AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚು ಸಾಲ ವಸೂಲಿ: ಬ್ಯಾಂಕ್​ಗಳ ವಿರುದ್ಧವೇ ಕರ್ನಾಟಕ ಹೈಕೋರ್ಟ್​ ಮೆಟ್ಟಿಲೇರಿದ ಮಲ್ಯ

ಸದ್ಯ ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್​ ಕಂಪನಿಗಳ ಹಾವಳಿ ಹೆಚ್ಚಾಗಿದೆ. ಸಾಲ ಮರುಪಾವತಿಸುವಂತೆ ಜನರ ಮನೆಗೆ ತೆರಳಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಸಾಲಗಾರರ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಇದರ ನಡುವೆ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಪಾವತಿಸಬೇಕಿರುವುದಕ್ಕಿಂತ ಮಿತಿ ಮೀರಿ ಸಾಲ ವಸೂಲಿ ಪ್ರಶ್ನಿಸಿ ಇದೀಗ ಬ್ಯಾಂಕ್​ಗಳ ವಿರುದ್ಧವೇ ಕರ್ನಾಟಕ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಹಾಗಾದ್ರೆ, ವಿಜಯ್ ಮಲ್ಯ ಸಲ್ಲಿಸಿದ ಅರ್ಜಿಯಲ್ಲೇನಿದೆ?

ಹೆಚ್ಚು ಸಾಲ ವಸೂಲಿ: ಬ್ಯಾಂಕ್​ಗಳ ವಿರುದ್ಧವೇ ಕರ್ನಾಟಕ ಹೈಕೋರ್ಟ್​ ಮೆಟ್ಟಿಲೇರಿದ ಮಲ್ಯ
ವಿಜಯ್ ಮಲ್ಯ, ಕರ್ನಾಟಕ ಹೈಕೋರ್ಟ್​
Ramesha M
| Edited By: |

Updated on:Feb 05, 2025 | 5:58 PM

Share

ಬೆಂಗಳೂರು, (ಫೆಬ್ರವರಿ 05): ಪಾವತಿಸಬೇಕಿರುವುದಕ್ಕಿಂತ ಹೆಚ್ಚು ಸಾಲ ವಸೂಲಿ ಪ್ರಶ್ನಿಸಿ ಬ್ಯಾಂಕ್​ಗಳ ವಿರುದ್ಧವೇ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ಕರ್ನಾಟಕ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಸಾಲದ ಮೊತ್ತ ಹಾಗೂ ವಸೂಲಿ ಮಾಡಿರುವ ಒಟ್ಟು ಮೊತ್ತದ ವಿವರ ನೀಡುವಂತೆ ಬ್ಯಾಂಕ್​ಗಳಿಗೆ ನಿರ್ದೇಶಿಸಬೇಕೆಂದು ಕೋರ್ಟ್​ಗೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದು, ಈ ಸಂಬಂಧ ಇಂದು (ಫೆಬ್ರವರಿ 05) ಮಲ್ಯ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿದ್ದು.ಈ ಸಂಬಂಧ ಕೋರ್ಟ್​, ಬ್ಯಾಂಕ್​ಗಳಿಗೆ ನೋಟಿಸ್ ಜಾರಿ ಮಾಡಿದೆ.

6200 ಕೋಟಿ ರೂಪಾಯಿ ಸಾಲ ಕೊಡಬೇಕಿತ್ತು, ಅದರಲ್ಲಿ 14,000 ಕೋಟಿ ರೂ. ವಸೂಲಾಗಿದೆ. ಹೀಗೆಂದು ಹಣಕಾಸು ಸಚಿವೆ ಲೋಕಸಭೆಗೆ ತಿಳಿಸಿದ್ದಾರೆ. ಸಾಲ ವಸೂಲಾತಿ ಅಧಿಕಾರಿ 10,200 ಕೋಟಿ ರೂಪಾಯಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ನೀಡುವಂತೆ ಬ್ಯಾಂಕ್​ಗಳಿಗೆ ನಿರ್ದೇಶಿಸಬೇಕೆಂದು ಕೋರ್ಟ್​ಗೆ ವಕೀಲ ಸಜನ್ ಪೂವಯ್ಯ ಮನವಿ ಮಾಡಿದರು.

ಅಲ್ಲದೇ ಹಣ ವಸೂಲಾತಿ ಪ್ರಕ್ರಿಯೆ ಮುಂದುವರಿದಿದ್ದು, ಪ್ರಾಥಮಿಕ ಸಾಲವನ್ನು ಪಾವತಿಸಲಾಗಿದೆಯೇ ಅಥವಾ ಇಲ್ಲವೇ ಎಂಬುವುದರ ಬಗ್ಗೆ ಯಾವುದೇ ಆದೇಶ ಮಾಡಲಾಗಿಲ್ಲ. ಆದ್ರೆ, ಸಾಲ ವಸೂಲಿ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ ಮಾಡಬೇಕು ಎಂದು ಮನವಿ ಮಾಡಿದರು.

ಇನ್ನು ವಿಜಯ್ ಮಲ್ಯ ಪರ ವಕೀಲ ಸಜನ್ ಪೂವಯ್ಯ ಅವರ ವಾದ ಆಲಿಸಿದ  ಕರ್ನಾಟಕ ಹೈಕೋರ್ಟ್​ ನ್ಯಾyಮೂರ್ತಿ ಆರ್. ದೇವದಾಸ್ ಅವರಿದ್ದ ಹೈಕೋರ್ಟ್ ಪೀಠ. ಬ್ಯಾಂಕ್​ಗಳು ಹಾಗೂ ಸಾಲ ವಸೂಲಾತಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ ಮುಂದಿನ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿದರು.

ಚೆನ್ನೈನ ಸಾಲ ವಸೂಲಾತಿ ನ್ಯಾಯಮಂಡಳಿಯ ವಸೂಲಾತಿ ಅಧಿಕಾರಿಗಳು, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡಾ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ದಿ ಫೆಡರಲ್‌ ಬ್ಯಾಂಕ್‌ ಲಿಮಿಟೆಡ್‌, ಐಡಿಬಿಐ ಬ್ಯಾಂಕ್‌ ಲಿಮಿಟೆಡ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಜಮ್ಮು ಅಂಡ್‌ ಕಾಶ್ಮೀರ್‌ ಬ್ಯಾಂಕ್‌ ಲಿಮಿಟೆಡ್‌, ಪಂಜಾಬ್‌ ಅಂಡ್‌ ಸಿಂದ್‌ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಯುಕೊ ಬ್ಯಾಂಕ್‌, ಜೆ ಎಂ ಫೈನಾನ್ಶಿಯಲ್‌ ಅಸೆಟ್‌ ರಿಕನಸ್ಟ್ರಕ್ಷನ್‌ ಕಂಪನಿ ಪ್ರೈ.ಲಿ., ಯುಬಿಎಚ್‌ಎಲ್‌ನ ಅಧಿಕೃತ ಲಿಕ್ವಿಡೇಟರ್‌ಗೆ ನ್ಯಾಯಾಲಯ ತುರ್ತು ನೋಟಿಸ್‌ ಜಾರಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Wed, 5 February 25

Follow Us
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​