ಆಗಸ್ಟ್​ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ 200 ಕೋಟಿ ಡೋಸ್ ಕೊವಿಡ್ ಲಸಿಕೆ ದೊರೆಯುವ ಸಾಧ್ಯತೆ

ದೇಶದಲ್ಲಿ ನಡೆಯುತ್ತಿರುವ ಕೊವಿಡ್ ವಿರುದ್ಧದ ಹೋರಾಟದಲ್ಲಿ ಈ ಲಸಿಕೆಗಳು ಬಹುಮುಖ್ಯ ಪಾತ್ರ ವಹಿಸಲಿವೆ ಎಂದು ಹೇಳಲಾಗಿದೆ.

ಆಗಸ್ಟ್​ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ 200 ಕೋಟಿ ಡೋಸ್ ಕೊವಿಡ್ ಲಸಿಕೆ ದೊರೆಯುವ ಸಾಧ್ಯತೆ
ಡಾ. ವಿ.ಕೆ.ಪೌಲ್​
Follow us
guruganesh bhat
|

Updated on:May 13, 2021 | 9:19 PM

ದೆಹಲಿ: ಮುಂದಿನ ಆಗಸ್ಟ್ ತಿಂಗಳಿಂದ ಡಿಸೆಂಬರ್ ತಿಂಗಳ ನಡುವೆ 200 ಕೋಟಿ ಡೋಸ್​ಗೂ ಹೆಚ್ಚು ಕೊವಿಡ್ ಲಸಿಕೆ ಭಾರತದಲ್ಲಿ ಲಭ್ಯವಾಗಲಿವೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ದೇಶದಲ್ಲಿ ನಡೆಯುತ್ತಿರುವ ಕೊವಿಡ್ ವಿರುದ್ಧದ ಹೋರಾಟದಲ್ಲಿ ಈ ಲಸಿಕೆಗಳು ಬಹುಮುಖ್ಯ ಪಾತ್ರ ವಹಿಸಲಿವೆ ಎಂದು ಹೇಳಲಾಗಿದೆ.

ಈ ಲಸಿಕೆಗಳ ಪೈಕಿ ಸೇರಮ್ ಇನ್ಸ್​ಟಿಟ್ಯೂಟ್​ನ 75 ಕೋಟಿ ಡೋಸ್​ ಆಸ್ಟ್ರೋಜೆನೆಕಾ, ಭಾರತ್ ಬಯೋಟೆಕ್​ನ 55 ಕೋಟಿ ಡೋಸ್ ಕೋವ್ಯಾಕ್ಸಿನ್​ ಲಸಿಕೆ ಇರಲಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ತಿಳಿಸಿದ್ದಾರೆ. ಒಟ್ಟು 216 ಕೋಟಿ ಡೋಸ್ ಲಸಿಕೆಗಳನ್ನು ಮುಂದಿನ ಅಗಸ್ಟ್​ನಿಂದ ಸೆಪ್ಟೆಂಬರ್​ ಅವಧಿಯಲ್ಲಿ ಉತ್ಪಾದನೆಯಾಗಲಿವೆ. ಇದು ದೇಶದ ಜನರನ್ನು ಕೊವಿಡ್​ನಿಂದ ರಕ್ಷಿಸಲು ಸಹಕಾರಿಯಾಗಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷದ ಮೊದಲ ತ್ರೈಮಾಸಿಕದ ವೇಳೆಗೆ 300 ಕೋಟಿ ಡೋಸ್ ಲಸಿಕೆ ಉತ್ಪಾದನೆಯಾಗಲಿದೆ ಎಂದು ಸಹ ಅವರು ತಿಳಿಸಿದ್ದಾರೆ.

ಮುಂದಿನ ಈ ಅವಧಿಗಳಲ್ಲಿ ಉತ್ಪಾದನೆ ಆಗಲಿರುವ ಲಸಿಕೆಗಳ ಪೈಕಿ ಬಯಾಲಾಜಿಕಲ್ ಇ ಸಂಸ್ಥೆಯ 30 ಕೋಟಿ ಲಸಿಕೆ, ಸೇರಮ್ ಇನ್ಸ್​ಟಿಟ್ಯೂಟ್​ನ 20 ಕೋಟಿ ನೊವಾವಾಕ್ಸ್ ಲಸಿಕೆ, 16 ಕೋಟಿ ಡೋಸ್ ಸ್ಪುಟ್ನಿಕ್ ವಿ ಲಸಿಕೆ, ಭಾರತ್ ಬಯೋಟೆಕ್​ನ 10 ಕೋಟಿ ಡೋಸ್ ನಸಲ್ ಲಸಿಕೆ, ಝೈಡಸ್ ಕ್ಯಾಡಿಲ್​ಲಾದ 5 ಕೋಟಿ ಡೋಸ್ ಲಸಿಕೆ, ಜಿನ್ನೋವಾದ 6 ಕೋಟಿ ಡೋಸ್ ಲಸಿಕೆಯೂ ಇರಲಿದೆ. ಅಮೆರಿಕಾ ಒಪ್ಪಿಗೆ ನೀಡಿದ ಯಾವುದೇ ಲಸಿಕೆಯನ್ನು ಭಾರತದಲ್ಲೂ ಬಳಕೆ ಮಾಡಬಹುದು. ಲಸಿಕೆ ಆಮದಿಗೆ ಸರ್ಕಾರ ಯಾವುದೇ ಸುಂಕ ವಿಧಿಸುತ್ತಿಲ್ಲ. ಒಂದೆರಡು ದಿನಗಳಲ್ಲಿಯೇ ಪರವಾನಗಿಯನ್ನೂ ನೀಡಲಾಗುತ್ತದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೊವಿಡ್ ನಿಯಂತ್ರಣ ಮತ್ತು ಲಸಿಕೆ ಬಳಕೆ ಬಗ್ಗೆ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯ ಪ್ರಮುಖಾಂಶಗಳು

Karnataka SSLC Exam 2021: ಜೂ.21ರಿಂದ ಪ್ರಾರಂಭವಾಗಬೇಕಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆ ಮುಂದೂಡಿಕೆ

(200 Crore Covid 19 shots to be available by end of 2021 says Union govt) 

Published On - 9:15 pm, Thu, 13 May 21