PM Modi: ಹಿಮಾಚಲ ಪ್ರದೇಶದ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಪ್ರಧಾನಿ ನರೇಂದ್ರ ಮೋದಿ

|

Updated on: May 24, 2024 | 7:17 PM

Modi in Himachal Pradesh: ಹಿಮಾಚಲ ಪ್ರದೇಶದ ಸುಂದರವಾದ ಸ್ಥಳಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಬಿಜೆಪಿ ಲೋಕಸಭಾ ಚುನಾವಣೆ ಅಭ್ಯರ್ಥಿ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಅಲ್ಲಿನ ಸೌಂದರ್ಯದ ಬಗ್ಗೆ ಪ್ರಚಾರ ಮಾಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರವಾಸದಲ್ಲಿದ್ದು, ಅಲ್ಲಿನ ರಮಣೀಯ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

PM Modi: ಹಿಮಾಚಲ ಪ್ರದೇಶದ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಪ್ರಧಾನಿ ನರೇಂದ್ರ ಮೋದಿ
ಹಿಮಾಚಲ ಪ್ರದೇಶದ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಪ್ರಧಾನಿ ನರೇಂದ್ರ ಮೋದಿ
Follow us on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Prime Minister Narendra Modi) ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರವಾಸದಲ್ಲಿದ್ದಾರೆ. ಈ ವೇಳೆ ಹಿಮಾಚಲ ಪ್ರದೇಶದ (Himachal Pradesh) ಹಲವು ಪ್ರದೇಶಗಳಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಕ್ಯಾಮೆರಾದಲ್ಲಿ ಹಿಮಾಚಲ ಪ್ರದೇಶದ ಸೌಂದರ್ಯವನ್ನು ಸೆರೆಹಿಡಿಯುತ್ತಿರುವ ವಿಡಿಯೋವನ್ನು ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಮಣೀಯವಾದ ಹಿಮಾಚಲ ಪ್ರದೇಶ! ಬಿರುಸಿನ ಚುನಾವಣಾ ಪ್ರಚಾರದ ಮಧ್ಯೆ ಸುಂದರವಾದ ನೈಸರ್ಗಿಕ ಪರಿಸರದ ಕೆಲವು ನೋಟಗಳನ್ನು ಸೆರೆಹಿಡಿಯಲು ಸಾಧ್ಯವಾಯಿತು. ಹಿಮಾಚಲದಲ್ಲಿರುವ ನಾನು ಇಲ್ಲಿಗೆ ಈ ಹಿಂದೆ ಬಂದಾಗಿನ ಭೇಟಿಗಳ ನೆನಪುಗಳನ್ನು ಮೆಲುಕು ಹಾಕುತ್ತಿದ್ದೇನೆ. ಈ ರಾಜ್ಯದೊಂದಿಗೆ ನನ್ನ ಬಾಂಧವ್ಯ ತುಂಬಾ ಗಟ್ಟಿಯಾಗಿದೆ ಎಂದು ಮೋದಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಹಿಮಾಚಲ ಪ್ರದೇಶ ಉನ್ನತ ಶ್ರೇಣಿಯ ಪ್ರವಾಸಿ ತಾಣವಾಗಿ ರಾಜ್ಯದ ಭವಿಷ್ಯದ ಬಗ್ಗೆ ನಿರೀಕ್ಷೆ ಮತ್ತು ಉತ್ಸಾಹವನ್ನು ಉಂಟುಮಾಡುತ್ತದೆ. ಇಲ್ಲಿನ ಭೂದೃಶ್ಯಗಳು, ಶ್ರೀಮಂತ ಸಾಂಸ್ಕೃತಿಕತೆ ಮತ್ತು ಸುಸ್ಥಿರತೆಯ ಬದ್ಧತೆಯೊಂದಿಗೆ ಹಿಮಾಚಲ ಪ್ರದೇಶವು ಪ್ರಪಂಚದಾದ್ಯಂತದ ಪ್ರಯಾಣಿಕರ ಹೃದಯವನ್ನು ಸೆರೆಹಿಡಿಯಲು ಸಿದ್ಧವಾಗಿದೆ. ಇದು ವಿಶ್ವದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್, ಅಭಿವೃದ್ಧಿಯ ಬಾಗಿಲುಗಳನ್ನು ಮುಚ್ಚಿದೆ: ಮಂಡಿಯಲ್ಲಿ ಪ್ರಧಾನಿ ಮೋದಿ

ಹಿಮಾಚಲ ಪ್ರದೇಶದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಹಿಮಾಚಲ ಪ್ರದೇಶದಲ್ಲಿ ಹಲವು ಪ್ರಮುಖ ಬೌದ್ಧ ಸ್ಥಳಗಳಿವೆ. ದಲೈಲಾಮಾ ಅವರ ಹೆಸರು ಹೇಳಲು ಹೆದರುವಷ್ಟು ಅಂಜುಬುರುಕವಾಗಿತ್ತು ಕಾಂಗ್ರೆಸ್ ಸರ್ಕಾರ. ನಾನು ಆಗಾಗ ದಲೈಲಾಮಾ ಅವರೊಂದಿಗೆ ಮಾತನಾಡುತ್ತೇನೆ. ಅವರು ನಮ್ಮ ಶ್ರೀಮಂತ ಪರಂಪರೆಯ ಪ್ರಚಾರಕರು. ಭಾರತವು ಬುದ್ಧನ ದೇಶವಾಗಿದ್ದು, ಮೋದಿ ಸರ್ಕಾರವು ಈ ಪರಂಪರೆಯನ್ನು ಅತ್ಯಂತ ಉತ್ಸಾಹದಿಂದ ಪ್ರಚಾರ ಮಾಡಿದೆ. ಹಿಮಾಚಲದ ಪ್ರವಾಸೋದ್ಯಮಕ್ಕೂ ಇದರಿಂದ ಲಾಭವಾಗಲಿದೆ ಎಂದಿದ್ದಾರೆ.

ಹಿಮಾಚಲ ಪ್ರದೇಶದ ಲೋಕಸಭೆ ಚುನಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಾಹ್ನ ಸಿರ್ಮೌರ್ ಜಿಲ್ಲೆಯ ನಹಾನ್‌ನಲ್ಲಿ ಚುನಾವಣಾ ರ್ಯಾಲಿ ನಡೆಸಿದರು. ಇಲ್ಲಿ ಪ್ರಧಾನಿ ಮೋದಿ ಶಿಮ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಕಶ್ಯಪ್ ಪರ ಮತ ಯಾಚಿಸಿದರು. ತಮ್ಮ ಭಾಷಣದ ವೇಳೆ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸುಖು ಸರ್ಕಾರದ ವಿರುದ್ಧವೂ ಪ್ರಧಾನಿ ತೀವ್ರ ವಾಗ್ದಾಳಿ ನಡೆಸಿದರು. ನಾನು ನನ್ನ ಮನೆಗೆ ಬಂದಂತೆ ಭಾಸವಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಹಿಮಾಚಲವು ಗಡಿಗೆ ಹೊಂದಿಕೊಂಡ ಪ್ರದೇಶವಾಗಿದೆ. ಹಿಮಾಚಲ ಪ್ರದೇಶದ ಜನರಿಗೆ ಬಲಿಷ್ಠ ಸರ್ಕಾರದ ಅರ್ಥ ಗೊತ್ತಿದೆ. ಮೋದಿ ಅವರು ನಿಮಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ನಿಮಗೆ ಯಾವುದೇ ತೊಂದರೆ ಬರಲು ಬಿಡುವುದಿಲ್ಲ. ದುರ್ಬಲ ಸರ್ಕಾರವಿದ್ದ ಕಾಂಗ್ರೆಸ್ ಯುಗವನ್ನು ನೀವು ನೋಡಿದ್ದೀರಿ ಮತ್ತು ಆ ಸಮಯದಲ್ಲಿ ಪಾಕಿಸ್ತಾನ ನಮ್ಮ ಎದೆಯ ಮೇಲೆ ಕುಣಿಯುತ್ತಿತ್ತು ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ಅಮಿತ್ ಶಾಗೆ ಮೋದಿ ದಾರಿ ಕ್ಲಿಯರ್ ಮಾಡುತ್ತಿದ್ದಾರೆ; ಅರವಿಂದ್ ಕೇಜ್ರಿವಾಲ್

ಹಿಮಾಚಲದ ಪರ್ವತಗಳು ನನ್ನ ಉತ್ಸಾಹವನ್ನು ಹೆಚ್ಚಿಸುತ್ತವೆ. ಇಲ್ಲಿನ ಹಿಮಭರಿತ ಪರ್ವತಗಳು ತಂಪಾದ ಮನಸ್ಸಿನಿಂದ ಕೆಲಸ ಮಾಡಲು ಕಲಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ. ಭಾರತಮಾತೆಯ ಅವಮಾನವನ್ನು ನಾನು ಸಹಿಸಲಾರೆ. ಆದರೆ ಭಾರತ ಮಾತೆಯನ್ನು ಅವಮಾನಿಸಲು ಕಾಂಗ್ರೆಸ್​ಗೆ ಬಿಡುವುದಿಲ್ಲ. ಭಾರತ್ ಮಾತಾ ಕೀ ಜೈ ಮತ್ತು ವಂದೇ ಮಾತರಂ ಹೇಳಲು ಕಾಂಗ್ರೆಸ್‌ಗೆ ಸಮಸ್ಯೆಯಿದೆ. ಕಾಂಗ್ರೆಸ್ ಎಂದಿಗೂ ದೇಶಕ್ಕೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ಗಡಿ ಪ್ರದೇಶಗಳಿಗೆ ಕಾಂಗ್ರೆಸ್ ಗಿಂತ ಹಲವು ಪಟ್ಟು ಹೆಚ್ಚು ಹಣವನ್ನು ನೀಡಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ