Narendra Modi Bhutan Visit: ಒಂದು ದಿನ ತಡವಾಗಿ ಭೂತಾನ್​ಗೆ ಹೊರಟ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಭೂತಾನ್​ಗೆ ಪ್ರಯಾಣ ಬೆಳೆಸಿದ್ದಾರೆ. ಎರಡು ದಿನಗಳ ಕಾಲ ಅಲ್ಲಿ ಪ್ರವಾಸ ಕೈಗೊಳ್ಳಳಿದ್ದಾರೆ, ಪ್ರಧಾನಿ ಜತೆ ಹಲವು ಬಗೆಯ ಚರ್ಚೆಗಳನ್ನು ನಡೆಸಲಿದ್ದಾರೆ.

Narendra Modi Bhutan Visit: ಒಂದು ದಿನ ತಡವಾಗಿ ಭೂತಾನ್​ಗೆ ಹೊರಟ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
ನಯನಾ ರಾಜೀವ್
|

Updated on: Mar 22, 2024 | 8:20 AM

ಹವಾಮಾನ ವೈಪರೀತ್ಯ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ(Narendra Modi) ಒಂದು ದಿನ ತಡವಾಗಿ ಭೂತಾನ್​ಗೆ ಹೊರಟಿದ್ದಾರೆ. ಎರಡು ದಿನಗಳ ಕಾಲ ಅಲ್ಲಿಯೇ ಪ್ರವಾಸ ನಡೆಸಲಿದ್ದಾರೆ. ಪ್ರವಾಸದ ವೇಳೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಮಾತುಕತೆ ನಡೆಸಬಹುದು. ಇದಕ್ಕೂ ಮೊದಲು, ಭೂತಾನ್ ಪ್ರಧಾನಿ  ದಶೋ ಶೆರಿಂಗ್ ತೊಬ್ಗೇ ಮಾರ್ಚ್ 14-18 ರವರೆಗೆ ಭಾರತಕ್ಕೆ ಭೇಟಿ ನೀಡಿದ್ದರು.

ಜನವರಿಯಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ವಿದೇಶ ಭೇಟಿಯಾಗಿದೆ. ತಮ್ಮ ಭೇಟಿಯ ವೇಳೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರನ್ನು ಭೇಟಿಯಾದರು. ವಿವಿಧ ಕೈಗಾರಿಕೆಗಳ ಮುಖ್ಯಸ್ಥರೊಂದಿಗೆ ಸಭೆಗಳನ್ನು ನಡೆಸುವುದರ ಜೊತೆಗೆ, ಅವರು ಹಲವಾರು ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಉಭಯ ದೇಶಗಳ ನಡುವಿನ ಸಂಬಂಧಗಳು ಉತ್ತಮವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ತನ್ನ ವಿದೇಶಾಂಗ ನೀತಿಗಳಲ್ಲಿ ಬದಲಾವಣೆ ತರುತ್ತಲೇ 2014ರಿಂದಲೇ ನೆರೆಯ ರಾಷ್ಟ್ರಗಳತ್ತ ಗಮನ ಹರಿಸತೊಡಗಿತು.

ಮತ್ತಷ್ಟು ಓದಿ: ಹವಾಮಾನ ವೈಪರೀತ್ಯ: ಭೂತಾನ್ ಪ್ರವಾಸ ಮುಂದೂಡಿದ ಪ್ರಧಾನಿ ಮೋದಿ

ತಮ್ಮ ಎರಡು ದಿನಗಳ ಭೇಟಿಯಲ್ಲಿ ಪ್ರಧಾನಿಯವರು ಭೂತಾನ್‌ ದೊರೆ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್, ಮಾಜಿ ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರನ್ನು ಭೇಟಿಯಾಗಲಿದ್ದಾರೆ. ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಭೂತಾನ್ ಪ್ರಧಾನಿ ತ್ಶೆರಿಂಗ್ ತೊಬ್ಗೇ ಅವರೊಂದಿಗೆ ಮೋದಿ ಚರ್ಚೆ ನಡೆಸಲಿದ್ದಾರೆ.

ಪೂರ್ವ ಭಾರತದ ಕೆಲವು ಭಾಗಗಳಲ್ಲಿ ಬುಧವಾರ ಭಾರೀ ಮಳೆಯಾಗುತ್ತಿದೆ ಮತ್ತು ಭಾರತೀಯ ಹವಾಮಾನ ಇಲಾಖೆ (IMD) ಬಿಹಾರ, ಜಾರ್ಖಂಡ್, ವಾಯುವ್ಯ ಬಂಗಾಳ ಮತ್ತು ಒಡಿಶಾಕ್ಕೆ ‘ಆರೆಂಜ್’ ಎಚ್ಚರಿಕೆಯನ್ನು ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ