ತಿರುವನಂತಪುರಂ: ಪಿಎಫ್‌ಐ ಸಂಘಟನೆ (PFI)ಯನ್ನು ಬ್ಯಾನ್ ಮಾಡುವುದು ಒಂದೇ ಪರಿಹಾರವಲ್ಲ. ಆರ್‌ಎಸ್‌ಎಸ್ (RSS) ಸಹ ಬ್ಯಾನ್ ಆಗಬೇಕು ಎಂದು ಕೇರಳದ ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಆಗ್ರಹಿಸಿದ್ದಾರೆ. RSS ಕೂಡ ಭಾರತದಲ್ಲಿ ಹಿಂದೂ ಕೋಮುವಾದವನ್ನು ಹರಡುತ್ತಿದೆ. ಹೀಗಾಗಿ, ಸರ್ಕಾರ RSS, PFI ಎರಡನ್ನೂ ಸಮಾನವಾಗಿ ನಿಷೇಧಿಸಬೇಕು. ಅದು ಬಿಟ್ಟು ಪಿಎಫ್ಐಗೆ ಮಾತ್ರ ನಿಷೇಧ ಯಾಕೆ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಪಿಎಫ್‌ಐ ನಿಷೇಧವೊಂದೇ ಎಲ್ಲದಕ್ಕೂ ಪರಿಹಾರವಲ್ಲ. ಆರ್‌ಎಸ್‌ಎಸ್ ಕೂಡ ದೇಶದಾದ್ಯಂತ ಹಿಂದೂ ಕೋಮುವಾದವನ್ನು ಹರಡುತ್ತಿದೆ. ಆರ್‌ಎಸ್‌ಎಸ್ ಮತ್ತು ಪಿಎಫ್‌ಐ ಎರಡೂ ಸಮಾನವಾಗಿವೆ. ಆದ್ದರಿಂದ ಸರ್ಕಾರ ಎರಡನ್ನೂ ನಿಷೇಧಿಸಬೇಕು ಎಂದು ಕೇರಳದ ಸಂಸದ ಕೋಡಿಕುನ್ನಿಲ್ ಸುರೇಶ್ ಒತ್ತಾಯಿಸಿದ್ದಾರೆ.
I welcome the ban on (Popular Front of India) PFI by the Government of India.
The Government is firm in its resolve to ensure that anyone with a diabolical, divisive or disruptive design against India shall be dealt with iron fist.
India of Modi Era is Decisive & Bold.
— Himanta Biswa Sarma (@himantabiswa) September 28, 2022
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಅದರ ಭಯೋತ್ಪಾದಕ ಚಟುವಟಿಕೆಗಳಿಗಾಗಿ ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಕ್ರಮವು ಎಲ್ಲಾ ದೇಶವಿರೋಧಿ ಗುಂಪುಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ದೀರ್ಘಕಾಲದಿಂದ ಇದು ಈ ದೇಶದ ಜನರ ಬೇಡಿಕೆಯಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: Operation Octopus: ಪಿಎಫ್‌ಐ ವಿರುದ್ಧ ಎನ್‌ಐಎ 2ನೇ ಹಂತದ ದಾಳಿ, 8 ರಾಜ್ಯಗಳಲ್ಲಿ 170ಕ್ಕೂ ಹೆಚ್ಚು ಮಂದಿಯ ಬಂಧನ
ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಿಕೆ ಕಾಯಿದೆಯಡಿಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯ ಬುಧವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ರಿಹಬ್ ಇಂಡಿಯಾ ಫೌಂಡೇಶನ್ (RIF) ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ಕೆಲವು ಸಂಘಟನೆಗಳನ್ನು 5 ವರ್ಷಗಳ ಕಾಲ ನಿಷೇಧಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿರ್ಧಾರಕ್ಕೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಧನ್ಯವಾದ ಅರ್ಪಿಸಿದ್ದಾರೆ. ಪಿಎಫ್‌ಐ ಮಹಾರಾಷ್ಟ್ರದಲ್ಲೂ ಅಶಾಂತಿಯನ್ನು ಸೃಷ್ಟಿಸಿದೆ ಮತ್ತು ಕೋಮು ವಿಭಜನೆಯನ್ನು ಸೃಷ್ಟಿಸಲು ಯೋಜಿಸುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: PFI Banned: ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳ ನಿಷೇಧಕ್ಕೆ 15 ಕಾರಣಗಳು
ಮಂಗಳವಾರ, NIA ಭಾರತದ 15 ರಾಜ್ಯಗಳ 93 ಸ್ಥಳಗಳಲ್ಲಿ ಶೋಧ ನಡೆಸಿತ್ತು. ಆಂಧ್ರಪ್ರದೇಶ, ತೆಲಂಗಾಣ, ದೆಹಲಿ, ಕೇರಳ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ರಾಜಸ್ಥಾನ, ಹೈದರಾಬಾದ್, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಣಿಪುರದಲ್ಲಿ 100 ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಈ ತಿಂಗಳ ಆರಂಭದಲ್ಲಿ ಎನ್‌ಐಎ ಪಿಎಫ್‌ಐ ಜೊತೆ ನಂಟು ಹೊಂದಿರುವ 106 ಜನರನ್ನು ಬಂಧಿಸಲಾಗಿತ್ತು.