ಗುಜರಾತ್‌ನ ಮೋಧೇರಾ ಗ್ರಾಮವನ್ನು ಭಾರತದ ಮೊದಲ ‘ಸೌರಶಕ್ತಿ ಚಾಲಿತ ಗ್ರಾಮ’ ಎಂದು ಘೋಷಿಸಿದ ನರೇಂದ್ರ ಮೋದಿ
ಉದ್ಘಾಟನೆಗೊಂಡ ಯೋಜನೆಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಡೈರಿ ಕ್ಷೇತ್ರ ಮತ್ತು ಪಾರಂಪರಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ ಎಂದು ಮೋದಿ ಹೇಳಿದರು.
ಗುಜರಾತ್‌ನ (Gujarat)ಮೆಹ್ಸಾನಾ ಜಿಲ್ಲೆಯ ಮೋಧೇರಾ ಗ್ರಾಮವನ್ನು (Modhera village) ಭಾರತದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದಾರೆ. ಪ್ರಧಾನಿಯವರು ಭಾನುವಾರ ಮೋಧೇರಾದಲ್ಲಿ ಅನೇಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ್ದಾರೆ. ಇದಾದ ನಂತರ ಮೆಹ್ಸಾನಾದ ಮೋಧೇರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಸೂರ್ಯ ದೇವಾಲಯದೊಂದಿಗೆ ಸಂಬಂಧ ಹೊಂದಿರುವ ಮೋಧೇರಾ ಸೌರಶಕ್ತಿಯ ದಾಪುಗಾಲುಗಳಿಗೂ ಹೆಸರುವಾಸಿಯಾಗಿದೆ. ಸೌರಶಕ್ತಿಯನ್ನು ಬಳಸಿಕೊಳ್ಳುವತ್ತ ದೊಡ್ಡ ಹೆಜ್ಜೆ ತೆಗೆದುಕೊಳ್ಳುವುದರಿಂದ ಮೋಧೇರಾಗೆ ಇದು ವಿಶೇಷ ದಿನ. ಉದ್ಘಾಟನೆಗೊಂಡ ಯೋಜನೆಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಡೈರಿ ಕ್ಷೇತ್ರ ಮತ್ತು ಪಾರಂಪರಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ ಎಂದು ಮೋದಿ ಹೇಳಿದರು. ಇಂದು ಶರದ್ ಪೂರ್ಣಿಮೆ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ ನಡೆಯುತ್ತಿರುವುದು ಶುಭ ಕಾಕತಾಳೀಯವಾಗಿದೆ ಎಂದು ಅವರು ಹೇಳಿದರು.
Gujarat | Now we will not pay for electricity, but start selling it & earn from it… Till a while back, the govt used to supply electricity to citizens but now, with the installation of solar panels, citizens will produce their own electricity: PM Modi in Modhera pic.twitter.com/GbnFXok2Re
— ANI (@ANI) October 9, 2022
ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ‘ಮೋಧೇರಾ ಮಾದರಿ’ ಬಗ್ಗೆ ಚರ್ಚೆಯಾಗುತ್ತಿದೆ. ಹಿಂದೆ, ಸೂರ್ಯ ದೇವಾಲಯದಿಂದಾಗಿ ಜಗತ್ತು ಮೋಧೇರಾವನ್ನು ತಿಳಿದಿತ್ತು. ಆದರೆ ಇನ್ನು ಮುಂದೆ ಇದನ್ನು ‘ಸೂರ್ಯಗ್ರಾಮ’ ಎಂದೂ ಕರೆಯಲಾಗುವುದುಎ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ದೇವಾಲಯವನ್ನು ನಾಶಮಾಡಲು ಹಲವಾರು ಪ್ರಯತ್ನಗಳನ್ನು ಮಾಡಲಾಯಿತು. ಇಂದು ಸೂರ್ಯ ದೇವಾಲಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಜಗತ್ತಿನಲ್ಲಿ ಸೌರಶಕ್ತಿಯ ಕುರಿತು ಜನರು ಚರ್ಚಿಸಿದಾಗಲೆಲ್ಲಾ, ಮೋಧೇರಾ ಅವರ ಚರ್ಚೆಯಲ್ಲಿ ಬರುತ್ತದೆ ಇಂತಹ ಯಶಸ್ವಿ ಪ್ರಯತ್ನಗಳು ದೇಶದಾದ್ಯಂತ ಹೆಚ್ಚಾಗಬೇಕು ಎಂದಿದ್ದಾರೆ ಮೋದಿ.
ಮೋಧೇರಾದ ಜನರು ವಿದ್ಯುತ್ ಗ್ರಾಹಕರು ಮತ್ತು ಉತ್ಪಾದಕರು. ಸರ್ಕಾರ ಹೆಚ್ಚುವರಿಯಾಗಿ ಉತ್ಪಾದಿಸಿದ ವಿದ್ಯುತ್ ಖರೀದಿಸುತ್ತಿದೆ. ಈಗ ನಾವು ವಿದ್ಯುತ್‌ಗೆ ಪಾವತಿಸುವುದಿಲ್ಲ, ಆದರೆ ಅದನ್ನು ಮಾರಾಟ ಮಾಡಲು ಪ್ರಾರಂಭಿಸುತ್ತೇವೆ ಮತ್ತು ಅದರಿಂದ ಸಂಪಾದಿಸಲು ಪ್ರಾರಂಭಿಸುತ್ತೇವೆ. ಸ್ವಲ್ಪ ಸಮಯದ ಹಿಂದೆ, ಸರ್ಕಾರವು ನಾಗರಿಕರಿಗೆ ವಿದ್ಯುತ್ ಸರಬರಾಜು ಮಾಡುತ್ತಿತ್ತು ಆದರೆ ಈಗ, ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸುವುದರೊಂದಿಗೆ, ನಾಗರಿಕರು ತಮ್ಮ ಸ್ವಂತ ವಿದ್ಯುತ್ ಅನ್ನು ಉತ್ಪಾದಿಸುತ್ತಾರೆ.
ಇಲ್ಲಿಯವರೆಗೆ, ಸರ್ಕಾರವು ವಿದ್ಯುತ್ ಉತ್ಪಾದಿಸುತ್ತಿತ್ತು ಮತ್ತು ಜನರು ವಿದ್ಯುತ್ ಖರೀದಿಸುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಜನರೇ ವಿದ್ಯುತ್ ಉತ್ಪಾದಕರಾಗಲು ಶ್ರಮಿಸುತ್ತಿದೆ. ಮೆಹ್ಸಾನಾ ಜಿಲ್ಲೆ ಯಾವ ರೀತಿಯ ಸಮಯವನ್ನು ಎದುರಿಸಿದೆ ಎಂದು ತಿಳಿದಿಲ್ಲದ ಅನೇಕ ಯುವಕರು ಇಲ್ಲಿದ್ದಾರೆ. ವಿದ್ಯುಚ್ಛಕ್ತಿ ದೊಡ್ಡ ಸಮಸ್ಯೆಯಾಗಿತ್ತು. ನಮ್ಮ ತಾಯಂದಿರು ಮತ್ತು ಸಹೋದರಿಯರು ನೀರು ತರಲು ಮೂರು ಕಿಲೋಮೀಟರ್ ನಡೆಯಬೇಕಿತ್ತು. ಮೊನ್ನೆಯಷ್ಟೇ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು, ಅಹಮದಾಬಾದ್‌ನಲ್ಲಿ ಪರಿಸ್ಥಿತಿ ಸರಿಯಿದೆಯೇ ಎಂದು ಮೆಹ್ಸಾನಾದ ಜನರು ತಮ್ಮ ಪರಿಚಯಸ್ಥರಿಗೆ ಕರೆ ಮಾಡಿ ಕೇಳಬೇಕಾಗಿತ್ತು. ಇಂದು ನಮ್ಮ ಮಕ್ಕಳು ಕರ್ಫ್ಯೂ ಎಂಬ ಪದವನ್ನು ಕೇಳಿಲ್ಲ.
ನಮ್ಮ ಸರ್ಕಾರಗಳು ಕೃಷಿ ಬೆಳವಣಿಗೆ, ಕೈಗಾರಿಕಾ ಚಟುವಟಿಕೆ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿವೆ. ಜ್ಯೋತಿ ಗ್ರಾಮ ಯೋಜನೆಯು ಉಂಜಾದಿಂದ ಪ್ರಾರಂಭವಾಯಿತು. ಪ್ರಧಾನಿಯಾದ ನಂತರ ಅಲ್ಲಿ 18,000 ಹಳ್ಳಿಗಳು ವಿದ್ಯುತ್ ರಹಿತವಾಗಿವೆ. 1,000 ದಿನಗಳಲ್ಲಿ ಆ ಹಳ್ಳಿಗಳಿಗೆ ನಾವು ವಿದ್ಯುತ್ ಪಡೆದಿದ್ದೇವೆ:
ಮೆಹ್ಸಾನಾ ಈಗ ಫಾರ್ಮಾ, ಸಿಮೆಂಟ್, ಇಂಜಿನಿಯರಿಂಗ್, ಆಟೋಮೊಬೈಲ್‌ಗಳ ಕೇಂದ್ರವಾಗಿದೆ. ಜಪಾನೀಯರು ಇಲ್ಲಿ ವಾಹನಗಳನ್ನು ತಯಾರಿಸುತ್ತಿದ್ದಾರೆ ಮತ್ತು ನಂತರ ಈ ವಾಹನಗಳನ್ನು ಜಪಾನ್‌ನಲ್ಲಿ ಬಳಸುತ್ತಿದ್ದಾರೆ. ಇಲ್ಲಿ ಸೈಕಲ್ ಕೂಡ ಉತ್ಪಾದನೆಯಾಗದ ಕಾಲವಿತ್ತು. ಶೀಘ್ರದಲ್ಲೇ ಗುಜರಾತ್‌ನಲ್ಲಿ ವಿಮಾನಗಳನ್ನು ತಯಾರಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗುಜರಾತ್‌ನ ಜನರು ಕಳೆದ ಎರಡು ದಶಕಗಳಿಂದ ನನ್ನನ್ನು ಆಶೀರ್ವದಿಸಿದ್ದಾರೆ ಮತ್ತು ನನ್ನ ಜಾತಿ ನೋಡದೆ ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಿದ್ದಾರೆ. ಈ ಹಿಂದೆ ಈ ಯೋಜನೆಗಳಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವಂತೆ ಕೆಲ ರೈತರು ಪ್ರತಿಭಟನೆ ನಡೆಸುತ್ತಿದ್ದರು. ನಾನು ಸಿಎಂ ಆಗಿದ್ದಾಗಲೂ ರೈತರು ನನ್ನನ್ನು ಭೇಟಿಯಾಗಲು ಬಂದಿದ್ದರು. ಆದರೆ ಕೆಲವು ರೈತರ ಪ್ರಜ್ಞೆ ಮೇಲುಗೈ ಸಾಧಿಸಿದೆ. ನೀವು ಫಲಿತಾಂಶಗಳನ್ನು ನೋಡುತ್ತೀರಿ ಎಂದಿದ್ದಾರೆ ಪ್ರಧಾನಿ ಮೋದಿ
Published On - 6:15 pm, Sun, 9 October 22