AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯ ರಸ್ತೆ ಮರುನಾಮಕರಣ: ಔರಂಗಜೇಬ್ ಲೇನ್ ಈಗ ಡಾ ಎಪಿಜೆ ಅಬ್ದುಲ್ ಕಲಾಂ ಲೇನ್‌

17 ನೇ ಶತಮಾನದ ಮೊಘಲ್ ಚಕ್ರವರ್ತಿ ಹೆಸರು ಲೇನ್‌ನ ಹೊಸ ಗುರುತಿಗೆ 'ಅನುಚಿತ' ಎಂದು ಪರಿಗಣಿಸಲಾಗಿದೆ. ಆ ಪ್ರದೇಶದ ಸಮಕಾಲೀನ ಸಂದರ್ಭದಲ್ಲಿ ಔರಂಗಜೇಬನಿಗೆ ಯಾವುದೇ ಪ್ರಸ್ತುತತೆ ಅಥವಾ ಸ್ಥಾನವಿಲ್ಲ ಎಂದು NDMC ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ಹೇಳಿದ್ದಾರೆ.

ದೆಹಲಿಯ ರಸ್ತೆ ಮರುನಾಮಕರಣ: ಔರಂಗಜೇಬ್ ಲೇನ್ ಈಗ ಡಾ ಎಪಿಜೆ ಅಬ್ದುಲ್ ಕಲಾಂ ಲೇನ್‌
ಡಾ ಎಪಿಜೆ ಅಬ್ದುಲ್ ಕಲಾಂ ಲೇನ್‌
ರಶ್ಮಿ ಕಲ್ಲಕಟ್ಟ
|

Updated on: Jul 06, 2023 | 2:06 PM

Share

ದೆಹಲಿ ನಗರದ ಮಧ್ಯಭಾಗದಲ್ಲಿರುವ ಔರಂಗಜೇಬ್ ಲೇನ್ (Aurangzeb Lane) ಅನ್ನು ಡಾ ಎಪಿಜೆ ಅಬ್ದುಲ್ ಕಲಾಂ ಲೇನ್‌ (Dr APJ Abdul Kalam Lane)  ಎಂದು ಮರುನಾಮಕರಣ ಮಾಡಲಾಗಿದೆ. ಕಳೆದ ವಾರ ಕರೆದಿದ್ದ ವಿಶೇಷ ಸಭೆಯಲ್ಲಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಈ ಬದಲಾವಣೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಒಂದು ಕಾಲದಲ್ಲಿ ಔರಂಗಜೇಬ್ ಲೇನ್ ಆಗಿದ್ದು ಇದನ್ನು 2015 ರಲ್ಲಿ ಡಾ ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಲಾಯಿತು. 17 ನೇ ಶತಮಾನದ ಮೊಘಲ್ ಚಕ್ರವರ್ತಿ ಹೆಸರು ಲೇನ್‌ನ ಹೊಸ ಗುರುತಿಗೆ ‘ಅನುಚಿತ’ ಎಂದು ಪರಿಗಣಿಸಲಾಗಿದೆ. ಆ ಪ್ರದೇಶದ ಸಮಕಾಲೀನ ಸಂದರ್ಭದಲ್ಲಿ ಔರಂಗಜೇಬನಿಗೆ ಯಾವುದೇ ಪ್ರಸ್ತುತತೆ ಅಥವಾ ಸ್ಥಾನವಿಲ್ಲ ಎಂದು NDMC ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ಹೇಳಿದ್ದಾರೆ.

ಎನ್‌ಡಿಎಂಸಿ ಪ್ರದೇಶದ ಅಡಿಯಲ್ಲಿ ‘ಔರಂಗಜೇಬ್ ಲೇನ್’ ಅನ್ನು ‘ಡಾ ಎಪಿಜೆ ಅಬ್ದುಲ್ ಕಲಾಂ ಲೇನ್’ ಎಂದು ಮರುನಾಮಕರಣ ಮಾಡಲು ಉಪ-ಕಲಂ (ಎ) ಪ್ರಕಾರ ಕೌನ್ಸಿಲ್‌ನ ಮುಂದೆ ಅಜೆಂಡಾ ಇರಿಸಲಾಗಿದೆ. ನವದೆಹಲಿ ಮುನ್ಸಿಪಲ್ ಆಕ್ಟ್, 1994 ರ ಸೆಕ್ಷನ್ 231 ರ ವಿಭಾಗ (1) ಔರಂಗಜೇಬ್ ಲೇನ್ ಅನ್ನು ಡಾ ಎಪಿಜೆ ಅಬ್ದುಲ್ ಕಲಾಂ ಲೇನ್ ಎಂದು ಮರುನಾಮಕರಣ ಮಾಡಲು ಕೌನ್ಸಿಲ್ ಅನುಮೋದಿಸಿದೆ ಎಂದು ನಾಗರಿಕ ಸಂಸ್ಥೆ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.

ಔರಂಗಜೇಬ್ ರಸ್ತೆಯನ್ನು ಮರು ನಾಮಕರಣ ಮಾಡುವ 2015 ರ ನಿರ್ಧಾರವನ್ನು ಕೆಲವು ಇತಿಹಾಸಕಾರರು ಟೀಕಿಸಿದ್ದಾರೆ. ಇದು ಇತಿಹಾಸದ ‘ಓರೆಯಾದ ದೃಷ್ಟಿಕೋನ’ವನ್ನು ಪ್ರತಿಬಿಂಬಿಸುತ್ತದೆ.ಇದು ಇತರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಅವರು ವಾದಿಸಿದ್ದಾರೆ.

ಇತಿಹಾಸದ ತಿಳುವಳಿಕೆಯ ಕೊರತೆಯಿಂದಾಗಿ ಮರು ನಾಮಕರಣದ ಕಸರತ್ತು ನಡೆದಿದೆ ಎಂದು ಖ್ಯಾತ ಇತಿಹಾಸ ತಜ್ಞೆ ನಾರಾಯಣಿ ಗುಪ್ತಾ ಹೇಳಿದ್ದಾರೆ. ಅಕ್ಬರ್ ಮತ್ತು ಷಹಜಹಾನ್ ರಂತಹ ಮೊಘಲ್ ದೊರೆಗಳ ಹೆಸರನ್ನು ಹೊಂದಿರುವ ರಸ್ತೆಯನ್ನು ನವದೆಹಲಿಯ ವಿನ್ಯಾಸದ ಸಮಯದಲ್ಲಿ ಬ್ರಿಟಿಷರಿಂದ ಗೊತ್ತುಪಡಿಸಲಾಯಿತು.

ಇದನ್ನೂ ಓದಿGadkari on Petrol Price: ಹೀಗಾದರೆ ಪ್ರತಿ ಲೀಟರ್ ಪೆಟ್ರೋಲ್ ₹15 ಕ್ಕೆ ಮಾರಾಟ ಮಾಡಬಹುದು; ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?

ಅಶೋಕನಂತಹ ಗೌರವಾನ್ವಿತ ಆಡಳಿತಗಾರರನ್ನು ಒಳಗೊಂಡಂತೆ ಈ ಹೆಸರುಗಳನ್ನು ಆ ಸಮಯದಲ್ಲಿ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸವನ್ನು ಬೋಧಿಸುತ್ತಿದ್ದ ಪ್ರಖ್ಯಾತ ಇತಿಹಾಸಕಾರ ಪರ್ಸಿವಲ್ ಸ್ಪಿಯರ್ ಸೂಚಿಸಿದರು. ಐತಿಹಾಸಿಕ ಸಂದರ್ಭವನ್ನು ಪರಿಗಣಿಸದೆ ಔರಂಗಜೇಬ್ ಅವರಂತಹ ಐತಿಹಾಸಿಕವಾಗಿ ಮಹತ್ವದ ಹೆಸರುಗಳನ್ನು ತೆಗೆದುಹಾಕುವುದರ ವಿರುದ್ಧ ವಾದಿಸಿದ ಗುಪ್ತಾ ಅವರು ಡಾ ಕಲಾಂ ಅವರಿಗೆ ಹೆಚ್ಚು ಸೂಕ್ತವಾದ ಗೌರವವಾಗಿ ವಿಜ್ಞಾನ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಸಲಹೆ ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ