ಐಎಂಡಿಯು ಭಾರತದ ಆಧುನಿಕ ವಿಜ್ಞಾನ, ತಂತ್ರಜ್ಞಾನ ಪ್ರಯಾಣದ ಸಂಕೇತ: ಮೋದಿ
ಭಾರತೀಯ ಹವಾಮಾನ ಇಲಾಖೆಯ 150ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ ‘ಮಿಷನ್ ಮೌಸಂ’ಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಇಂದು ಧನು ರಾಶಿಯಿಂದ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯನು ಕ್ರಮೇಣ ಉತ್ತರದ ಕಡೆಗೆ ಚಲಿಸುತ್ತಾನೆ. ನಮ್ಮ ಭಾರತೀಯ ಸಂಪ್ರದಾಯದಲ್ಲಿ ಇದನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ ಎಂದರು.
ಭಾರತೀಯ ಹವಾಮಾನ ಇಲಾಖೆಯು ಭಾರತದ ವೈಜ್ಞಾನಿಕ ಪ್ರಯಾಣದ ಸಂಕೇತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) 150 ನೇ ವಾರ್ಷಿಕೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಇಂದು ಮಿಷನ್ ಮೌಸಂ ಪ್ರಾರಂಭಿಸಿದರು. ವಿವಿಧ ಹವಾಮಾನ ಪರಿಸ್ಥಿತಿಗಳಿಗೆ ಮತ್ತು ಹವಾಮಾನ ಪ್ರಜ್ಞೆಗೆ ಭಾರತವನ್ನು ಸಿದ್ಧಪಡಿಸಲು ಈ ಕಾರ್ಯಾಚರಣೆಯನ್ನು ವಿನ್ಯಾಸಗೊಳಿಸಲಾಗಿದೆ.
ಭಾರತದಲ್ಲಿ ಕಳೆದ 10 ದಿನಗಳು ಹಾಗೂ ಮುಂದಿನ ಹತ್ತು ದಿನಗಳ ಹವಾಮಾನ ಹೇಗಿರಲಿದೆ ಎಂದು ತಿಳಿಸುಕೊಳ್ಳಬಹುದು. ಭವಿಷ್ಯದ ಭಾರತವು ಎಲ್ಲಾ ಹವಾಮಾನ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಬೇಕಿದೆ, ಕ್ಲೈಮೇಟ್ ಸ್ಮಾರ್ಟ್ ರಾಷ್ಟ್ರವಾಗಬೇಕಿದೆ ಹೀಗಾಗಿಯೇ ಮಿಷನ್ ಮೌಸಂ ಪ್ರಾರಂಭಿಸಲಾಗಿದೆ ಎಂದರು.
ಹತ್ತು ವರ್ಷಗಳ ಹಿಂದೆ ಕೇವಲ ಶೇ.10ರಷ್ಟು ರೈತರು ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಯಾವುದೋ ಮೂಲದಿಂದ ಪಡೆಯುತ್ತಿದ್ದರು, ಆದರೆ ಈಗ ಅದರ ಗಾತ್ರ ಶೇ.50ರಷ್ಟಾಗಿದೆ. ಸ್ಮಾರ್ಟ್ಫೋಷನ್, ವಾಟ್ಸ್ಆ್ಯಪ್ ಮೂಲಕವೂ ಹವಾಮಾನದ ಕುರಿತು ಮಾಹಿತಿ ಪಡೆಯಬಹುದಾಗಿದೆ.
ಇಂದು ಸಂಕ್ರಾಂತಿ ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ, ನಿಧಾನವಾಗಿ ಉತ್ತರದ ಕಡೆಗೆ ಶಿಫ್ಟ್ ಆಗುತ್ತಾನೆ ಅದನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. ಕೃಷಿಗಾಗಿ ಸಿದ್ಧತೆಗಳು ಪ್ರಾರಂಭವಾಗುತ್ತವೆ ಮತ್ತು ಅದಕ್ಕಾಗಿಯೇ ಭಾರತೀಯ ಸಂಪ್ರದಾಯದಲ್ಲಿ ಈ ದಿನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
#WATCH | Delhi: On the 150th Foundation Day of India Meteorological Department, Prime Minister Narendra Modi says “…Even warnings like lightning strikes have become possible for people to receive on their mobile phones. Earlier, when lakhs of fishermen used to go to sea, their… pic.twitter.com/KVXbe9UjMa
— ANI (@ANI) January 14, 2025
ಕೋಟಿಗಟ್ಟಲೆ ಭಾರತೀಯರಿಗೆ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ ಭಾರತದ ವೈಜ್ಞಾನಿಕ ಪ್ರಯಾಣದ ಸಂಕೇತವೂ ಆಗಿದೆ. ವೈಜ್ಞಾನಿಕ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳು ನವ ಭಾರತದ ನೀತಿಯ ಭಾಗವಾಗಿದೆ. ಆದ್ದರಿಂದ, ಕಳೆದ 10 ವರ್ಷಗಳಲ್ಲಿ, IMDಯ ಮೂಲಸೌಕರ್ಯ ಮತ್ತು ತಂತ್ರಜ್ಞಾನವು ಅಭೂತಪೂರ್ವವಾಗಿ ವಿಸ್ತರಿಸಿದೆ ಎಂದು ಹೇಳಿದರು.
ಮೊದಲು ಮೀನುಗಾರರು ಸಮುದ್ರಕ್ಕಿಳಿಯುತ್ತಿದ್ದಂತೆ ಮನೆಯವರಿಗೆಲ್ಲಾ ಆತಂಕ ಎದುರಾಗುತ್ತಿತ್ತು, ಆದರೆ ಈಗ ಹವಾಮಾನ ಇಲಾಖೆ ಮಾಹಿತಿಯಿಂದಾಗಿ ಅವರ ಕುಟುಂಬದವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ಮೋದಿ ಹೇಳಿದ್ದಾರೆ. ಭಾರತೀಯ ಹವಾಮಾನ ಇಲಾಖೆಯನ್ನು ಜನವರಿ 15 ರಂದು ಮಕರ ಸಂಕ್ರಾಂತಿಯಂದು ಸ್ಥಾಪಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನನ್ನ ನೆಚ್ಚಿನ ಹಬ್ಬ ಮಕರ ಸಂಕ್ರಾಂತಿ. ಭಾರತೀಯ ಸಂಪ್ರದಾಯದಲ್ಲಿ ಮಕರ ಸಂಕ್ರಾಂತಿಯ ಮಹತ್ವ ಎಲ್ಲರಿಗೂ ತಿಳಿದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:14 pm, Tue, 14 January 25