Dalai Lama Birthday: ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರಧಾನಿ ಮೋದಿ
ಟಿಬೆಟಿಯನ್ ಧರ್ಮ ಗುರು ದಲೈ ಲಾಮಾ(Dalai Lama) ಅವರ 88ನೇ ವರ್ಷದ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.
ಟಿಬೆಟಿಯನ್ ಧರ್ಮ ಗುರು ದಲೈ ಲಾಮಾ(Dalai Lama) ಅವರ 88ನೇ ವರ್ಷದ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಶುಭ ಕೋರಿದ್ದಾರೆ. ದಲೈ ಲಾಮಾ ಅವರಿಗೆ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯ ನಿಮ್ಮದಾಗಲಿ ಎಂದು ಹಾರೈಸಿದ್ದಾರೆ. ತಮ್ಮ 88ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ದಲೈಲಾಮಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಎಂದು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಾವು ಬಯಸುತ್ತೇವೆ ಎಂದಿದ್ದಾರೆ.
ದಲೈ ಲಾಮಾ ಅವರು 1935ರ ಜುಲೈ 6 ರಂದು ಟಿಬೆಟ್ನಲ್ಲಿ ಜನಿಸಿದರು. 1959ರಲ್ಲಿ ಚೀನಾದ ಆಕ್ರಮಣಕಾರಿ ನಡೆಗೆ ಬೇಸತ್ತು ಟಿಬೆಟ್ನಿಂದ ಭಾರತಕ್ಕೆ ವಲಸೆ ಬಂದಿದ್ದರು. ಹಿಮಾಚಲ ಪ್ರದೇಶದ ಧರ್ಮಶಾಲಾ ಎಂಬಲ್ಲಿ ವಾಸವಿದ್ದರು, ಅವರಿಗೆ 1969ರಲ್ಲಿ ನೊಬೆಲ್ ಪ್ರಶಸ್ತಿ ದೊರೆತಿತ್ತು.
Spoke to His Holiness @DalaiLama and conveyed heartfelt greetings to him on his 88th birthday. Wishing him a long and healthy life.
— Narendra Modi (@narendramodi) July 6, 2023
ಅವರು 1959 ರಲ್ಲಿ ಟಿಬೆಟ್ ತೊರೆದಾಗಿನಿಂದ, ಟಿಬೆಟಿಯನ್ ಆಧ್ಯಾತ್ಮಿಕ ನಾಯಕ 50 ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣಿಸಿದ್ದಾರೆ ಮತ್ತು ಅವರ ರಾಜಕೀಯ ಮತ್ತು ಆಧ್ಯಾತ್ಮಿಕ ನಾಯಕರನ್ನು ಭೇಟಿ ಮಾಡಿದ್ದಾರೆ.
My warmest greetings to His Holiness the Dalai Lama on the occasion of his 88th birthday. I hope he will continue to spread kindness and empathy for countless years to come. @DalaiLama pic.twitter.com/Et79cePIkN
— Arvind Kejriwal (@ArvindKejriwal) July 6, 2023
1989 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ, 1991 ರಲ್ಲಿ ಯುನೈಟೆಡ್ ನೇಷನ್ಸ್ ಅರ್ಥ್ ಪ್ರಶಸ್ತಿ, 2007 ರಲ್ಲಿ ಯುಎಸ್ ಕಾಂಗ್ರೆಷನಲ್ ಚಿನ್ನದ ಪದಕ ಮತ್ತು 2012 ರಲ್ಲಿ ಟೆಂಪಲ್ಟನ್ ಪ್ರಶಸ್ತಿ ಸೇರಿದಂತೆ 150 ಕ್ಕೂ ಹೆಚ್ಚು ಪ್ರಮುಖ ಪ್ರಶಸ್ತಿಗಳು, ಬಹುಮಾನಗಳು ಮತ್ತು ಗೌರವ ಡಾಕ್ಟರೇಟ್‌ಗಳನ್ನು ಅವರಿಗೆ ಸಂದಿವೆ.
ಮತ್ತಷ್ಟು ಓದಿ: Dalai Lama: ಲಡಾಖ್ ಪ್ರವಾಸದ ಬೆನ್ನಲ್ಲೇ ಚೀನಾಗೆ ಮಹತ್ವದ ಸಂದೇಶ ರವಾನಿಸಿದ ದಲೈ ಲಾಮಾ
ದಲೈ ಲಾಮಾ ಅವರ ಜನ್ಮದಿನದ ಸಂದರ್ಭದಲ್ಲಿ ವಿಶ್ವ ನಾಯಕರು ಸೇರಿದಂತೆ ವಿಶ್ವದಾದ್ಯಂತದ ಅನುಯಾಯಿಗಳು ಅವರಿಗೆ ಶುಭಾಶಯ ಕೋರಿದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದಲೈಲಾಮಾ ಅವರಿಗೆ ಶುಭ ಹಾರೈಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Thu, 6 July 23