
ನವದೆಹಲಿ, (ಮೇ 12): ಆಪರೇಷನ್ ಸಿಂಧೂರ್ ಯಶಸ್ವಿ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಮೇ 12) ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದು, ‘ಆಪರೇಷನ್ ಸಿಂಧೂರ’ (Operation Sindoor)ದೇಶದ ಹೆಣ್ಣುಮಕ್ಕಳಿಗೆ (Indian Women) ಸಮರ್ಪಣೆ ಮಾಡಿದ್ದಾರೆ. ಭಾರತ ಶೌರ್ಯ ಮತ್ತು ಸಂಯಮ ಎರಡನ್ನೂ ನೋಡಿದೆ. ಗುಪ್ತಚರ, ವೀರ ಸೈನಿಕರು, ವಿಜ್ಞಾನಿಗಳಿಗೆ ಸೆಲ್ಯೂಟ್. ಪರಾಕ್ರಮಿ ಸೇನೆಗೆ ನನ್ನ ಸಲಾಂ. ‘ಆಪರೇಷನ್ ಸಿಂಧೂರ’ ದೇಶದ ಹೆಣ್ಣುಮಕ್ಕಳಿಗೆ ಸಮರ್ಪಣೆ. ಪಹಲ್ಗಾಮ್ ದಾಳಿ ಕ್ರೂರತೆ ಮತ್ತು ಬರ್ಬರವಾಗಿ ನಡೆದಿತ್ತು. ಕುಟುಂಬಸ್ಥರ ಮುಂದೆಯೇ ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಹೆಣ್ಣುಮಕ್ಕಳ ಸಿಂಧೂರ್ ಅಳಿಸಿದ ಉಗ್ರರಿಗೆ ಈಗ ಗೊತ್ತಾಗಿದೆ. ಆಪರೇಷನ್ ಸಿಂಧೂರ ನ್ಯಾಯದ ಅಖಂಡ ಪ್ರತಿಜ್ನೆಯಾಗಿದೆ ಎಂದು ಹೇಳಿದರು.
ಭಾರತೀಯ ಹೆಣ್ಮಕ್ಕಳ ಸಿಂದೂರ ಅಳಿಸಿದರೆ ಏನು ಪರಿಣಾಮ ಆಗುತ್ತದೆ ಎಂಬುದು ಎಲ್ಲಾ ಉಗ್ರ ಸಂಘಟನೆಗಳಿಗೂ ಗೊತ್ತಾಗಿದೆ. ವೈರಿಗಳು ಆಪರೇಷನ್ ಸಿಂದೂರ ಇಷ್ಟು ಕಟುವಾಗಿರುತ್ತದೆ ಎಂದು ಊಹಿಸಿರಲಿಲ್ಲ. ನಮ್ಮ ಸೇನಾಪಡೆಗಳು ಉಗ್ರರ ಶಿಬಿರಗಳ ಮೇಲೆ ನಿಖರ ದಾಳಿ ನಡೆಸಿವೆ. ದೇಶ ಒಗ್ಗಟ್ಟಾಗಿದ್ದಾಗ ಇಂತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬಹುದು. ಉಗ್ರರು ನಮ್ಮ ಹೆಣ್ಣು ಮಕ್ಕಳ ಸಿಂಧೂರ ಅಳಿಸಿ ಹಾಕಿದರು. ಆದರೆ ನಾವು ಉಗ್ರರ ಅಡಗು ತಾಣವನ್ನೇ ಧ್ವಂಸ ಮಾಡಿದ್ದೇವೆ ನರೇಂದ್ರ ಮೋದಿ ಹೇಳಿದರು.
ದೇಶದ ಜನರು, ತಾಯಂದಿರಿಗೆ ಆಪರೇಷನ್ ಸಿಂದೂರವನ್ನು ಅರ್ಪಿಸುತ್ತೇನೆ. ರಜೆ ಹಿನ್ನೆಲೆ ಪಹಲ್ಗಾಮ್ ನಲ್ಲಿ ಕುಟುಂಬದೊಂದಿಗೆ ಜನರು ಸಮಯ ಕಳೆಯುತ್ತಿದ್ದರು. ಇಲ್ಲಿಗೆ ಬಂದ ಉಗ್ರರು, ಧರ್ಮ ಕೇಳಿ ಕುಟುಂಬಸ್ಥರ ಮುಂದೆಯೇ ಕೊಂದರು. ಪತ್ನಿ ಹಾಗೂ ಮಕ್ಕಳ ಮುಂದೆ ಭೀಕರವಾಗಿ ಹತ್ಯೆ ಮಾಡಿದರು. ಈ ಮೂಲಕ ದೇಶದ ಐಕ್ಯತೆಯನ್ನು ಕದಡುವ ಪ್ರಯತ್ನ ಮಾಡಲಾಯ್ತು. ಬಳಿಕ ಉಗ್ರ ದಾಳಿಗೆ ಪ್ರತೀಕಾರ ಬೇಕೆಂದು ಇಡೀ ದೇಶದ ಜನರು ಒಗ್ಗಟ್ಟಿನಿಂದ ಆಗ್ರಹಿಸಿದ್ದರು. ಭಯೋತ್ಪಾದನೆಯನ್ನು ಮಣ್ಣಿನಲ್ಲಿ ಸೇರಿಸಲಾಗುವುದು ಎಂದು ನಾವು ದೇಶದ ಜನತೆಗೆ ಮಾತು ನೀಡಿದ್ದೇವೆ. ನಮ್ಮ ದೇಶದ ಮಹಿಳೆಯರ ಸಿಂದೂರವನ್ನು ಅಳಿಸಿದ್ರೆ ಏನಾಗುತ್ತೆ ಎಂದು ಆಪರೇಷನ್ ಸಿಂದೂರ ಮೂಲಕ ಉತ್ತರ ನೀಡಲಾಗಿದೆ. ಮೇ 6ರ ರಾತ್ರಿ, ಮೇ 7ರ ಬೆಳಗಿನ ಜಾವ ಆಪರೇಷನ್ ಸಿಂದೂರ ಕಾರ್ಯಚರಣೆ ನಡೆಸಲಾಯ್ತು. ನಾವು ನೇರವಾಗಿ ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಲಾಯ್ತು. ಭಾರತ ಇಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳುವಂತೆ ಪಾಕಿಸ್ತಾನ ಕಲ್ಪನೆಯೂ ಮಾಡಿಕೊಂಡಿರಲಿಲ್ಲ ಎಂದು ತಿಳಿಸಿದರು.
ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ಉಗ್ರರು ದಾಳಿ ಮಾಡಿದ್ದು, ಇದರಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು. ನಂತರ ಇದಕ್ಕೆ ಪ್ರತೀಕಾರವಾಗಲೇಬೇಕೆಂದು ಆಗ್ರಹಗಳು ವ್ಯಕ್ತವಾಗಿದ್ದವು. ಇದರಿಂದ ಭಾರತೀಯ ಸೇನೆ ಭಾರತೀಯ ಸೇನೆ ಮೇ 7ರಂದು ಆಪರೇಶನ್ ಸಿಂಧೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಇದನ್ನು ಇದೀಗ ಮೋದಿ ಈ ಆಪರೇಷನ್ ಸಿಂಧೂರವನ್ನು ಹೆಣ್ಣುಮಕ್ಕಳಿಗೆ ಅರ್ಪಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ