ಸೇಲಂ ಮಾರ್ಚ್ 19: ತಮಿಳುನಾಡಿದ ಸೇಲಂನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) 2013ರಲ್ಲಿ ಹತ್ಯೆಗೀಡಾದ ಬಿಜೆಪಿ (BJP) ನಾಯಕನನ್ನು ಸ್ಮರಿಸುವಾಗ ಭಾವುಕರಾಗಿ ಕೆಲ ಹೊತ್ತು ಮಾತು ನಿಲ್ಲಿಸಿದ್ದಾರೆ. ತಮ್ಮ ಭಾಷಣದಲ್ಲಿ ಮೋದಿ ಅbjg ದಿವಂಗತ ಬಿಜೆಪಿ ನಾಯಕ ಕೆಎನ್ ಲಕ್ಷ್ಮಣನ್ ಸೇರಿದಂತೆ ಜಿಲ್ಲೆಗೆ ಸಂಬಂಧಿಸಿದ ಮೂವರು ವ್ಯಕ್ತಿಗಳನ್ನು ಸ್ಮರಿಸಿದರು. ಆದರೆ, ‘ಆಡಿಟರ್’ ರಮೇಶ್ ಬಗ್ಗೆ ಮಾತನಾಡುವಾಗ ಭಾವುಕರಾದರು.
“ಇಂದು, ನಾನು ಆಡಿಟರ್ ರಮೇಶ್ ಅವರನ್ನು ನೆನಪಿಸಿಕೊಳ್ಳುತ್ತೇನೆ” ಎಂದು ಹೇಳಿ ಮೋದಿ ಗದ್ಗದಿತರಾಗಿದ್ದಾರೆ. ಕೆಲವು ಸೆಕೆಂಡ್‌ಗಳ ಕಾಲ ಮೌನವಹಿಸಿದಾಗ ಪ್ರೇಕ್ಷಕರು ಮೋದಿಯವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಮತ್ತೆ ತಮ್ಮ ಭಾಷಣವನ್ನು ಮುಂದುವರಿಸಿದ ಪ್ರಧಾನಿ ಮೋದಿ, “ದುರದೃಷ್ಟವಶಾತ್, ಸೇಲಂನ ನನ್ನ ರಮೇಶ್ ನಮ್ಮ ನಡುವೆ ಇಲ್ಲ” ಎಂದು ಹೇಳಿದ್ದಾರೆ. ರಮೇಶ್ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದರು. ಅವರು ಉತ್ತಮ ವಾಗ್ಮಿ. ಆದರೆ ಅವರ ಹತ್ಯೆಯಾಯಿತು ಎಂದುದಿವಂಗತ ಬಿಜೆಪಿ ನಾಯಕನಿಗೆ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
PM @narendramodi pays tribute to Auditor Ramesh, a victim of terrorism in Salem; we remember those who gave their all for our nation. pic.twitter.com/vHKCdq1HpY
— Amar Prasad Reddy ( MODI FAMILY) (@amarprasadreddy) March 19, 2024
ವೃತ್ತಿಯಲ್ಲಿ ಆಡಿಟರ್ ಆಗಿದ್ದ ವಿ ರಮೇಶ್ ಸೇಲಂ ಮೂಲದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. 52 ವರ್ಷದ ಬಿಜೆಪಿ ಮುಖಂಡನ ಮೇಲೆ ಜುಲೈ 19, 2013 ರಂದು ಅಪರಿಚಿತ ದುಷ್ಕರ್ಮಿಗಳು ಅವರ ಮನೆಯ ಬಳಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಪಕ್ಷದ ವ್ಯವಹಾರಗಳ ಬಗ್ಗೆ ಚರ್ಚಿಸಲು ಬಿಜೆಪಿ ನಾಯಕ ತಮ್ಮ ಕಚೇರಿಗೆ ತೆರಳಿದ್ದರು. ಅಲ್ಲಿಂದ ಅವರ ಮನೆಗೆ ಹಿಂದಿರುಗುತ್ತಿದ್ದಾಗ ನಾಲ್ವರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವೇಳೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಕರೆ ಮಾಡಿ ಕೊಲೆಯ ಬಗ್ಗೆ ವಿಚಾರಿಸಿದ್ದರು.
ಪ್ರತಿಭಟನಾಕಾರರು ಐದು ಸರ್ಕಾರಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಈ ಘಟನೆಯು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದ್ದು, ಅಧಿಕಾರಿಗಳು ಶಾಲೆಗಳಿಗೆ ರಜೆ ಘೋಷಿಸಬೇಕಾಗಿ ಬಂದಿತ್ತು.
2013 ರ ಅಕ್ಟೋಬರ್‌ನಲ್ಲಿ, ತಿರುಚ್ಚಿಯಲ್ಲಿ ನಡೆದ ರ‍್ಯಾಲಿಯಲ್ಲಿ ಬಿಜೆಪಿಯ ಪ್ರಧಾನ ಮಂತ್ರಿ ಮುಖವಾಗಿದ್ದ ನರೇಂದ್ರ ಮೋದಿ ಅವರು ಆಗಿನ ತಮಿಳುನಾಡು ಸಿಎಂ ಜೆ ಜಯಲಲಿತಾ ಅವರ ಬಗ್ಗೆ ಏನೂ ಹೊಗಳಿಕೆಯ ಮಾತುಗಳನ್ನಾಡಿಲ್ಲ ಎಂದು ಎಚ್‌ಟಿ ವರದಿ ಮಾಡಿದೆ. ಹತ್ಯೆಗೀಡಾದ ಲೆಕ್ಕ ಪರಿಶೋಧಕ ರಮೇಶ್‌ನ ತನಿಖೆಯಲ್ಲಿ ಪ್ರಗತಿಯಾಗದಿರುವ ಬಗ್ಗೆ ಮೋದಿ ರಾಜ್ಯ ಸರ್ಕಾರದ ಬಗ್ಗೆ ಅಸಮಧಾನಗೊಂಡಿದ್ದರು ಎಂದು ತಮಿಳುನಾಡಿನ ಬಿಜೆಪಿ ನಾಯಕರು ಹೇಳಿದ್ದರು.
ಇದನ್ನೂ ಓದಿ: ಡಿಎಂಕೆ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಮತ್ತು ಕುಟುಂಬ ಆಡಳಿತ: ತಮಿಳುನಾಡಿನಲ್ಲಿ ಪ್ರಧಾನಿ ಮೋದಿ
ತಮಿಳುನಾಡಿನಲ್ಲಿ ಪಕ್ಷದ ಬೆಳವಣಿಗೆಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಿ ಅವರು ದಿವಂಗತ ಲಕ್ಷ್ಮಣನ್ ಅವರಿಗೂ ಶ್ರದ್ಧಾಂಜಲಿ ಸಲ್ಲಿಸಿದರು. ತುರ್ತು ಪರಿಸ್ಥಿತಿ ವಿರೋಧಿ ಆಂದೋಲನದಲ್ಲಿ ಲಕ್ಷ್ಮಣನ್ ಪಾತ್ರ ಮತ್ತು ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯು ಸದಾ ಸ್ಮರಣೀಯವಾಗಿದೆ. ರಾಜ್ಯದಲ್ಲಿ ಬಿಜೆಪಿಯ ವಿಸ್ತರಣೆಗೆ ಅವರ ಕೊಡುಗೆ ಅವಿಸ್ಮರಣೀಯವಾಗಿದೆ. ಅವರು ರಾಜ್ಯದಲ್ಲಿ ಅನೇಕ ಶಾಲೆಗಳನ್ನು ಸಹ ಪ್ರಾರಂಭಿಸಿದರು ಎಂದು ಮೋದಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:37 pm, Tue, 19 March 24