್ಟ್​ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ 200 ಕೋಟಿ ಡೋಸ್ ಕೊವಿಡ್ ಲಸಿಕೆ ದೊರೆಯುವ ಸಾಧ್ಯತೆ

ಕಳೆದ ಎರಡು ವಾರಗಳಲ್ಲಿ 187 ಜಿಲ್ಲೆಗಳಲ್ಲಿ ಕೊರೊನಾವೈರಸ್ ಸೋಂಕು ಪ್ರಕರಣ ಇಳಿಮುಖ: ಕೇಂದ್ರ ಆರೋಗ್ಯ ಸಚಿವಾಲಯ (India counted 3.43 lakh new cases of coronavirus 4000 deaths on Thursday)