PM Narendra Modi: ಆರಾಮಾಗಿ ಬದುಕುವುದು ಎಷ್ಟು ಮುಖ್ಯವೋ ಸುಲಭವಾಗಿ ನ್ಯಾಯ ಸಿಗುವುದು ಅಷ್ಟೇ ಮುಖ್ಯ; ಪ್ರಧಾನಿ ಮೋದಿ
ಇ-ಕೋರ್ಟ್ಸ್ ಮಿಷನ್ ಅಡಿಯಲ್ಲಿ ದೇಶದಲ್ಲಿ ವರ್ಚುವಲ್ ನ್ಯಾಯಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ. ಸಂಚಾರ ಉಲ್ಲಂಘನೆಯಂತಹ ಅಪರಾಧಗಳಿಗಾಗಿ 24 ಗಂಟೆಗಳ ನ್ಯಾಯಾಲಯಗಳು ಕಾರ್ಯ ನಿರ್ವಹಿಸಲು ಪ್ರಾರಂಭಿಸಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನವದೆಹಲಿ: ದೆಹಲಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ಪ್ರಧಾನಿ ಮೋದಿ, ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಒತ್ತು ನೀಡಲಾಗುವುದು. ಆರಾಮಾಗಿ ಬದುಕುವುದು ಎಷ್ಟು ಮುಖ್ಯವೋ ಅಷ್ಟೇ ಸುಲಭವಾಗಿ ನ್ಯಾಯ ಒದಗಿಸುವುದು ಕೂಡ ಅಷ್ಟೇ ಮುಖ್ಯ. ಹಾಗೆಯೇ ಸುಲಭವಾಗಿ ಬದುಕುವುದು ಮತ್ತು ಸುಲಭವಾಗಿ ಬದುಕುವುದು ಅಷ್ಟೇ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ (Justice NV Ramana) ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ.
ಮೊದಲ ಅಖಿಲ ಭಾರತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಯಾವುದೇ ಸಮಾಜಕ್ಕೆ ನ್ಯಾಯಾಂಗ ವ್ಯವಸ್ಥೆ ಎಷ್ಟು ಮುಖ್ಯವೋ, ನ್ಯಾಯ ಸಿಗುವಂತೆ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿದೆ. ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ 8 ವರ್ಷಗಳಲ್ಲಿ ದೇಶದ ನ್ಯಾಯಾಂಗ ಮೂಲಸೌಕರ್ಯವನ್ನು ಬಲಪಡಿಸುವ ಕೆಲಸವನ್ನು ತ್ವರಿತ ಗತಿಯಲ್ಲಿ ಮಾಡಲಾಗಿದೆ ಎಂದಿದ್ದಾರೆ.
In any society, Justice delivery is equally important as access to the judicial system
In the last eight years, work has been done at a fast pace to strengthen the judicial infrastructure of the country
PM @narendramodi pic.twitter.com/krlDgb9VYA
— PIB India (@PIB_India) July 30, 2022
ಇ-ಕೋರ್ಟ್ಸ್ ಮಿಷನ್ ಅಡಿಯಲ್ಲಿ ದೇಶದಲ್ಲಿ ವರ್ಚುವಲ್ ನ್ಯಾಯಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ. ಸಂಚಾರ ಉಲ್ಲಂಘನೆಯಂತಹ ಅಪರಾಧಗಳಿಗಾಗಿ 24 ಗಂಟೆಗಳ ನ್ಯಾಯಾಲಯಗಳು ಕಾರ್ಯ ನಿರ್ವಹಿಸಲು ಪ್ರಾರಂಭಿಸಿವೆ. ಜನರ ಅನುಕೂಲಕ್ಕಾಗಿ ನ್ಯಾಯಾಲಯಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಸೌಕರ್ಯಗಳನ್ನು ಸಹ ವಿಸ್ತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
Under the e-Courts Mission, virtual courts are being started in the country. 24-hour courts have started functioning for crimes like traffic violations.
Video conferencing infrastructure is also being expanded in the courts for the convenience of the people
PM @narendramodi pic.twitter.com/sKzPvXLyhe
— PIB India (@PIB_India) July 30, 2022
ಈ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಉದಯ್ ಯು. ಲಲಿತ್ ಮತ್ತು ಡಿವೈ ಚಂದ್ರಚೂಡ, ಕಾನೂನು ಸಚಿವ ಕಿರಣ್ ರಿಜಿಜು ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನಿ ಮೋದಿಯವರಿಗೂ ಮೊದಲು ಮಾತನಾಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನಮ್ಮ ನಿಜವಾದ ಶಕ್ತಿ ಯುವಕರಲ್ಲಿದೆ. ವಿಶ್ವದ 5ನೇ ಒಂದು ಭಾಗದಷ್ಟು ಯುವಕರು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದಿದ್ದಾರೆ.