ಪಿಎಫ್​ಐ ಮೇಲೆ ನಮ್ಮ ಪೊಲೀಸರು ದಾಳಿ ನಡೆಸಿಲ್ಲ, ಇದು ಮುನ್ನೆಚ್ಚರಿಕೆ ಕಾರ್ಯಾಚರಣೆ: ಸಿಎಂ ಬಸವರಾಜ ಬೊಮ್ಮಾಯಿ

ತಹಶೀಲ್ದಾರ್ ಮೂಲಕವೇ ಪೊಲೀಸರು ಕಾನೂನಾತ್ಮಕವಾಗಿ ಅಗತ್ಯ ಕ್ರಮ ಜರುಗಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪಿಎಫ್​ಐ ಮೇಲೆ ನಮ್ಮ ಪೊಲೀಸರು ದಾಳಿ ನಡೆಸಿಲ್ಲ, ಇದು ಮುನ್ನೆಚ್ಚರಿಕೆ ಕಾರ್ಯಾಚರಣೆ: ಸಿಎಂ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 27, 2022 | 3:16 PM

ಬೆಂಗಳೂರು: ಕರ್ನಾಟಕದಲ್ಲಿ ಪಿಎಫ್​ಐ (PFI) ಮತ್ತು ಎಸ್​ಡಿಪಿಐ (SDPI) ಮೇಲೆ ನಡೆದಿರುವುದು ಪೊಲೀಸ್ ದಾಳಿ ಅಲ್ಲ, ಇದು ನಮ್ಮ ಪೊಲೀಸರು ಮುನ್ನೆಚ್ಚರಿಕೆಯಿಂದ ನಡೆಸಿರುವ ಕಾರ್ಯಾಚರಣೆ ಅಷ್ಟೇ. ತಹಶೀಲ್ದಾರ್ ಮೂಲಕವೇ ಪೊಲೀಸರು ಕಾನೂನಾತ್ಮಕವಾಗಿ ಅಗತ್ಯ ಕ್ರಮ ಜರುಗಿಸಿದ್ದಾರೆ. ಕರ್ನಾಟಕವಷ್ಟೇ ಅಲ್ಲ, ಇತರ ರಾಜ್ಯಗಳಲ್ಲಿಯೂ ಇಂಥ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು. ದೇವನಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕಿದೆ, ನಂತರ ಅಧಿಕೃತವಾಗಿ ಪ್ರತಿಕ್ರಿಯಿಸುತ್ತೇನೆ. ಪೊಲೀಸರಿಗೆ ವಿವಿಧೆಡೆಯಿಂದ ಹತ್ತು ಹಲವು ಮಾಹಿತಿ ಬಂದಿರುತ್ತವೆ ಎಂದು ಹೇಳಿದರು.

ದೇವನಹಳ್ಳಿ ಸಮೀಪ ಎಕ್ಸೈಡ್ ಕಂಪನಿಯ ಕಾರ್ಖಾನೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ತಾಲ್ಲೂಕಿನ ಹರಳೂರು ಗ್ರಾಮದ ಸಮೀಪ ಕಾರ್ಖಾನೆ ನಿರ್ಮಾಣವಾಗುತ್ತಿದೆ. ಸಚಿವ ಅಶ್ವತ್ಥ ನಾರಾಯಣ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರಚಕನಹಳ್ಳಿಯ ಕೋದಂಡರಾಮ ದೇಗುಲದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಆಯೋಜಿಸಿರುವ ಧನ್ವಂತರಿ ಯಜ್ಞದಲ್ಲಿಯೂ ಸಿಎಂ ಬೊಮ್ಮಾಯಿ ಭಾಗವಹಿಸಿದ್ದರು. ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಧನ್ವಂತರಿ ಮಹಾಯಜ್ಞದಲ್ಲಿ ಪೇಜಾವರ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳು ಉಪಸ್ಥಿರಿದ್ದಾರೆ. ಮಾಜಿ ಸಚಿವ ಕೆ.ಜೆ.ಜಾರ್ಜ್, ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಸಹ ಭಾಗವಹಿಸಿದ್ದರು.

ಕಾನೂನು ಕ್ರಮ ಕೈಗೊಳ್ಳದೇ ಮತ್ತೇನು ಮಾಡಬೇಕು: ಸುಧಾಕರ

ಮೈಸೂರು: ಪಿಎಫ್​ಐ ಮತ್ತು ಎಸ್​ಡಿಪಿಐ ಸಂಘಟನೆಗಳ ಕೆಲ ಕಾರ್ಯಕರ್ತರ ಮೇಲೆ ನಡೆದಿರುವ ದಾಳಿ ಮತ್ತು ಬಂಧನ ಕಾರ್ಯಾಚರಣೆ ಕುರಿತು ಆರೋಗ್ಯ ಸಚಿವ ಡಾ ಕೆ.ಸುಧಾಕರ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ. ಚುನಾಯಿತ ಪ್ರತಿನಿಧಿಗಳ ಮೇಲೆ ಹಲ್ಲೆ, ಹತ್ಯೆಗೆ ಸಂಚು ನಡೆಸುವವರ ವಿರುದ್ಧ ಕಾನೂನು ಕ್ರಮ ಜರುಗಿಸದೇ ಪೂಜೆ ಮಾಡಬೇಕೆ ಎಂದು ಅವರು ಪ್ರಶ್ನಿಸಿದರು.

ಸಮಾಜ ವಿರೋಧಿ ಕೃತ್ಯಗಳ ಬಗ್ಗೆ ಸಂಚು ಮಾಡುವವರನ್ನು ಯಾವಾಗಲೂ ಬಲಿ ಹಾಕಬೇಕು. ತಪ್ಪು ಮಾಡಿರುವವ ವಿರುದ್ಧ ಕಠಿಣ ಕ್ರಮ ನೂರಕ್ಕೆ ನೂರು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ತನಿಖೆಯ ನಂತರ ಮತ್ತಷ್ಟು ಜನರನ್ನು ಬಂಧಿಸುತ್ತೇವೆ. ನಮ್ಮಲ್ಲಿ ಅಶಾಂತಿ ಸೃಷ್ಟಿಸಿ ಧರ್ಮಗಳ ಮಧ್ಯೆ ಸಂಘರ್ಷಕ್ಕೆ, ಪ್ರಧಾನಿ ಹತ್ಯೆಗೂ ಸಂಚು ರೂಪಿಸಿದ್ದಾರೆ ಎನ್ನುವ ವರದಿಗಳಿವೆ. ಅವರು ಅಷ್ಟರಮಟ್ಟಿಗೆ ಸಮರ್ಥರಿದ್ದಾರಾ ಎಂದು ತನಿಖೆ ಮಾಡಬೇಕಿದೆ ಎಂದರು.

ಪಿಎಫ್​ಐ ಮತ್ತು ಎಸ್​ಡಿಪಿಐ ರಾಜ್ಯದಲ್ಲಿ ಈ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್ ಮುಖ್ಯ ಕಾರಣ ಎಂದು ಆರೋಪ ಮಾಡಿದರು. ವಿಶ್ವದಲ್ಲೇ ಪ್ರಧಾನಿ ಮೋದಿ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಆದರೆ ಸುಖಾಸುಮ್ಮನೆ ಕಾಂಗ್ರೆಸ್‌ನವರು ಟೀಕಿಸುತ್ತಾರೆ ಎಂದು ಹೇಳಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada