AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಸಿ ಮದ್ವೆಯಾಗಿದ್ದ ಜೋಡಿ ಬಾಳಲ್ಲಿ ಅನುಮಾನದ ಬಿರುಗಾಳಿ, ಪ್ರಿಯಕರನಿಗೆ ಹೇಳಿ ಗಂಡನ ಕೊಲ್ಲಿಸಿದ ಪತ್ನಿ!

ಪ್ಲಿಪ್‌ಕಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆತ ಅದೊಬ್ಬಳನ್ನ ಪ್ರೀತಿಸಿ ಮದುವೆ ಆಗಿದ್ದ. ಜಾಲಿಯಾಗಿದ್ದ ಜೋಡಿ, ನಗುನಗುತ್ತಾ ಬದುಕನ್ನ ಎಂಜಾಯ್‌ ಮಾಡುತ್ತಿತ್ತು. ಆದ್ರೆ ಅನುಮಾನ ಅನ್ನೋದು ಇದೇ ಯುವ ಜೋಡಿಯನ್ನ ದೂರಾಗುವಂತೆ ಮಾಡಿತ್ತು. ಪರಸ್ಪರ ದೂರ ಆಗಿದ್ದ ಇದೇ ದಂಪತಿ ಬಾಳಲ್ಲಿ ಘೋರವೇ ಆಗಿದೆ. ಹೆಂಡ್ತಿಯನ್ನ ಬಿಟ್ಟು ಒಂಟಿಯಾಗಿದ್ದವನು ಇಂದು ಬರ್ಬರವಾಗಿ ಕೊಲೆ ಆಗಿದ್ದಾನೆ .

ಪ್ರೀತಿಸಿ ಮದ್ವೆಯಾಗಿದ್ದ ಜೋಡಿ ಬಾಳಲ್ಲಿ ಅನುಮಾನದ ಬಿರುಗಾಳಿ, ಪ್ರಿಯಕರನಿಗೆ ಹೇಳಿ ಗಂಡನ ಕೊಲ್ಲಿಸಿದ ಪತ್ನಿ!
ಸುಭಾಷ್‌- ಇಂದುಶ್ರೀ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Feb 04, 2025 | 8:40 PM

Share

ಚಿಕ್ಕಬಳ್ಳಾಪುರ , (ಫೆಬ್ರವರಿ 04): ಚಿಕ್ಕಬಳ್ಳಾಪುರ ತಾಲೂಕಿನ ಗೌಚೇನಹಳ್ಳಿಯ ಸುಭಾಷ್‌ಗೆ ಈಗಿನ್ನೂ 29 ವರ್ಷ ವಯಸ್ಸು. ಇದೇ ಸುಭಾಷ್‌ ವರ್ಷದ ಹಿಂದೆ ದೊಡ್ಡಬಳ್ಳಾಪುರದ ಆಚಾರ್ಲಹಳ್ಳಿಯ ಇಂದುಶ್ರೀಯನ್ನ ಪ್ರೀತಿಸಿ ಮದುವೆ ಆಗಿದ್ದ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಸಂಸಾರ ಇತ್ತು. ಪ್ಲಿಪ್‌ಕಾರ್ಟ್‌ನಲ್ಲಿ ಕೆಲಸ ಮಾಡ್ತಿದ್ದ ಸುಭಾಷ್‌, ಮನೆ ಖರ್ಚಿಗೆ ಹಣ ತಂದು ಕೊಡುತ್ತಿದ್ದ. ಆದ್ರೆ ಇದೇ ಸುಭಾಷ್‌ ಮೇಲೆ ಪತ್ನಿಗೆ ಅನುಮಾನ ಶುರುವಾಗಿತ್ತು. ಅಷ್ಟೇ ಅಲ್ಲ ಪತ್ನಿ ಮೇಲೆ ಸುಭಾಷ್‌ಗೂ ಅನುಮಾನ ಕಾಡ್ತಿತ್ತು. ನನ್ನ ಬಿಟ್ಟು ಬೇರೆಯವರ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಗಲಾಟೆ ಮಾಡಿಕೊಂಡ ಇಬ್ಬರು ಪರಸ್ಪರ ದೂರವಾಗಿದ್ದರು. ಹೀಗಿರುವಾಗ್ಲೇ ನಿನ್ನೆ ತಡರಾತ್ರಿ ಸುಭಾಷ್‌ ಕೊಲೆ ಆಗಿ ಹೋಗಿದ್ದಾನೆ.

ಇನ್ನು ಮನೆಗೆ ಆಸರೆಯಾಗಿದ್ದ ಸುಭಾಷನ ಕೊಲೆ ಸುದ್ದಿ ತಿಳಿದ ತಾಯಿ, ತಂಗಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಆವರಣದಲ್ಲಿ ಗೋಳಾಡಿದ್ದು, ಮನಕಲುಕುವಂತಿತ್ತು. ಸ್ವತಃ ಇಂದುಶ್ರೀಯ ತಮ್ಮ ಮನೋಜ್‍ಕುಮಾರ್ ಸೇರಿದಂತೆ ಪ್ರವೀಣ, ವಿಘ್ನೇಷ, ಗಿರೀಶ, ಅನಿಲ್, ಪ್ರಸಾದ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‍ಠಾಣೆಗೆ ಆಗಮಿಸಿ ಶರಣಾಗಿದ್ದಾರೆ. ಇನ್ನು ಘಟನೆಯಲ್ಲಿ 10 ಜನರು ಭಾಗಿಯಾಗಿದ್ದು, ಪೊಲೀಸರು ಎಲ್ಲರನ್ನೂ ಬಂಧಿಸಿದ್ದಾರೆ. ಮೋಹನ್, ಕಾರ್ತಿಕ, ನಂದ, ಸಿರೀಶ್, ನಂದ ಬಂಧಿತ ಆರೋಪಿಗಳಾಗಿದ್ದಾರೆ.

ಇದನ್ನೂ ಓದಿ: ಎದುರು ಮನೆ ವ್ಯಕ್ತಿ ಜತೆ ಲವ್ವಿಡವ್ವಿ: ಗೋಣಿಕೊಪ್ಪದ ಲಾಂಗ್..ಹಾಸನದ ಮೊಳೆ..ಆಂಟಿ ಆಟವೇ ಭೀಕರ..!

ಅಷ್ಟಕ್ಕೂ ಇಲ್ಲಿ ಸುಭಾಷ್‌ನ ಕತೆ ಮುಗಿಸಿದ್ದು ಬೇರೆ ಯಾರು ಅಲ್ಲ. ಸುಭಾಷ್‌ನ ಪತ್ನಿ ಇಂದುಶ್ರೀಯ ಸಹೋದರ ಮನೋಜ್‌ಕುಮಾರ್‌. ತನ್ನ ಪಟಾಲಂ ಕಟ್ಟಿಕೊಂಡು ಬಂದು ಭಾವನ ಕತೆ ಮುಗಿಸಿದ್ದ. ಅದೇ ಮನೋಜ್‌ಕುಮಾರ್‌ ತನ್ನ ಗ್ಯಾಂಗ್‌ ಜತೆ ಪೊಲೀಸರಿಗೆ ಶರಣಾಗಿದ್ದಾನೆ. ಈ ಕೊಲೆ ಕೇಸ್‌ನಲ್ಲಿ ಇಂದುಶ್ರೀ ಸಹೋದರ ಮಾತ್ರ ಭಾಗಿ ಆಗಿಲ್ಲ. ಪ್ರವೀಣ್‌ ಎನ್ನುವ ಮತ್ತೊಬ್ಬ ಆರೋಪಿಯೂ ಇದ್ದಾನೆ. ಈ ಪ್ರವೀಣ್‌ ಜತೆ ಇಂದುಶ್ರೀಗೆ ಅಕ್ರಮ ಸಂಬಂಧ ಇತ್ತಂತೆ. ಅದೇ ಪ್ರಿಯಕರನಿಗೆ ಹೇಳಿ ಗಂಡನನ್ನ ಕೊಲ್ಲಿಸಿರುವುದು ಗೊತ್ತಾಗಿದೆ. ಆ ಆ್ಯಂಗಲ್​ನಲ್ಲೂ ಪೊಲೀಸರು ತನಿಖೆ ನಡೆಸಿದ್ದಾರೆ.

ಸುಭಾಷ್‌ನ ಕೊಲೆ ಕೇಸ್‌ನಲ್ಲಿ 10 ಆರೋಪಿಗಳು ಭಾಗಿ ಆಗಿರೋದು ಗೊತ್ತಾಗಿದ್ದು, ಮನೋಜ್‍ಕುಮಾರ್ ಸೇರಿದಂತೆ ಪ್ರವೀಣ್‌, ವಿಘ್ನೇಶ್‌, ಗಿರೀಶ್‌, ಅನಿಲ್, ಪ್ರಸಾದ್ ಅನ್ನೋರು ಖಾಕಿಗೆ ಶರಣಾದ್ರೆ, ಮೋಹನ್, ಕಾರ್ತಿಕ್‌, ನಂದ, ಸಿರೀಶ್ ಅನ್ನೋರನ್ನ ಪೊಲೀಸರು ಬಂಧಿಸಿದ್ದಾರೆ . ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆ ಆಗಿದ್ದ ಜೋಡಿ ನಡುವೆ ಅನುಮಾನ ಅನ್ನೋದು ಕಂದಕ ಸೃಷ್ಟಿಸಿತ್ತು. ಈ ಕಂದಕದ ನಡುವೆ ಪತ್ನಿ ಕಡೆಯವರಿಂದಲೇ ಸುಭಾಷ್‌ ಕೊಲೆ ಆಗಿದ್ದು ನಿಜಕ್ಕೂ ದುರಂತ.

ದೊಡ್ಡಬಳ್ಳಾಪುರ ತಾಲ್ಲೂಕು ಆಚಾರ್ಲಹಳ್ಳಿ ಗ್ರಾಮದ ಇಂದುಶ್ರೀಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಆದರೆ ಕಳೆದ 6 ತಿಂಗಳಿನಿಂದ ನಿನಗೆ ಅನೈತಿಕ ಸಂಬಂಧವಿದೆಯೆಂದು ಅವಳು.. ನಿನಗೆ ಅನೈತಿಕ ಸಂಬಂಧವಿದೆಯೆಂದು ಇವನು. ಪರಸ್ಪರ ಮುನಿಸಿಕೊಂಡು ದೂರವಾಗಿದ್ದರು. ಇದೇ ವಿಚಾರದಲ್ಲಿ ನಿನ್ನೆ (ಫೆಬ್ರವರಿ 03) ತಡರಾತ್ರಿ ಸುಬಾಷನ ಕೊಲೆಯಾಗಿದೆ ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:12 pm, Tue, 4 February 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ