Cyclones: ಚಂದದ ಹೆಸರಿಟ್ಟುಕೊಂಡು ಅಪ್ಪಳಿಸುವ ಚಂಡಮಾರುತಗಳಿಗೆ ಹೆಸರಿಡುವವರಾರು? ಆ ಚಂದದ ಹೆಸರುಗಳಾವವು?
Cyclone Name and Origin: ಭಾರತೀಯ ಮೆಟ್ರೊಲಾಜಿಕಲ್ ಡಿಪಾರ್ಟ್ಮೆಂಟ್ (IMD) 169 ಸೈಕ್ಲೋನ್ಗಳಿಗೆ ವಿವಿಧ ಹೆಸರುಗಳಿಂದ ಗುರುತಿಸುವ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಿಂದ ಬರುವ ಸೈಕ್ಲೋನ್ಗಳ ಹೆಸರೂ ಕೂಡಾ ಇದೆ.
ಪ್ರತೀ ವರ್ಷ ಒಂದಲ್ಲಾ ಒಂದು ಚಂಡಮಾರುತದ ಅಬ್ಬರದ ಸುದ್ದಿಯನ್ನು ಕೆಳುತ್ತೇವೆ. ಕೆಲವೊಂದು ಅತಿ ಭೀಕರತೆ ಸೃಷ್ಟಿಸಿದ್ದರೂ ಇನ್ನು ಕೆಲವು ಚಿಕ್ಕ-ಪುಟ್ಟ ಚಂಡ ಮಾರುತಗಳು. ವಿವಿಧ ಹೆಸರುಗಳಿಂದ ಅಪ್ಪಳಿಸುವ ಚಂಡಮಾರುತಗಳಿಗೆ ಹೆಸರಿಡುವವರು ಯಾರು? ಎಂಬ ಕುತೂಹಲ ಇದ್ದೇ ಇದೆ ಅಲ್ವೇ?. ಭಾರತೀಯ ಹವಾಮಾನ ಇಲಾಖೆ (IMD) 169 ಸೈಕ್ಲೋನ್ಗಳಿಗೆ (ಚಂಡಮಾರುತ) ವಿವಿಧ ಹೆಸರುಗಳಿಂದ ಗುರುತಿಸುವ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಿಂದ ಬರುವ ಸೈಕ್ಲೋನ್ಗಳ ಹೆಸರೂ ಕೂಡಾ ಇದೆ.
ಪ್ರತಿ ಸೈಕ್ಲೋನ್ಗಳೂ ಕೂಡಾ ಸಮುದ್ರವನ್ನು ದಾಟಿಯೇ ಬರುತ್ತದೆ. ಹೀಗಾಗಿ ಪ್ರಾದೇಶಿಕ ಹವಾಮಾನ ಇಲಾಖೆ (RSMCs), ಉಷ್ಣವಲಯ ಚಂಡಮಾರುತ ಎಚ್ಚರಿಕೆ ಕೆಂದ್ರಗಳು (TCWCs), ಭಾರತೀಯ ಹವಾಮಾನ ಇಲಾಖೆ (IMP) ಹಾಗೂ 5 TCWCs ಸೇರಿ ಸೈಕ್ಲೋನ್ಗಳಿಗೆ ಹೆಸರನ್ನು ಸೂಚಿಸುತ್ತವೆ.
ಹೊರಡಿಸಲಾದ ಸೈಕ್ಲೋನ್ಗಳ ವಿವಿಧ ಹೆಸರಿನ ಪಟ್ಟಿಯಲ್ಲಿ 13 ದೇಶಗಳಿಂದ ಸಲಹೆಗಳನ್ನು ಪಡೆದುಕೊಂಡಿದ್ದು, ‘ಅಂಫಾನ್’ ಎಂಬ ಹೊಸ ಸೈಕ್ಲೋನ್ ಹೆಸರೂ ಕೂಡಾ ಸೇರಿಕೊಂಡಿದೆ. ಈ ಸೈಕ್ಲೋನ್ ಬಂಗಾಳಕೊಲ್ಲಿಯಿಂದ ಬಂದು ಅಂಡಮಾನ್ ಸಮುದ್ರಕ್ಕೆ ಸೇರಿಕೊಳ್ಳುತ್ತದೆ.
ನೆನಪಿಟ್ಟಿಕೊಳ್ಳಲು ಸುಲಭವಾಗುವಂತೆ ಸೈಕ್ಲೋನ್ಗಳಿಗೆ ಹೆಸರನ್ನು ಇಡಲಾಗಿದೆ. ಹಾಗೆಯೇ ಮಾಧ್ಯಮ, ವಿಜ್ಞಾನ- ಸಂಸ್ಥೆಗಳಿಗೂ ವಿವಿಧ ಹೆಸರಿನ ಸೈಕ್ಲೋನ್ಗಳ ಪಟ್ಟಿ ಸಹಾಕಯವಾಗುತ್ತದೆ. ಒಂದು ಸೈಕ್ಲೋನ್ ಇದ್ದರೆ ಅದಕ್ಕೆ ಹೆಸರು ನೀಡುವುದು ಸುಲಭ. ಆದರೆ ಅದರ ಜೊತೆಗೆ ಇನ್ನೊಂದು ಸೈಕ್ಲೋನ್ ಸೇರಿಕೊಂಡರೆ ಅದಕ್ಕೆ ಹೆಸರು ನೀಡಲು ಗೊಂದಲ ಉಂಟಾಗುತ್ತದೆ.
ಹೆಸರಿಡುವುದು ಏಕೆ? ಅಷ್ಟಕ್ಕೂ ಚಂಡಮಾರುತಗಳಿಗೆ ಹೆಸರುಗಳನ್ನು ಏಕೆ ನೀಡಬೆಕು ಎಂಬುದಕ್ಕೆ ಕೆವೊಂದಿಷ್ಟು ಕಾರಣಗಳು ಇವೆ. ಆಯಾ ಪ್ರದೇಶದಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ಅಪ್ಪಳಿಸುವ ಚಂಡಮಾರುತಗಳನ್ನು ಗುರುತಿಸಲು ಸುಭವಾಗಬೇಕು. ಆ ನಿರ್ದಿಷ್ಟ ಹೆಸರಿನಿಂದ ಸೂಚಿಸಲಾದ ಚಂಡಮಾರುತದ ಹಾನಿಯ ಕುರಿತಾಗಿ ಜನರಿಗೆ ಸುಲಭದಲ್ಲಿ ಅರ್ಥೈಸಬಹುದು. ಜನರಿಗೆ ವಿವಿಧ ಸೈಕ್ಲೋನ್ಗಳ ಕುರಿತಾದ ಸಂಪೂರ್ಣ ತಿಳುವಳಿಕೆ ಮತ್ತು ಅರಿವು ಮೂಡಿಸಲು ಬೇರೆ ಬೇರೆ ಹೆಸರುಗಳನ್ನು ಸೂಚಿಸಲಾಗುತ್ತದೆ. ಸೈಕ್ಲೋನ್ ಹೆಸರಿಸುವುದಕ್ಕೆ ಕೆಲವು ನಿಯಮಗಳಿವೆ. ಅವುಗಳ ಆಧಾರದ ಮೇಲೆ ಸೈಕ್ಲೋನ್ಗಳಿಗೆ ನಿರ್ದಿಷ್ಟ ಹೆಸರನ್ನು ಸೂಚಿಸಲಾಗುತ್ತದೆ.
ಸೈಕ್ಲೋನ್ಗಳಿಗೆ ಸೂಚಿಸುವ ಹೆಸರು ರಾಜಕೀಯಕ್ಕೆ ಸಂಬಂಧಿಸಿರಬಾರದು ಯಾವುದೇ ಮತ ಹಾಗೂ ಭಾವನೆಗಳಿಗೆ ಧಕ್ಕೆಯಾಗುವಂತಿರಬಾರದು ಹೆಸರು ಹೇಳಲು ಸುಲಭವಾಗಿರಬೇಕು ಮತ್ತು ಚಿಕ್ಕದಾಗಿರಬೇಕು ಹೆಸರು ಕ್ರೂರತೆಯನ್ನು ಸೂಚಿಸಬಾರದು ಗರಿಷ್ಠ 8 ಅಕ್ಷರಗಳ ಒಳಗಿರಬೇಕು ಒಂದು ಸೈಕ್ಲೋನ್ಗೆ ಇಟ್ಟ ಹೆಸರು ಪುನರಾವರ್ತನೆಯಾಗಬಾರದು
ಈ ಕುರಿತಂತೆ ಭಾರತವು ಕೆಲವು ಹೆಸರುಗಳನ್ನು ಸೂಚಿಸಿದ್ದು, ವಿವಿಧ ದೇಶಗಳು ವಿವಿಧ ಹೆಸರುಗಳನ್ನು ಸೂಚಿಸಿದೆ. ಹೆಸರುಗಳನ್ನು ಅಂತಿಮಗೊಳಿಸಲು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸಮಿತಿಯನ್ನು ರಚಿಸಲಾಗುತ್ತದೆ.
Published On - 1:34 pm, Fri, 14 May 21