ಶರದ್ ಪವಾರ್ ಅವರ ಫೋಟೋ ಬಳಸದಂತೆ ಅಜಿತ್ ಬಣಕ್ಕೆ ಸುಪ್ರೀಂಕೋರ್ಟ್ ನಿರ್ಬಂಧ

'ಗಡಿಯಾರ' ಚಿಹ್ನೆಯ ಬಳಕೆಯು ಉನ್ನತ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಮೇಲ್ಮನವಿಯ ಅಂತಿಮ ಫಲಿತಾಂಶಕ್ಕೆ ಒಳಪಟ್ಟಿರುತ್ತದೆ ಎಂದು ಸಾರ್ವಜನಿಕ ಸೂಚನೆಯನ್ನು ನೀಡುವಂತೆ ಅಜಿತ್ ಪವಾರ್ ಗುಂಪಿಗೆ ನಿರ್ದೇಶನ ನೀಡಿದ ನ್ಯಾಯಾಲಯವು ಅಲ್ಲಿಯವರೆಗೆ, ಅಂತಹ ಘೋಷಣೆಯು ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮದಲ್ಲಿ ಎಲ್ಲಾ ಜಾಹೀರಾತುಗಳೊಂದಿಗೆ ಇರಬೇಕು ಎಂದು ಹೇಳಿದೆ.

ಶರದ್ ಪವಾರ್ ಅವರ ಫೋಟೋ ಬಳಸದಂತೆ ಅಜಿತ್ ಬಣಕ್ಕೆ ಸುಪ್ರೀಂಕೋರ್ಟ್ ನಿರ್ಬಂಧ
ಶರದ್ ಪವಾರ್- ಅಜಿತ್ ಪವಾರ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 19, 2024 | 5:26 PM

ದೆಹಲಿ ಮಾರ್ಚ್ 19: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್ (Sharad Pawar) ಬಣಕ್ಕೆ ‘ಎನ್‌ಸಿಪಿ-ಎಸ್‌ಸಿಪಿ’ ಎಂಬ ಹೆಸರು ಮತ್ತು ಕಹಳೆ ಊದುತ್ತಿರುವ ವ್ಯಕ್ತಿಯ ಚಿಹ್ನೆಯನ್ನು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಬಳಸಲು ಸುಪ್ರೀಂಕೋರ್ಟ್ (Supreme Court) ಮಂಗಳವಾರ ಅನುಮತಿ ನೀಡಿದೆ. ಅದೇ  ವೇಳೆ ಶರದ್ ಪವಾರ್ ಬಣದ ಚುನಾವಣಾ ಚಿಹ್ನೆಯಾಗಿರುವ ‘ಕಹಳೆ ಊದುತ್ತಿರುವ ವ್ಯಕ್ತಿ’ ಅನ್ನು ಅಧಿಕೃತವಾಗಿ ಲಾಕ್ ಮಾಡುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚಿಸಿದೆ. ಯಾವುದೇ ಚುನಾವಣಾ ಪ್ರಚಾರ ಸಾಮಗ್ರಿಗಳಲ್ಲಿ ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ಹೆಸರು ಅಥವಾ ಫೋಟೋವನ್ನು ಬಳಸದಂತೆ ಅಜಿತ್ ಪವಾರ್ (Ajit Pawar) ಬಣವನ್ನು ಸುಪ್ರೀಂಕೋರ್ಟ್ ನಿರ್ಬಂಧಿಸಿದೆ.

‘ಗಡಿಯಾರ’ ಚಿಹ್ನೆಯ ಬಳಕೆಯು ಉನ್ನತ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಮೇಲ್ಮನವಿಯ ಅಂತಿಮ ಫಲಿತಾಂಶಕ್ಕೆ ಒಳಪಟ್ಟಿರುತ್ತದೆ ಎಂದು ಸಾರ್ವಜನಿಕ ಸೂಚನೆಯನ್ನು ನೀಡುವಂತೆ ನ್ಯಾಯಾಲಯವು ಅಜಿತ್ ಪವಾರ್ ಗುಂಪಿಗೆ ನಿರ್ದೇಶನ ನೀಡಿದೆ. ಅಲ್ಲಿಯವರೆಗೆ, ಅಂತಹ ಘೋಷಣೆಯು ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮದಲ್ಲಿ ಎಲ್ಲಾ ಜಾಹೀರಾತುಗಳೊಂದಿಗೆ ಇರಬೇಕು ಎಂದು ನ್ಯಾಯಾಲಯ ಹೇಳಿದೆ. ಕಳೆದ ವಾರ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಶರದ್ ಪವಾರ್ ಅವರ ಹೆಸರು ಮತ್ತು ಚಿತ್ರಗಳನ್ನು ಪ್ರಚಾರಕ್ಕಾಗಿ ಬಳಸಿಕೊಂಡ ಆರೋಪದ ಮೇಲೆ ಅಜಿತ್ ಪವಾರ್ ಬಣವನ್ನು ತರಾಟೆಗೆ ತೆಗೆದುಕೊಂಡಿತು.

“ನೀವು ಈಗ ಬೇರೆ ರಾಜಕೀಯ ಪಕ್ಷವಾಗಿದ್ದೀರಿ. ನೀವು ಅವರೊಂದಿಗೆ ಇರಬಾರದು ಎಂದು ನಿರ್ಧರಿಸಿದ್ದೀರಿ. ಹಾಗಾದರೆ ಅವರ ಚಿತ್ರವನ್ನು ಏಕೆ ಬಳಸಬೇಕು? ಈಗಲೇ ನಿಮ್ಮದೇ ಗುರುತಿನೊಂದಿಗೆ ಮುಂದುವರಿಯಿರಿ,” ಎಂದು ಪೀಠ ಹೇಳಿದೆ. ಶರದ್ ಪವಾರ್ ಅವರ ಹೆಸರು, ಚಿತ್ರಗಳನ್ನು ಬಳಸಲಾಗುವುದಿಲ್ಲ ಎಂದು ನಮಗೆ ನಿರ್ದಿಷ್ಟ ಮತ್ತು ಬೇಷರತ್ತಾದ ಒಪ್ಪಂದದ ಅಗತ್ಯವಿದೆ, ”ಎಂದು ಪೀಠ ಹೇಳಿತ್ತು.

ಭಾರತದ ಚುನಾವಣಾ ಆಯೋಗವು ಫೆಬ್ರವರಿ 6 ರ ಆದೇಶದಲ್ಲಿ “ಶಾಸಕ ಬಹುಮತದ ಪರೀಕ್ಷೆ” ಆಧಾರದ ಮೇಲೆ ಅಜಿತ್ ಬಣವನ್ನು ಅಧಿಕೃತ ಎನ್​​ಸಿಪಿ ಎಂದು ಗುರುತಿಸಿದೆ.

ಇದನ್ನೂ  ಓದಿ: ಡಿಎಂಕೆ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಮತ್ತು ಕುಟುಂಬ ಆಡಳಿತ: ತಮಿಳುನಾಡಿನಲ್ಲಿ ಪ್ರಧಾನಿ ಮೋದಿ

“ಅಜಿತ್ ಪವಾರ್ ಬಣವು ಶಾಸಕರ ಬಹುಮತದ ಬೆಂಬಲವನ್ನು ಹೊಂದಿತ್ತು. ಚುನಾವಣಾ ಆಯೋಗವು ಅಜಿತ್ ಪವಾರ್ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಎಂದು ಹೇಳುತ್ತದೆ. ಅವರು ಅದರ ಹೆಸರು ಮತ್ತು ‘ಗಡಿಯಾರ’ದ ಮೀಸಲು ಚಿಹ್ನೆಯನ್ನು ಬಳಸಲು ಅರ್ಹರಾಗಿದ್ದಾರೆ” ಎಂದು ಇಸಿಐ ಆದೇಶ ಹೇಳಿದೆ.

ಅಜಿತ್ ಪವಾರ್ ನೇತೃತ್ವದ ಬಣವು ಪಕ್ಷದ ಮೂಲ ಹೆಸರು ಮತ್ತು ಪಕ್ಷದ ಚಿಹ್ನೆಯನ್ನು ಆನುವಂಶಿಕವಾಗಿ ಪಡೆಯಬೇಕು ಎಂಬ ತೀರ್ಮಾನಕ್ಕೆ ಮೂವರು ಚುನಾವಣಾ ಆಯುಕ್ತರು ಯಾವ ಆಧಾರದ ಮೇಲೆ ಬಂದಿದ್ದಾರೆ ಎಂದು ಪ್ರಶ್ನಿಸಿ ಹಿರಿಯ ಪವಾರ್ ಇಸಿಐ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್