ಥಿನ್ನರ್ ಸೇವಿಸಿ ಬಾಲಕ ಸಾವು: ಜಾತ್ರೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಸೂತಕದ ಛಾಯೆ
ಗ್ರಾಮದಲ್ಲಿ ಜಾತ್ರೆ ಇದ್ದು, ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ಹೀಗಾಗಿ ಮನೆಗೆ ಸುಣ್ಣ ಬಣ್ಣ ಬಳಿದು ಜಾತ್ರೆ ತಯಾರಿಯಲಿದ್ದರು. ಮನೆಯಲ್ಲಿ ಪೇಂಟಿಂಗ್ ಕೆಲಸ ನಡೆಯುತ್ತಿದ್ದ ವೇಳೆ ಮೂರು ವರ್ಷದ ಬಾಲಕ ಥಿನ್ನರ್ ಸೇವಿಸಿ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ಜಾತ್ರೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.

ರಾಯಚೂರು, ಫೆಬ್ರವರಿ 05: ಪೇಂಟ್‌ನಲ್ಲಿ ಬಳಸುವ ಥಿನ್ನರ್ ಸೇವಿಸಿ ಬಾಲಕ (Child) ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಹಿರೆಕೊಟ್ನೇಕಲ್‌ನಲ್ಲಿ ನಡೆದಿದೆ. ರಮೇಶ್ ನಾಯಕ್ ಪುತ್ರ ಶಿವಾರ್ಜುನ ನಾಯಕ್(3) ಮೃತ ಬಾಲಕ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಜಾತ್ರೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿದೀಗ ಸೂತಕದ ಛಾಯೆ ಆವರಿಸಿದೆ.
ಗ್ರಾಮದಲ್ಲಿ ಜಾತ್ರೆ ಹಿನ್ನೆಲೆ ಮನೆಗೆ ಪೇಂಟಿಂಗ್ ಮಾಡಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಬಾಲಕ ಶಿವಾರ್ಜುನ ಥಿನ್ನರ್ ಸೇವಿಸಿದ್ದಾನೆ. ಈ ವೇಳೆ ಶಿವಾರ್ಜುನ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಸ್ಥಳೀಯ ಮಾನ್ವಿ ಖಾಸಗಿ ಆಸ್ಪತ್ರೆಗೆ ಪೋಷಕರು ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಮೊದಲನೇ ಗಂಡನ ಮೇಲಿನ ಕೋಪಕ್ಕೆ 8 ವರ್ಷದ ಮಗನಿಗೆ ಬರೆ ಎಳೆದ ತಾಯಿ
ಗಂಡನ ಮೇಲಿನ ಕೋಪಕ್ಕೆ 8 ವರ್ಷದ ಮಗನಿಗೆ ತಾಯಿ ಬರೆ ಹಾಕಿರುವಂತಹ ಘಟನೆ ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ನಡೆದಿದೆ. ಕಳೆದ ಐದು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಕೃತ್ಯ ಬೆಳಕಿಗೆ ಬಂದಿದೆ. ಚಿತ್ರದುರ್ಗದ ಮಹಿಳಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಸ್ನೇಹಿತನೊಂದಿಗೆ ಸರಸ, ಸಂಸಾರದಲ್ಲಿ ವಿರಸ: ಪತ್ನಿಯನ್ನ ಏಳೆಂಟು ಬಾರಿ ಚುಚ್ಚಿ…ಚುಚ್ಚಿ ಕೊಂದ
ಕಳೆದ ಏಳು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ತಾಯಿ ನಗ್ಮಾ, ಬಳಿಕ ಎರಡನೇ ವಿವಾಹವಾಗಿದ್ದರು. ಎರಡನೇ ಮದುವೆ ಬಳಿಕ ಇಬ್ಬರು ಹೆಣ್ಮಕ್ಕಳ ಜನನವಾಗಿದೆ. ಮಾಜಿ ಗಂಡನ ಮೇಲಿನ ಸಿಟ್ಟಿನಿಂದ ಮಗನಿಗೆ ಬರೆ ಹಾಕಿದ್ದಾರೆ. ನಗ್ಮಾ ವಿರುದ್ಧ ಮಾಜಿ ಗಂಡ ಅನಿಲ (ಮುಭಾರಕ್)ನ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡನೇ ಗಂಡ ಇರ್ಫಾನ್ ಜೊತೆಗೂ ನಗ್ಮಾ ಕಿರಿಕಿರಿ ಮಾಡಿಕೊಂಡಿದ್ದಾರೆ.
ಟೈರ್ ಪಂಕ್ಚರ್ ಆಗಿ ಹೊಂಡಕ್ಕೆ ಉರುಳಿ ಬಿದ್ದ ಕಾರು: ಐವರು ವಿದ್ಯಾರ್ಥಿಗಳಿಗೆ ಗಾಯ
ಟೈರ್ ಪಂಕ್ಚರ್ ಆಗಿ ಹೊಂಡಕ್ಕೆ ಕಾರು ಉರುಳಿ ಬಿದ್ದ ಪರಿಣಾಮ ಐವರು ವಿದ್ಯಾರ್ಥಿಗಳು ಗಾಯಗಳಾಗಿರುವಂತಹ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಮುದ್ದನಹಳ್ಳಿ ಗೇಟ್ ಬಳಿ ನಡೆದಿದೆ. ಸದ್ಯ ಗಾಯಾಳುಗಳನ್ನು ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಸರ್ಕಾರಿ ಕೆಲ್ಸದಾಸೆಗೆ ಗಂಡನನ್ನೇ ಕೊಂದಳಾ ಪತ್ನಿ? 4 ತಿಂಗ್ಳು ಬಳಿಕ ಸಮಾಧಿಯಿಂದ ಕಳೆಬರಹ ಹೊರಕ್ಕೆ
ಅದೃಷ್ಟವಶಾತ್ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದವರು ಚೆನ್ನೈ ಮೂಲದ ವೈದ್ಯಕೀಯ ವಿದ್ಯಾರ್ಥಿಗಳು ಎನ್ನಲಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:02 pm, Wed, 5 February 25