Ganga Expressway: ಇಂದು ಪ್ರಧಾನಿ ಮೋದಿ ಮತ್ತೆ ಉತ್ತರ ಪ್ರದೇಶಕ್ಕೆ ಭೇಟಿ; ಗಂಗಾ ಎಕ್ಸ್​ಪ್ರೆಸ್​ ವೇಗೆ ಶಂಕುಸ್ಥಾಪನೆ

ಯೋಜನೆಯ ವಿನ್ಯಾಸದ ಪ್ರಕಾರ ಎಕ್ಸ್​ಪ್ರೇಸ್​ ವೇಗೆ ಘರ್​ಮುಕ್ತೇಶ್ವರ್​​ನಲ್ಲಿ ಸೇತುವೆ ನಿರ್ಮಾಣವಾಗಲಿದೆ. ಇದು ಹಾಪುರ ಮತ್ತು ಬುಲಂದ್​ಶಹರ್​ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.

Ganga Expressway: ಇಂದು ಪ್ರಧಾನಿ ಮೋದಿ ಮತ್ತೆ ಉತ್ತರ ಪ್ರದೇಶಕ್ಕೆ ಭೇಟಿ; ಗಂಗಾ ಎಕ್ಸ್​ಪ್ರೆಸ್​ ವೇಗೆ ಶಂಕುಸ್ಥಾಪನೆ
ಪ್ರಧಾನಿ ಮೋದಿ
Follow us
TV9 Web
| Updated By: Lakshmi Hegde

Updated on: Dec 18, 2021 | 7:33 AM

ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ಮತ್ತೆ ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದು, ಅಲ್ಲಿನ ಶಹಜಾನ್​ಪುರದಲ್ಲಿ 36,230 ಕೋಟಿ ರೂಪಾಯಿ ವೆಚ್ಚದ ಗಂಗಾ ಎಕ್ಸ್​ಪ್ರೆಸ್​ ವೇ (Ganga Expressway) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಉತ್ತರಪ್ರದೇಶದ ಪಶ್ಚಿಮ ಮತ್ತು ಪೂರ್ವ ಭಾಗವನ್ನು ಸಂಪರ್ಕಿಸಲಿದ್ದು, ದೆಹಲಿ, ಹರ್ಯಾಣ  ಮತ್ತು ಬಿಹಾರಕ್ಕೆ ಉತ್ತರಪ್ರದೇಶವನ್ನು ಇನ್ನಷ್ಟು ಸಮೀಪ ಮಾಡಲಿದೆ.  ಈ ಗಂಗಾ ಎಕ್ಸ್​ಪ್ರೆಸ್​ ವೇ 594 ಕಿಮೀ ಉದ್ದ ಇರಲಿದ್ದು, 2020ರ ನವೆಂಬರ್​ 26ರಂದು ಯೋಗಿ ಆದಿತ್ಯನಾಥ್​ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿತ್ತು. 

ಇದೀಗ ನಿರ್ಮಾಣವಾಗಲಿರುವ ಎಕ್ಸ್​ಪ್ರೆಸ್​ ವೇ ಮೀರತ್​​ನಿಂದ ಪ್ರಾರಂಭವಾಗಲಿದ್ದು, ಹಾಪುರ, ಬುಲಂದ್​ಶಹರ್​, ಅಮ್ರೋಹಾ, ಸಂಭಲ್​, ಬಾದೌನ್​, ಶಹಜಹಾನ್‌ಪುರ, ಹರ್ದೋಯಿ, ಉನ್ನಾವೋ, ರಾಯ್ ಬರೇಲಿ ಮತ್ತು ಪ್ರತಾಪ್‌ಗಢಗಳ ಮೂಲಕ ಹಾದುಹೋಗಲಿದೆ. ರಾಜ್ಯದಲ್ಲಿರುವ ಉಳಿದ ಎಕ್ಸ್​ಪ್ರೆಸ್​​ವೇಗಳಂತೆ ಈ ಎಕ್ಸ್​ಪ್ರೆಸ್​ ವೇ ಕೂಡ ಏರ್​ಸ್ಟ್ರಿಪ್​ ಹೊಂದಿರಲಿದ್ದು, ವಿಮಾನಗಳ ತುರ್ತು ಭೂಸ್ಪರ್ಶಕ್ಕೆ ಅವಕಾಶ ಇರಲಿದೆ. ಈ ಏರ್​ಸ್ಟ್ರಿಲ್​ ಶಹಜಾನ್​ಪುರದಲ್ಲಿ 3.5ಕಿಮೀಗಳಷ್ಟು ಉದ್ದ ಇರಲಿದೆ.

ಯೋಜನೆಯ ವಿನ್ಯಾಸದ ಪ್ರಕಾರ ಎಕ್ಸ್​ಪ್ರೇಸ್​ ವೇಗೆ ಘರ್​ಮುಕ್ತೇಶ್ವರ್​​ನಲ್ಲಿ ಸೇತುವೆ ನಿರ್ಮಾಣವಾಗಲಿದೆ. ಇದು ಹಾಪುರ ಮತ್ತು ಬುಲಂದ್​ಶಹರ್​ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಅದರ ಹೊರತಾಗಿ ಗಂಗಾ ಎಕ್ಸ್​ಪ್ರೆಸ್​ ವೇ ಮಧ್ಯೆ, 9 ಸಾರ್ವಜನಿಕ ಅನುಕೂಲ ಕೇಂದ್ರಗಳು, 7 ರೈಲ್ವೆ ಮೇಲ್ಸೇತುವೆಗಳು, 14 ದೊಡ್ಡ ಸೇತುವೆಗಳು, 126 ಚಿಕ್ಕ ಸೇತುವೆಗಳು, 381 ಅಂಡರ್​ಪಾಸ್​ಗಳು ನಿರ್ಮಾಣವಾಗಲಿವೆ.

ರೈತರಿಂದ ಭೂಮಿ ಖರೀದಿ  ಗಂಗಾ ಎಕ್ಸ್​ಪ್ರೆಸ್​ ವೇ ನಿರ್ಮಣಕ್ಕಾಗಿ ಶೇ.94ರಷ್ಟು ಭೂಮಿಯನ್ನು ರೈತರಿಂದ ಖರೀದಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ. ಒಟ್ಟಾರೆ 7386 ಹೆಕ್ಟೇರ್​ ಭೂಮಿ ಬೇಕಾಗಿತ್ತು. ಅದನ್ನು ಒಟ್ಟು 82,750 ರೈತರಿಂದ ಖರೀದಿ ಮಾಡಲಾಗಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ಪೂರ್ವಾಂಚಲ ಎಕ್ಸ್​ಪ್ರೆಸ್​ ವೇ ಉದ್ಘಾಟನೆ ಮಾಡಿದ್ದರು. ಅದು ಉತ್ತರಪ್ರದೇಶದ ಪೂರ್ವ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಲು ಸಾಲು ಭೇಟಿ; ಮುಂದಿನ 15 ದಿನದಲ್ಲಿ 4 ಬಾರಿ ಪ್ರವಾಸ 

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ