National Youth Day 2022: ಇಂದು ಪುದುಚೇರಿಯಲ್ಲಿ 25ನೇ ಯುವಜನ ಉತ್ಸವ ಉದ್ಘಾಟಿಸಲಿರುವ ಪ್ರಧಾನಿ ಮೋದಿ; ತಂತ್ರಜ್ಞಾನ ಕೇಂದ್ರ ಲೋಕಾರ್ಪಣೆ

ಸಭಾಂಗಣವನ್ನು ಸುಮಾರು 23 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 1000 ಜನರು ಸೇರಬಹುದಾದ ಸಾಮರ್ಥ್ಯದ ಸಭಾಂಗಣ ಇದಾಗಿದ್ದು, ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ಆದ್ಯತೆ ನೀಡುವುದಾಗಿ ಪಿಎಂಒ ತಿಳಿಸಿದೆ.

National Youth Day 2022: ಇಂದು ಪುದುಚೇರಿಯಲ್ಲಿ 25ನೇ ಯುವಜನ ಉತ್ಸವ ಉದ್ಘಾಟಿಸಲಿರುವ ಪ್ರಧಾನಿ ಮೋದಿ; ತಂತ್ರಜ್ಞಾನ ಕೇಂದ್ರ ಲೋಕಾರ್ಪಣೆ
ಪ್ರಧಾನಮಂತ್ರಿ ಮೋದಿ

ಇಂದು ಸ್ವಾಮಿ ವಿವೇಕಾನಂದರ ಜಯಂತಿ. ತನ್ನಿಮಿತ್ತ ರಾಷ್ಟ್ರಾದ್ಯಂತ ರಾಷ್ಟ್ರೀಯ ಯುವ ದಿನ (National Youth Day 2022) ಆಚರಣೆ ಮಾಡಲಾಗುತ್ತಿದೆ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪುದುಚೇರಿಯಲ್ಲಿ 25ನೇ ರಾಷ್ಟ್ರೀಯ ಯುವಜನ ಉತ್ಸವ (National Youth Festival) ಉದ್ಘಾಟನೆ ಮಾಡಲಿದ್ದಾರೆ. ಕೊವಿಡ್ 19 ಕಾರಣದಿಂದಾಗಿ ಈ ಬಾರಿ ಉತ್ಸವ ಇಂದು ಮತ್ತು ನಾಳೆ (ಜ.13) ವರ್ಚ್ಯುವಲ್​ ಆಗಿ ನಡೆಯಲಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ. ಇಂದು ಬೆಳಗ್ಗೆ 11ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ಮಾಡಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಬಳಿಕ ಭಾಷಣ ಮಾಡಲಿದ್ದಾರೆ.  ಅದಾದ ನಂತರ ಇಂದು ಪುದುಚೇರಿಯಲ್ಲಿ ತಂತ್ರಜ್ಞಾನ ಕೇಂದ್ರವೊಂದನ್ನು ಉದ್ಘಾಟಿಸುವರು. ಇದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯದಡಿ ಕಾರ್ಯ ನಿರ್ವಹಿಸಲಿದೆ. ಹಾಗೇ, ಪೆರುಂತಲೈವರ್ ಕಾಮರಾಜರ್ ಮಣಿಮಂಡಪಂ’ ಎಂಬ ಬಯಲು ರಂಗಮಂದಿರ  ಹೊಂದಿರುವ ಸಭಾಂಗಣವನ್ನೂ ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸುವರು.

ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ನಾನು ನಾಳೆ ಪುದುಚೇರಿಯಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಲಿದ್ದೇನೆ. ಸಮಾರಂಭ ಬೆಳಗ್ಗೆ 11ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಹೇಳಿದ್ದರು. ಇದೇ ಕಾರ್ಯಕ್ರಮದಲ್ಲಿ ಟೆಕ್ನಾಲಜಿ ಸೆಂಟರ್ ಉದ್ಘಾಟನೆ ಮಾಡಲಾಗುವುದು. ಇದು ಯುವಜನರಲ್ಲಿ ಕೌಶಲಾಭಿವೃದ್ಧಿಗೆ ಉತ್ತೇಜನ ನೀಡಲಿದೆ ಎಂದಿದ್ದರು. ಹಾಗೇ, ಸಭಾಂಗಣ ಉದ್ಘಾಟನೆಯ ಬಗ್ಗೆಯೂ ಮಾಹಿತಿ ನೀಡಿ, ಕೆಲವು ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.

ತಂತ್ರಜ್ಞಾನ ಕೇಂದ್ರವನ್ನು ಎಲೆಕ್ಟ್ರಾನಿಕ್​ ಸಿಸ್ಟಮ್​ ವಿನ್ಯಾಸ ಮತ್ತು ಉತ್ಪಾದನಾ (ESDM) ವಲಯವನ್ನು ಕೇಂದ್ರೀಕರಿಸಿ 122 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಯುವಜನರ ಕೌಶಲಾಭಿವೃದ್ಧಿ ಉತ್ತೇಜನ ಇದರ ಪ್ರಮುಖ ಗುರಿ. ವಾರ್ಷಿಕ 6400 ಮಂದಿಗೆ ತರಬೇತಿ ಕೊಡುವ ಸಾಮರ್ಥ್ಯ ಹೊಂದಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ. ಹಾಗೇ, ಸಭಾಂಗಣವನ್ನು ಸುಮಾರು 23 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 1000 ಜನರು ಸೇರಬಹುದಾದ ಸಾಮರ್ಥ್ಯದ ಸಭಾಂಗಣ ಇದಾಗಿದ್ದು, ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದೆ. ರಾಷ್ಟ್ರೀಯು ಯುವದಿನದ ನಿಮಿತ್ತ ಮೇರೆ ಸಪ್ನೋ ಕಾ ಭಾರತ್​ ಮತ್ತು ಅನ್​ಸಂಗ್​ ಹೀರೋಸ್​ ಆಫ್​ ಇಂಡಿಯನ್​ ಫ್ರೀಡಂ ಮೂಮೆಂಟ್​ (ನನ್ನ ಕನಸಿನ ಭಾರತ ಮತ್ತು ಸ್ವಾತಂತ್ರ್ಯ ಹೋರಾಟದ ಅಪ್ರತಿಮ ವೀರರು) ಎಂದ ವಿಷಯಗಳ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಇದಕ್ಕೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರಬಂಧಗಳು ಬಂದಿದ್ದವು. ಅವುಗಳಲ್ಲಿ ಆಯ್ಕೆ ಮಾಡಲಾದ ಪ್ರಬಂಧಗಳನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಲಿದ್ದಾರೆ.

ಇದನ್ನೂ ಓದಿ: Viral Video: ತಂದೆಗೆ ಮೇಕಪ್​ ಮಾಡಿದ ಮಗಳು; ವಿಡಿಯೋ ನೋಡಿ ಸಖತ್​ ಖುಷಿಪಟ್ಟ ನೆಟ್ಟಿಗರು

Published On - 9:37 am, Wed, 12 January 22

Click on your DTH Provider to Add TV9 Kannada