AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಕಿಸಾನ್​ ಯೋಜನೆಯ 9ನೇ ಕಂತು ಇಂದು ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂದಿದೆಯಾ ಎಂದು ಪರಿಶೀಲಿಸಲು ಹೀಗೆ ಮಾಡಿ

PM Kisan 9th Instalment: ಕೇಂದ್ರ ಸರ್ಕಾರ ಸದರಿ ಯೋಜನೆ ಅಡಿಯಲ್ಲಿ ರೈತರಿಗೆ ಬಿಡುಗಡೆ ಮಾಡುತ್ತಿರುವ 9 ನೇ ಕಂತು ಇದಾಗಿದ್ದು, ಇದರಲ್ಲಿ ರೈತರು ಕೇಂದ್ರದಿಂದ ಪ್ರತಿವರ್ಷ ಮೂರು ಕಂತುಗಳಲ್ಲಿ 6,000 ರೂಪಾಯಿಗಳ ಹಣಕಾಸಿನ ನೆರವು ಪಡೆಯುತ್ತಿದ್ದಾರೆ.

ಪಿಎಂ ಕಿಸಾನ್​ ಯೋಜನೆಯ 9ನೇ ಕಂತು ಇಂದು ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂದಿದೆಯಾ ಎಂದು ಪರಿಶೀಲಿಸಲು ಹೀಗೆ ಮಾಡಿ
ಪಿಎಂ ಕಿಸಾನ್ ಯೋಜನೆ
TV9 Web
| Edited By: |

Updated on: Aug 09, 2021 | 8:41 AM

Share

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ (PM Kisan Scheme) 9ನೇ ಕಂತು ಇಂದು (ಆಗಸ್ಟ್​ 09) ಬಿಡುಗಡೆಯಾಗಲಿದೆ. ಪಿಎಂ- ಕಿಸಾನ್ ನಿಧಿಯನ್ನು ಇಂದು ಬೆಳಗ್ಗೆ 11ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಆ ಮೂಲಕ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ 2,000 ರೂಪಾಯಿ ಜಮೆಯಾಗಲಿದೆ. ಕೇಂದ್ರ ಸರ್ಕಾರ ಸದರಿ ಯೋಜನೆ ಅಡಿಯಲ್ಲಿ ರೈತರಿಗೆ ಬಿಡುಗಡೆ ಮಾಡುತ್ತಿರುವ 9 ನೇ ಕಂತು (PM Kisan 9th Instalment) ಇದಾಗಿದ್ದು, ಇದರಲ್ಲಿ ರೈತರು ಕೇಂದ್ರದಿಂದ ಪ್ರತಿವರ್ಷ ಮೂರು ಕಂತುಗಳಲ್ಲಿ 6,000 ರೂಪಾಯಿಗಳ ಹಣಕಾಸಿನ ನೆರವು ಪಡೆಯುತ್ತಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನಾ ಸರ್ಕಾರದ ಯೋಜನೆಯಾಗಿದ್ದು, ಇದಕ್ಕೆ ಶೇಕಡಾ 100ರಷ್ಟು ಹಣಕಾಸು ಅನುದಾನವನ್ನು ಭಾರತ ಸರ್ಕಾರವೇ ಭರಿಸುತ್ತದೆ. 2018ನೇ ಇಸವಿಯ ಡಿಸೆಂಬರ್ 1ರಂದು ಆರಂಭಗೊಂಡ ಈ ಯೋಜನೆಯಡಿ 2 ಹೆಕ್ಟೇರ್​ ತನಕ ಒಟ್ಟಾರೆಯಾಗಿ ಭೂಮಿ ಇರುವ ಅಥವಾ ಮಾಲೀಕತ್ವ ಹೊಂದಿರುವ ಸಣ್ಣ ಹಾಗೂ ಕಿರು ರೈತರ ಕುಟುಂಬಗಳಿಗೆ ವಾರ್ಷಿಕವಾಗಿ 6000 ರೂಪಾಯಿಯನ್ನು ತಲಾ 2 ಸಾವಿರದಂತೆ ಮೂರು ಕಂತಿನಲ್ಲಿ ಪಾವತಿಸಲಾಗುತ್ತದೆ. ಮೊತ್ತವು ನೇರವಾಗಿ ಫಲಾನುಭವಿಗಳ ಬ್ಯಾಂಕ್​ ಖಾತೆಗೆ ವರ್ಗಾವಣೆ ಆಗುತ್ತದೆ.

ಅಂದಹಾಗೆ, ಈ ಯೋಜನೆಯಡಿ ಕೆಲವು ವರ್ಗವನ್ನು ಹೊರಗಿಡಲಾಗಿದೆ. ಇದು ದೇಶದ ಎಲ್ಲ ಅನ್ನದಾತರಿಗೆ ಸಿಗುವ ನೆರವಲ್ಲ. ಕಡಿಮೆ ಜಮೀನು ಹೊಂದಿರುವ ರೈತರು ಮಾತ್ರ ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗುವುದು ಸಾಧ್ಯ. ಅಧಿಕೃತ ಮೂಲಗಳ ಪ್ರಕಾರ ಸುಮಾರು 12.11 ಕೋಟಿ ರೈತರು ಆರ್ಥಿಕ ನೆರವು ಪಡೆಯಲಿದ್ದಾರೆ.

ಈಚಿನ ಕಂತು ಬಂದಿದೆಯೇ ಎಂಬುದನ್ನು ಪರಿಶೀಲಿಸಲು ಹಂತ ಹಂತವಾದ ವಿವರಣೆ ಹೀಗಿದೆ: 1. ಅಧಿಕೃತ ವೆಬ್​ಸೈಟ್​ www.pmkisan.gov.in ಭೇಟಿ ನೀಡಿ. 2. ಅಧಿಕೃತ ವೆಬ್​ಸೈಟ್​ನ ಹೋಮ್​ ಪೇಜ್​ನಲ್ಲಿ ಫಾರ್ಮರ್ಸ್​ ಕಾರ್ನರ್​ ಮೇಲೆ ಕ್ಲಿಕ್ ಮಾಡಬೇಕು. 3. ಬೆನಿಫಿಷಿಯರಿ ಲಿಸ್ಟ್ (ಫಲಾನುಭವಿಗಳ ಪಟ್ಟಿ) ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. 4. ರಾಜ್ಯ, ಜಿಲ್ಲೆ/ಉಪಜಿಲ್ಲೆ, ಬ್ಲಾಕ್​ ಮತ್ತು ಹಳ್ಳಿ ಈ ಮಾಹಿತಿಯನ್ನು ಸರಿಯಾಗಿ ಆರಿಸಬೇಕು. 5. Get Report ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. 6. ಸ್ಕ್ರೀನ್ ಮೇಲೆ ಕಾಣುವ ಬೆನಿಫಿಷಿಯರಿ ಲಿಸ್ಟ್ (ಫಲಾನುಭವಿ ಪಟ್ಟಿ) ಮೇಲೆ ಕ್ಲಿಕ್ ಮಾಡಬೇಕು. 7. ಹೆಸರನ್ನು ಪರಿಶೀಲಿಸಿ, ಖಾತ್ರಿ ಪಡಿಸಬೇಕು. 8. pmskny ಹೋಮ್​ಪೇಜ್​ಗೆ ಮರಳಬೇಕು. 9. ಬೆನಿಫಿಷಿಯರಿ ಸ್ಟೇಟಸ್ ಬಟನ್ ಮೇಲೆ ಮತ್ತೆ ಕ್ಲಿಕ್ ಮಾಡಬೇಕು. 10. ಆಧಾರ್ ಕಾರ್ಡ್ ಮಾಹಿತಿ ಅಥವಾ ಮೊಬೈಲ್ ನಂಬರ್ ಅಥವಾ ಅಕೌಂಟ್ ನಂಬರ್ ನಮೂದಿಸಬೇಕು. 11. get date ಬಟನ್ ಮೇಲೆ ಕ್ಲಿಕ್ ಮಾಡಬೇಕು. 12. ಕಂತಿನ ಸ್ಥಿತಿ ಏನು ಎಂಬುದರ ಬಗ್ಗೆ ಮಾಹಿತಿ ಸ್ಕ್ರೀನ್​ ಮೇಲೆ ಕಾಣಿಸುತ್ತದೆ.

(PM Kisan Scheme Narendra Modi to release PM Kisan 9th Instalment today know how to check)

ಇದನ್ನೂ ಓದಿ: PM Kisan Samman Nidhi: ಪಿಎಂ ಕಿಸಾನ್ ನಿಧಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? 

ವಾರ್ಷಿಕ 6 ಸಾವಿರ ಸಿಗುವ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿ ಹೇಗೆ? ಇಲ್ಲಿದೆ ವಿವರ

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ