Gadkari on Petrol Price: ಹೀಗಾದರೆ ಪ್ರತಿ ಲೀಟರ್ ಪೆಟ್ರೋಲ್ ₹15 ಕ್ಕೆ ಮಾರಾಟ ಮಾಡಬಹುದು; ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?
ಸರಾಸರಿ ಶೇ.60ರಷ್ಟು ಎಥೆನಾಲ್ ಮತ್ತು ಶೇ.40ರಷ್ಟು ವಿದ್ಯುತ್ ತೆಗೆದುಕೊಂಡರೆ, ಪೆಟ್ರೋಲ್ ಪ್ರತಿ ಲೀಟರ್‌ಗೆ ₹ 15 ದರದಲ್ಲಿ ಲಭ್ಯವಿರುತ್ತದೆ. ಇದು ಜನರಿಗೆ ಪ್ರಯೋಜನವಾಗಲಿದೆ.
ಒಂದು ಲೀಟರ್ ಪೆಟ್ರೋಲ್ (Petrol) ₹ 15 ಕ್ಕೆ ಸಿಗುವಂತೆ ಮಾಡಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ಮಂಗಳವಾರ ರಾಜಸ್ಥಾನದ (Rajasthan) ಪ್ರತಾಪಗಢದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿಗದ ಗಡ್ಕರಿ ದೇಶಾದ್ಯಂತ ರೈತರನ್ನು “ಉರ್ಜಾದಾತ” (ಶಕ್ತಿ ಪೂರೈಕೆದಾರರು) ಆಗಲು ಸಬಲೀಕರಣಗೊಳಿಸುವ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. 60 ರಷ್ಟು ಎಥೆನಾಲ್ ಮತ್ತು 40 ರಷ್ಟು ವಿದ್ಯುತ್ ಮಿಶ್ರಣವನ್ನು ತೆಗೆದುಕೊಂಡರೆ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತದೆ ಎಂದ ಗಡ್ಕರಿ, ಎಥೆನಾಲ್ ಮತ್ತು ವಿದ್ಯುತ್ ಮಿಶ್ರಣವನ್ನು ಬಳಸಿಕೊಳ್ಳುವ ಅನುಕೂಲಗಳ ಬಗ್ಗೆ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದ್ದಾರೆ.
ರೈತರು ಅನ್ನದಾತರಷ್ಟೇ ಅಲ್ಲ, ಊರ್ಜದಾತರೂ ಆಗುತ್ತಾರೆ ಎಂಬ ಮನಸ್ಥಿತಿ ನಮ್ಮ ಸರ್ಕಾರದ್ದು. ಈಗ ಎಲ್ಲ ವಾಹನಗಳು ರೈತರು ಉತ್ಪಾದಿಸುವ ಎಥೆನಾಲ್‌ನಿಂದ ಓಡುತ್ತವೆ. ಸರಾಸರಿ ಶೇ.60ರಷ್ಟು ಎಥೆನಾಲ್ ಮತ್ತು ಶೇ.40ರಷ್ಟು ವಿದ್ಯುತ್ ತೆಗೆದುಕೊಂಡರೆ, ಪೆಟ್ರೋಲ್ ಪ್ರತಿ ಲೀಟರ್‌ಗೆ ₹ 15 ದರದಲ್ಲಿ ಲಭ್ಯವಿರುತ್ತದೆ. ಇದು ಜನರಿಗೆ ಪ್ರಯೋಜನವಾಗಲಿದೆ. ಅಂತಹ ಮಿಶ್ರಣವು ಮಾಲಿನ್ಯ ಮತ್ತು ಆಮದುಗಳನ್ನು ಕಡಿಮೆ ಮಾಡುವುದಲ್ಲದೆ ₹ 16 ಲಕ್ಷ ಕೋಟಿಗಳ ಬೃಹತ್ ಆಮದು ವೆಚ್ಚವನ್ನು ರೈತರಿಗೆ ಸಿಗುವಂತೆ ಮಾಡುತ್ತದೆ ಎಂದು ಗಡ್ಕರಿ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
#WATCH | Pratapgarh, Rajasthan | Union Minister Nitin Gadkari says, “Our government is of the mindset that the farmers become not only ‘annadata’ but also ‘urjadata’…All the vehicles will now run on ethanol produced by farmers. If an average of 60% ethanol and 40% electricity… pic.twitter.com/RGBP7do5Ka
— ANI (@ANI) July 5, 2023
ಗಡ್ಕರಿ ಅವರು ಪ್ರತಾಪಗಢದಲ್ಲಿ ಒಟ್ಟು ₹ 5,600 ಕೋಟಿಗಳ 11 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ್ದು, ಒಟ್ಟು 219 ಕಿ.ಮೀ ಉದ್ದದ ₹ 3,775 ಕೋಟಿ ವೆಚ್ಚದ ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಅವುಗಳಲ್ಲಿ ಅಜ್ಮೀರ್ ಮತ್ತು ಭಿಲ್ವಾರಾ ಜಿಲ್ಲೆಗಳಿಗೆ ಸಂಪರ್ಕವನ್ನು ಸುಧಾರಿಸಲು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಕಿಶನ್‌ಗಡ್‌ನಿಂದ ಗುಲ್ಬಾಪುರದವರೆಗೆ ಆರು ಪಥಗಳ ವಿಭಾಗವಾಗಿದೆ.
ಇದನ್ನೂ ಓದಿ: Bahubali Cattle Fence: ಹೆದ್ದಾರಿಗಳಲ್ಲಿ ಜಾನುವಾರುಗಳಿಂದಾಗುವ ಅಪಘಾತಗಳನ್ನು ತಪ್ಪಿಸಲು ‘ಬಾಹುಬಲಿ ಬೇಲಿ’ : ನಿತಿನ್ ಗಡ್ಕರಿ
ರಾಜಸ್ಥಾನದಲ್ಲಿ, ಕೇಂದ್ರ ರಸ್ತೆಗಳ ನಿಧಿಯಡಿ ₹ 2,250 ಕೋಟಿ ವೆಚ್ಚದಲ್ಲಿ 74 ಯೋಜನೆಗಳಿಗೆ ಅನುಮೋದನೆಯನ್ನು ಈ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Thu, 6 July 23