ಜಂಗಲ್ ರಾಜ್ ಜನರು ನಮ್ಮ ನಂಬಿಕೆಯನ್ನು ದ್ವೇಷಿಸುತ್ತಾರೆ; ಲಾಲು ಯಾದವ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

|

Updated on: Feb 24, 2025 | 5:13 PM

ಪ್ರಧಾನಿ ನರೇಂದ್ರ ಮೋದಿ ಇಂದು ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದರು. ಈ ವೇಳೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಿದರು. ಪ್ರಧಾನಮಂತ್ರಿ ಮೋದಿ ಭಾಗಲ್ಪುರದಿಂದ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 19ನೇ ಕಂತಿನ ಅಡಿಯಲ್ಲಿ 9.8 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 22,000 ಕೋಟಿ ರೂ.ಗಳನ್ನು ವರ್ಗಾಯಿಸಿದರು. ಈ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಜಂಗಲ್ ರಾಜ್ ಜನರು ನಮ್ಮ ನಂಬಿಕೆಯನ್ನು ದ್ವೇಷಿಸುತ್ತಾರೆ; ಲಾಲು ಯಾದವ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
Modi In Bihar
Follow us on

ಭಾಗಲ್ಪುರ: ಬಿಹಾರದ ಭಾಗಲ್ಪರದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19ನೇ ಕಂತನ್ನು ಬಿಡುಗಡೆ ಮಾಡಿದ ಬಳಿಕ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19ನೇ ಕಂತನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, “ಕಾಂಗ್ರೆಸ್ ಆಗಿರಲಿ ಅಥವಾ ‘ಜಂಗಲ್ ರಾಜ್’ ಜನರಾಗಿರಲಿ ರೈತರ ಸಮಸ್ಯೆಗಳು ಅವರಿಗೆ ಮುಖ್ಯವಲ್ಲ. ಮೊದಲು ಪ್ರವಾಹ, ಬರ ಅಥವಾ ಆಲಿಕಲ್ಲು ಮಳೆ ಬಂದಾಗ ಆ ಪಕ್ಷಗಳ ಜನರು ರೈತರನ್ನು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಿಡುತ್ತಿದ್ದರು. 2014ರಲ್ಲಿ ನೀವು ಎನ್‌ಡಿಎಯನ್ನು ಗೆಲ್ಲಿಸಿದಾಗ ನಾನು ಹಿಂದಿನ ಸರ್ಕಾರದ ರೀತಿ ಕೆಲಸ ಮಾಡುವುದಿಲ್ಲ ಎಂದು ನಾನು ಹೇಳಿದ್ದೆ. ಎನ್‌ಡಿಎ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಪ್ರಾರಂಭಿಸಿತು. ಇದರ ಅಡಿಯಲ್ಲಿ ವಿಪತ್ತು ಸಮಯದಲ್ಲಿ ರೈತರಿಗೆ 1.75 ಕೋಟಿ ರೂ. ಮೌಲ್ಯದ ಕ್ಲೇಮ್‌ಗಳನ್ನು ನೀಡಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಲಾಲು ಪ್ರಸಾದ್ ಯಾದವ್ ಕುಟುಂಬದ ಮೇಲೆ ವಾಗ್ದಾಳಿ ನಡೆಸಿದ್ದಾರೆ. “ಪಶುಗಳ ಮೇವು ತಿನ್ನುವವರು ಎಂದಿಗೂ ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಮಹಾ ಕುಂಭಮೇಳದ ಕುರಿತು ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರ ಅರ್ಥಹೀನ ಹೇಳಿಕೆ ವಿಷಾದಕರ. “ಜಂಗಲ್‌ರಾಜ್”ನಲ್ಲಿ ಭಾಗಿಯಾಗಿರುವ ಜನರು ಹಿಂದೂ ನಂಬಿಕೆ ಮತ್ತು ನಂಬಿಕೆಯನ್ನು ದ್ವೇಷಿಸುತ್ತಾರೆ. ಜಂಗಲ್ ರಾಜ್ ಅನ್ನು ಬೆಂಬಲಿಸುವ ಈ ಜನರು ನಮ್ಮ ಪರಂಪರೆ ಮತ್ತು ನಮ್ಮ ನಂಬಿಕೆಯನ್ನು ದ್ವೇಷಿಸುತ್ತಾರೆ” ಎಂದು ಪ್ರಧಾನಿ ಮೋದಿ ಹೇಳಿದರು.


ಎನ್‌ಡಿಎ ಸರ್ಕಾರ ಇದನ್ನು ಬದಲಾಯಿಸಿದೆ. ಈ ಹಿಂದೆ ಯೂರಿಯಾಕ್ಕಾಗಿ ರೈತರು ಲಾಠಿ ಚಾರ್ಜ್ ಎದುರಿಸುತ್ತಿದ್ದರು. ಯೂರಿಯಾದ ಕಪ್ಪು ಮಾರುಕಟ್ಟೆ ಇತ್ತು. ಇವತ್ತು ರೈತರಿಗೆ ಸಾಕಷ್ಟು ಗೊಬ್ಬರ ಸಿಗುತ್ತದೆ. ಕೊರೊನಾ ಸಮಯದಲ್ಲಿಯೂ ನಮಗೆ ರಸಗೊಬ್ಬರದ ಕೊರತೆ ಎದುರಾಗಲಿಲ್ಲ. ಎನ್‌ಡಿಎ ಸರ್ಕಾರ ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ. ಎನ್‌ಡಿಎ ಸರ್ಕಾರ ಇಲ್ಲದಿದ್ದರೆ, ಇಂದಿಗೂ ನಮ್ಮ ರೈತರು ರಸಗೊಬ್ಬರಕ್ಕಾಗಿ ಲಾಠಿ ಚಾರ್ಜ್ ಎದುರಿಸಬೇಕಾಗುತ್ತಿತ್ತು. ಇಂದಿಗೂ ಬರೌನಿ ಕಾರ್ಖಾನೆ ಮುಚ್ಚಲ್ಪಟ್ಟಿದೆ. ವಿದೇಶಗಳಲ್ಲಿ 3000 ರೂ.ಗೆ ಲಭ್ಯವಿರುವ ರಸಗೊಬ್ಬರ ಚೀಲ ಎನ್‌ಡಿಎ ಸರ್ಕಾರ 300 ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತಿದೆ. ನಮ್ಮ ಸರ್ಕಾರ ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ. ಯೂರಿಯಾ ಮತ್ತು ಡಿಎಪಿಯ ಹಣವನ್ನು ರೈತರು ಖರ್ಚು ಮಾಡಬೇಕಾಗಿತ್ತು ಆದರೆ ಕೇಂದ್ರ ಸರ್ಕಾರವೇ ಅದನ್ನು ಖರ್ಚು ಮಾಡುತ್ತಿದೆ. ನಿಮ್ಮ ಜೇಬಿನಿಂದ ಹೋಗಬೇಕಿದ್ದ 12 ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಬಜೆಟ್‌ನಿಂದ ನೀಡಿದೆ. ಅಂದರೆ, ಇಷ್ಟೊಂದು ಹಣ ದೇಶದ ರೈತರ ಜೇಬಿನಲ್ಲಿ ಉಳಿದಿದೆ. ಎನ್‌ಡಿಎ ಸರ್ಕಾರ ಇಲ್ಲದಿದ್ದರೆ, ನಿಮಗೆ ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆ ಸಿಗುತ್ತಿರಲಿಲ್ಲ. ಈ ಯೋಜನೆ ಆರಂಭವಾಗಿ 6 ವರ್ಷಗಳಾಗಿವೆ. ಇಲ್ಲಿಯವರೆಗೆ 3 ಲಕ್ಷ 70 ಸಾವಿರ ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದರಲ್ಲಿ ಯಾವುದೇ ಮಧ್ಯವರ್ತಿ ಇಲ್ಲ” ಎಂದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಬಳಿಕ ಪ್ರವಾಸಿಗರ ಸಂಖ್ಯೆ, ಆದಾಯ ಹೆಚ್ಚಳ: ಗಳಿಕೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನಕ್ಕೇರಿದ ಬಂಡೀಪುರ

“ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವುದರ ಜೊತೆಗೆ ಬಿಹಾರದ ಪವಿತ್ರ ಭೂಮಿಯ ನಮ್ಮ ರೈತ ಸಹೋದರ ಸಹೋದರಿಯರ ಖಾತೆಗಳಿಗೆ ಪಿಎಂ-ಕಿಸಾನ್ ಯೋಜನೆಯ 19ನೇ ಕಂತನ್ನು ನೀಡಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ರೈತರು ಎದುರಿಸುತ್ತಿರುವ ಪ್ರತಿಯೊಂದು ಸವಾಲನ್ನು ಪರಿಹರಿಸಲು ತಮ್ಮ ಸರ್ಕಾರ ಅವಿಶ್ರಾಂತವಾಗಿ ಶ್ರಮಿಸಿದೆ. ನಾನು ಯಾವಾಗಲೂ ಬಡವರು, ಅನ್ನದಾತರು, ಯುವಕರು ಮತ್ತು ಮಹಿಳೆಯರನ್ನು ಪ್ರಜಾಪ್ರಭುತ್ವದ 4 ಸ್ತಂಭಗಳೆಂದು ಪರಿಗಣಿಸಿದ್ದೇನೆ” ಎಂದು ಮೋದಿ ಹೇಳಿದರು.


“ದೇಶಾದ್ಯಂತ ರೈತರ ಬ್ಯಾಂಕ್ ಖಾತೆಗಳಿಗೆ ಒಂದೇ ಕ್ಲಿಕ್‌ನಲ್ಲಿ ಸುಮಾರು 22,000 ಕೋಟಿ ರೂಪಾಯಿಗಳನ್ನು ಕಳುಹಿಸಲಾಗಿದೆ. ನಾನು ಬಟನ್ ಕ್ಲಿಕ್ ಮಾಡಿದ ತಕ್ಷಣ, ಹಣ ವರ್ಗಾವಣೆಯನ್ನು ದೃಢೀಕರಿಸಲು ಜನರು ತಮ್ಮ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸುತ್ತಿರುವುದನ್ನು ನಾನು ನೋಡಿದೆ. ಆಗ ಅವರ ಕಣ್ಣುಗಳಲ್ಲಿ ಸಂತೋಷವನ್ನು ನಾನು ನೋಡಿದೆ. ಇಂದು ಬಿಡುಗಡೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಕಂತಿನಲ್ಲಿ ಬಿಹಾರದ 75 ಲಕ್ಷ ರೈತ ಫಲಾನುಭವಿಗಳು ಸಹ ಸೇರಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ 22,000 ಕೋಟಿ ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ

“ಎನ್‌ಡಿಎ ಸರ್ಕಾರದಿಂದಾಗಿ ರೈತರು ಸಬ್ಸಿಡಿ ದರದಲ್ಲಿ ಯೂರಿಯಾ ಪಡೆಯುತ್ತಿದ್ದಾರೆ. ಒಬ್ಬ ರೈತನಿಗೆ ಕೃಷಿಗೆ ಉತ್ತಮ ಬೀಜಗಳು, ಸಾಕಷ್ಟು ಮತ್ತು ಅಗ್ಗದ ರಸಗೊಬ್ಬರಗಳು, ನೀರಾವರಿ ಸೌಲಭ್ಯಗಳು, ರೋಗಗಳಿಂದ ಪ್ರಾಣಿಗಳನ್ನು ರಕ್ಷಿಸುವುದು ಮತ್ತು ವಿಪತ್ತುಗಳ ಸಮಯದಲ್ಲಿ ನಷ್ಟದಿಂದ ರಕ್ಷಣೆ ಅಗತ್ಯ. ಈ ಹಿಂದೆ, ರೈತರು ಈ ಎಲ್ಲಾ ಅಂಶಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟನ್ನು ಅನುಭವಿಸುತ್ತಿದ್ದರು. ಎನ್‌ಡಿಎ ಸರ್ಕಾರ ಈ ಪರಿಸ್ಥಿತಿಗಳನ್ನು ಬದಲಾಯಿಸಿದೆ” ಎಂದು ಮೋದಿ ಹೇಳಿದರು.


ಕಾಂಗ್ರೆಸ್ ಮತ್ತು ಜಂಗಲ್ ರಾಜ್ ಜನರು ಬಿಹಾರವನ್ನು ಹಿಂದಕ್ಕೆ ತಳ್ಳಿದರು. ಆದರೆ ಈಗ ಎನ್‌ಡಿಎ ಸರ್ಕಾರದ ನೇತೃತ್ವದಲ್ಲಿ, ಬಿಹಾರವು ಭಗವಾನ್ ಬುದ್ಧ ಮತ್ತು ಚಕ್ರವರ್ತಿ ಅಶೋಕನ ಕಾಲದಲ್ಲಿ ಹೊಂದಿದ್ದ ಅದೇ ಮನ್ನಣೆಯನ್ನು ಪಡೆಯಲಿದೆ. ಭಾಗಲ್ಪುರವು ಜಾಗತಿಕ ಜ್ಞಾನದ ಕೇಂದ್ರವಾಗಿತ್ತು ಎಂದು ಅವರು ಹೇಳಿದರು. ನಳಂದ ವಿಶ್ವವಿದ್ಯಾಲಯದ ಪ್ರಾಚೀನ ವೈಭವವನ್ನು ಆಧುನಿಕ ಭಾರತದೊಂದಿಗೆ ಸಂಪರ್ಕಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಕೇಂದ್ರ ಸರ್ಕಾರ ವಿಕ್ರಮಶಿಲಾ ವಿಶ್ವವಿದ್ಯಾಲಯವನ್ನು ಕೇಂದ್ರೀಯ ವಿಶ್ವವಿದ್ಯಾಲಯವನ್ನಾಗಿ ಮಾಡಲಿದೆ. ಈ ಕುರಿತ ಕೆಲಸವೂ ಆರಂಭವಾಗಿದೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ