AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಕಾನೂನಿಂದ ಪಾರಾಗಲು ವಿದೇಶಿ ಪೌರತ್ವ ಪಡೆದ ಲಲಿತ್ ಮೋದಿ; ಭಾರತಕ್ಕೆ ಕರೆತರುವುದೀಗ ಇನ್ನಷ್ಟು ಕಷ್ಟ!

ಭಾರತ ಬಿಟ್ಟು ಪರಾರಿಯಾಗಿರುವ ಉದ್ಯಮಿ ಲಲಿತ್ ಮೋದಿ ಈಗ ಪೆಸಿಫಿಕ್ ಮಹಾಸಾಗರದ ಸಣ್ಣ ದೇಶವಾದ ವನುವಾಟುವಿನ ಪೌರತ್ವವನ್ನು ಪಡೆದುಕೊಂಡಿರುವುದರಿಂದ, ಆತನನ್ನು ಭಾರತಕ್ಕೆ ವಾಪಾಸ್ ಕರೆತರುವುದು ಈಗ ಹೆಚ್ಚು ಕಷ್ಟಕರವಾಗಿದೆ. ಈಗ ಅವರು ಭಾರತದ ಪ್ರಜೆಯಲ್ಲ. ಅವರೀಗ ಪೌರತ್ವ ಪಡೆದಿರುವ ವನುವಾಟು ಭಾರತ ಅಥವಾ ಬೇರೆ ಯಾವುದೇ ದೇಶದೊಂದಿಗೆ ಹಸ್ತಾಂತರದ ಒಪ್ಪಂದವನ್ನು ಹೊಂದಿಲ್ಲದ ಕಾರಣ ಅವರ ಹಸ್ತಾಂತರಕ್ಕೆ ತೊಂದರೆಗಳು ಹೆಚ್ಚಾಗಬಹುದು.

ಭಾರತೀಯ ಕಾನೂನಿಂದ ಪಾರಾಗಲು ವಿದೇಶಿ ಪೌರತ್ವ ಪಡೆದ ಲಲಿತ್ ಮೋದಿ; ಭಾರತಕ್ಕೆ ಕರೆತರುವುದೀಗ ಇನ್ನಷ್ಟು ಕಷ್ಟ!
Lalit Modi
ಸುಷ್ಮಾ ಚಕ್ರೆ
|

Updated on: Feb 24, 2025 | 6:34 PM

Share

ನವದೆಹಲಿ: ಭಾರತದಿಂದ ಪರಾರಿಯಾಗಿರುವ ಲಲಿತ್ ಮೋದಿ ವಿದೇಶಿ ಪೌರತ್ವ ಪಡೆದಿದ್ದಾರೆ. ಲಲಿತ್ ಮೋದಿ 12 ವರ್ಷಗಳಿಂದ ಭಾರತದಿಂದ ತಲೆಮರೆಸಿಕೊಂಡಿದ್ದಾರೆ. ಈಗತು ಈಗ ಅವರು ಪೆಸಿಫಿಕ್ ಮಹಾಸಾಗರದ ಸಣ್ಣ ದೇಶವಾದ ವನುವಾಟುವಿನ ಪೌರತ್ವವನ್ನು ಪಡೆದಿದ್ದಾರೆ. ಈಗ ಲಲಿತ್ ಮೋದಿಯ ಗಡೀಪಾರಿಗೆ ತೊಂದರೆಗಳು ಹೆಚ್ಚಾಗಬಹುದು. ಒಟ್ಟಾರೆಯಾಗಿ, ಲಲಿತ್ ಮೋದಿಯನ್ನು ಭಾರತಕ್ಕೆ ಕರೆತರುವುದು ಹೆಚ್ಚು ಕಷ್ಟಕರವಾಗುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ ಅವರು ಈಗ ಭಾರತದ ಪ್ರಜೆಯಲ್ಲ, ವನುವಾಟುವಿನ ಪ್ರಜೆ.ಭಾರತದಲ್ಲಿ ಲಲಿತ್ ಮೋದಿ 125 ಕೋಟಿ ರೂ. ಹಗರಣದ ಆರೋಪ ಹೊತ್ತಿದ್ದಾರೆ. ಕಳೆದ 12 ವರ್ಷಗಳಿಂದ ಭಾರತೀಯ ಸಂಸ್ಥೆಗಳು ಲಲಿತ್ ಮೋದಿಯನ್ನು ಭಾರತಕ್ಕೆ ಕರೆತರಲು ಪ್ರಯತ್ನಿಸುತ್ತಿವೆ. ಆದರೆ ವಿದೇಶಿ ಪೌರತ್ವ ಪಡೆದ ಹಿನ್ನೆಲೆಯಲ್ಲಿ ಇದೀಗ ಲಲಿತ್ ಮೋದಿಯನ್ನು ಭಾರತಕ್ಕೆ ಕರೆತರುವುದು ಹೆಚ್ಚು ಕಷ್ಟಕರವಾಗಬಹುದು.

ಲಲಿತ್ ಮೋದಿ ಅವರ ಹೊಸ ಪಾಸ್‌ಪೋರ್ಟ್ ಸಂಖ್ಯೆ RV0191750. ಈ ಪಾಸ್‌ಪೋರ್ಟ್ ಅನ್ನು ಡಿಸೆಂಬರ್ 30, 2024ರಂದು ವನುವಾಟುದಿಂದ ನೀಡಲಾಗಿದೆ. ಭಾರತವು ವನುವಾಟು ಜೊತೆ ಯಾವುದೇ ಹಸ್ತಾಂತರ ಒಪ್ಪಂದವನ್ನು ಹೊಂದಿಲ್ಲ. ಲಲಿತ್ ಮೋದಿಯ ಹೊಸ ಪಾಸ್‌ಪೋರ್ಟ್ ಬಗ್ಗೆ ಭಾರತೀಯ ಏಜೆನ್ಸಿಗಳಿಗೂ ತಿಳಿದಿಲ್ಲ. ಟಿವಿ9 ಭಾರತವರ್ಷಕ್ಕೆ ಲಲಿತ್ ಮೋದಿಯ ಹೊಸ ಪಾಸ್‌ಪೋರ್ಟ್‌ನ ಪ್ರತಿ ಸಿಕ್ಕಿದೆ. ಇದು ಭಾರತೀಯ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಲಲಿತ್ ಮೋದಿ ಮಾಡಿದ ತಂತ್ರವಾಗಿದೆ. ಅವರು ಭಾರತದ ಹಿಡಿತದಿಂದ ತಪ್ಪಿಸಿಕೊಳ್ಳಲು ಈ ಪ್ಲಾನ್ ಮಾಡಿದ್ದಾರೆ. ಭಾರತವು ವನುವಾಟು ಜೊತೆ ಹಸ್ತಾಂತರ ಒಪ್ಪಂದವನ್ನು ಹೊಂದಿಲ್ಲ. ಆದ್ದರಿಂದ ಲಲಿತ್ ಮೋದಿಯನ್ನು ಬಂಧಿಸುವ ಪ್ರಕ್ರಿಯೆಯು ಇನ್ನು ಸುಲಭವಲ್ಲ.

ಇದನ್ನೂ ಓದಿ: ಶಶಿ ತರೂರ್ ಪತ್ನಿಗೆ ಪುಕ್ಸಟ್ಟೆ ಐಪಿಎಲ್ ತಂಡದ ಷೇರು, ಪ್ರಶ್ನಿಸಿದ ನನ್ನನ್ನು ಬೆದರಿಸಿದ್ದರು: ಲಲಿತ್ ಮೋದಿ

ಲಲಿತ್ ಮೋದಿ ಯಾವಾಗ ಮತ್ತು ಏಕೆ ಪರಾರಿಯಾದರು?:

ಲಲಿತ್ ಮೋದಿ 2010ರಲ್ಲಿ ಭಾರತವನ್ನು ತೊರೆದು ಲಂಡನ್‌ಗೆ ಹೋದರು. ಅವರ ವಿರುದ್ಧ ಆರ್ಥಿಕ ಅಕ್ರಮಗಳು, ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪಗಳಿವೆ. ಲಲಿತ್ ಮೋದಿ ವಿರುದ್ಧದ ಹಲವಾರು ಪ್ರಕರಣಗಳ ತನಿಖೆಯನ್ನು ಜಾರಿ ನಿರ್ದೇಶನಾಲಯ (ED) ನಡೆಸುತ್ತಿದೆ. ಭಾರತದ ನ್ಯಾಯಾಲಯಗಳು ಲಲಿತ್ ಮೋದಿಗೆ ಕಾನೂನಿನ ಮುಂದೆ ಹಾಜರಾಗಲು ಆದೇಶಗಳನ್ನು ಹೊರಡಿಸಿವೆ. ಐಪಿಎಲ್ ಮಾಧ್ಯಮ ಹಕ್ಕುಗಳು ಮತ್ತು ತಂಡದ ಫ್ರಾಂಚೈಸಿ ಒಪ್ಪಂದಗಳ ಮೂಲಕ ಅವರು ಕೋಟ್ಯಂತರ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Lalit Modi Acquires Foreign Citizenship

Lalit Modi Acquires Foreign Citizenship

ಲಲಿತ್ ಮೋದಿ ವಿರುದ್ಧದ ಪ್ರಕರಣಗಳು ಯಾವುವು?:

ಭಾರತ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯವು ಲಲಿತ್ ಮೋದಿಯನ್ನು ಭಾರತಕ್ಕೆ ಕರೆತರಲು ಬಹಳ ಸಮಯದಿಂದ ಪ್ರಯತ್ನಿಸುತ್ತಿವೆ. ಆದರೆ ಈಗ ಅವರು ವನುವಾಟು ಪೌರತ್ವವನ್ನು ಪಡೆದಿರುವುದರಿಂದ ಈ ಪ್ರಕ್ರಿಯೆಯು ಹೆಚ್ಚು ಕಷ್ಟಕರವಾಗಿದೆ. ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

ಹಣ ಅಕ್ರಮ ವರ್ಗಾವಣೆ: ಐಪಿಎಲ್ ಮಾಧ್ಯಮ ಹಕ್ಕುಗಳು ಮತ್ತು ಪ್ರಸಾರ ಒಪ್ಪಂದದಲ್ಲಿ ಭಾರಿ ಆರ್ಥಿಕ ಅಕ್ರಮಗಳ ಆರೋಪ.

ವಿದೇಶಿ ವಿನಿಮಯ ಕಾಯ್ದೆ (FEMA) ಉಲ್ಲಂಘನೆ: ಅನುಮತಿಯಿಲ್ಲದೆ ಕೋಟ್ಯಂತರ ರೂಪಾಯಿಗಳನ್ನು ವಿದೇಶಕ್ಕೆ ರವಾನಿಸಿದ ಪ್ರಕರಣ.

ಬೇನಾಮಿ ಆಸ್ತಿಗಳು: ಲಲಿತ್ ಮೋದಿ ವಿದೇಶದಲ್ಲಿ ಅಕ್ರಮವಾಗಿ ಆಸ್ತಿ ಖರೀದಿಸಿದ್ದಾರೆ.

ಲಲಿತ್ ಮೋದಿ ವನುವಾಟುವನ್ನೇ ಆರಿಸಿಕೊಂಡಿದ್ದೇಕೆ?:

ವನುವಾಟು ಪೆಸಿಫಿಕ್ ಮಹಾಸಾಗರದಲ್ಲಿರುವ ಒಂದು ಸಣ್ಣ ದ್ವೀಪ ರಾಷ್ಟ್ರವಾಗಿದ್ದು, ಇದನ್ನು ಸಾಮಾನ್ಯವಾಗಿ “ತೆರಿಗೆ ಸ್ವರ್ಗ” ಎಂದು ಪರಿಗಣಿಸಲಾಗುತ್ತದೆ. ಈ ದೇಶವು “ಗೋಲ್ಡನ್ ವೀಸಾ ಕಾರ್ಯಕ್ರಮ”ವನ್ನು ನಡೆಸುತ್ತದೆ. ಇದು ವ್ಯಕ್ತಿಗಳು ಇಲ್ಲಿ ಜನರ ಆರ್ಥಿಕ ಹೂಡಿಕೆಗೆ ಬದಲಾಗಿ ಪೌರತ್ವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ವನುವಾಟು ಭಾರತ ಅಥವಾ ಇತರ ದೇಶಗಳೊಂದಿಗೆ ಹಸ್ತಾಂತರ ಒಪ್ಪಂದವನ್ನು ಹೊಂದಿಲ್ಲ. ಹೀಗಾಗಿ, ಇದು ಕಾನೂನು ತೊಂದರೆಗಳನ್ನು ಎದುರಿಸುತ್ತಿರುವವರಿಗೆ ಸುರಕ್ಷಿತ ಆಶ್ರಯ ತಾಣವಾಗಿದೆ.

ಇದನ್ನೂ ಓದಿ: ಹೆಚ್ಚು ಸಾಲ ವಸೂಲಿ: ಬ್ಯಾಂಕ್​ಗಳ ವಿರುದ್ಧವೇ ಕರ್ನಾಟಕ ಹೈಕೋರ್ಟ್​ ಮೆಟ್ಟಿಲೇರಿದ ಮಲ್ಯ

ಭಾರತವು ಲಲಿತ್ ಮೋದಿಯನ್ನು ಮರಳಿ ಕರೆತರಲು ಸಾಧ್ಯವೇ?:

ಲಲಿತ್ ಮೋದಿಯನ್ನು ಮರಳಿ ಕರೆತರಲು ಭಾರತ ಸರ್ಕಾರ ಇನ್ನೂ ರಾಜತಾಂತ್ರಿಕ ಮತ್ತು ಕಾನೂನು ಕ್ರಮಗಳನ್ನು ಅನುಸರಿಸಬಹುದು. ಆದರೆ ವನುವಾಟು ಜೊತೆ ಹಸ್ತಾಂತರ ಒಪ್ಪಂದದ ಸಮಸ್ಯೆ ಅದನ್ನು ಅತ್ಯಂತ ಕಷ್ಟಕರವಾಗಿಸುತ್ತದೆ.

ಮುಂದಿನ ಆಯ್ಕೆಯೇನು?:

• ಲಲಿತ್ ಮೋದಿ ವಿರುದ್ಧ ರೆಡ್ ನೋಟಿಸ್ ಹೊರಡಿಸುವಂತೆ ಭಾರತ ಇಂಟರ್‌ಪೋಲ್‌ಗೆ ಮನವಿ ಮಾಡಬಹುದು.

• ವನುವಾಟು ಮೇಲೆ ರಾಜತಾಂತ್ರಿಕ ಒತ್ತಡ ಹೇರಬಹುದು.

•ಜಾಗತಿಕ ಹಣ ವರ್ಗಾವಣೆ ವಿರೋಧಿ ಕಾನೂನುಗಳ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ