ನೈಜೀರಿಯಾ ಅಧ್ಯಕ್ಷರಿಗೆ ಉಡುಗೊರೆಯಾಗಿ ಕೊಲ್ಲಾಪುರದ ಬೆಳ್ಳಿ ಕಲಾಕೃತಿ ನೀಡಿದ ಪ್ರಧಾನಿ ಮೋದಿ

|

Updated on: Nov 18, 2024 | 6:42 PM

ನೈಜೀರಿಯಾ ರಾಜಧಾನಿ ಅಬುಜಾಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರನ್ನು ಭೇಟಿಯಾಗಿದ್ದಾರೆ. ಭಾರತದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುವ ಸಂಕೇತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೈಜೀರಿಯಾ ಭೇಟಿ ವೇಳೆ ನೈಜೀರಿಯಾದ ಅಧ್ಯಕ್ಷರಿಗೆ ಸಿಲೋಫರ್ ಪಂಚಾಮೃತ ಕಲಶವನ್ನು ನೀಡಿದ್ದಾರೆ.

ನೈಜೀರಿಯಾ ಅಧ್ಯಕ್ಷರಿಗೆ ಉಡುಗೊರೆಯಾಗಿ ಕೊಲ್ಲಾಪುರದ ಬೆಳ್ಳಿ ಕಲಾಕೃತಿ ನೀಡಿದ ಪ್ರಧಾನಿ ಮೋದಿ
ನೈಜೀರಿಯಾದ ಅಧ್ಯಕ್ಷರಿಗೆ ಸಿಲೋಫರ್ ಪಂಚಾಮೃತ ಕಲಶ ನೀಡಿದ ಮೋದಿ
Follow us on

ಅಬುಜಾ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನೈಜೀರಿಯಾಕ್ಕೆ ತಮ್ಮ ಮೊದಲ ಭೇಟಿಯನ್ನು ಆರಂಭಿಸಿದ್ದು, 17 ವರ್ಷಗಳಲ್ಲಿ ಪಶ್ಚಿಮ ಆಫ್ರಿಕಾ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ನಾಯಕರಾಗಿದ್ದಾರೆ. ನೈಜೀರಿಯಾದಲ್ಲಿನ ಭಾರತೀಯ ಸಮುದಾಯದವರು ಅವರನ್ನು ಬಹಳ ವೈಭವ ಮತ್ತು ಸಂಭ್ರಮದಿಂದ ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ನೈಜೀರಿಯಾದ ಅಧ್ಯಕ್ಷರಿಗೆ ತಮ್ಮ ಇತ್ತೀಚಿನ ಭೇಟಿ ವೇಳೆ ಬೆಳ್ಳಿಯ ಸಿಲೋಫರ್ ಪಂಚಾಮೃತ ಕಲಶವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಭಾರತದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.

ಮಹಾರಾಷ್ಟ್ರದ ಕೊಲ್ಲಾಪುರದಿಂದ ಸಾಂಪ್ರದಾಯಿಕ ಕರಕುಶಲತೆಯ ಅದ್ಭುತ ಉದಾಹರಣೆಯಾದ ನೈಜೀರಿಯಾದ ಅಧ್ಯಕ್ಷ ಟಿನುಬು ಅವರಿಗೆ ಪ್ರಧಾನಿ ಮೋದಿ ಅವರು ಸಿಲೋಫರ್ ಪಂಚಾಮೃತ ಕಲಶವನ್ನು ಉಡುಗೊರೆಯಾಗಿ ನೀಡಿದರು. ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಈ ಕಲಶವು ಉತ್ತಮ ಗುಣಮಟ್ಟದ ಬೆಳ್ಳಿಯಿಂದ ಮಾಡಲ್ಪಟ್ಟಿದೆ ಮತ್ತು ಕೊಲ್ಲಾಪುರದ ಪ್ರಸಿದ್ಧ ಲೋಹದ ಕುಸುರಿಯನ್ನು ಪ್ರದರ್ಶಿಸುವ ಸೊಗಸಾದ ಕೆತ್ತನೆಗಳನ್ನು ಹೊಂದಿದೆ. ಮೋದಿಯವರು ಉಡುಗೊರೆಯಾಗಿ ನೀಡಿದ ಈ ಕಲಶ ಮಹಾರಾಷ್ಟ್ರದ ಕೊಲ್ಲಾಪುರದ ಸಾಂಪ್ರದಾಯಿಕ ಕರಕುಶಲತೆಗೆ ಒಂದು ಅದ್ಭುತ ಉದಾಹರಣೆಯಾಗಿದೆ. ಈ ಸಿಲೋಫರ್ ಪಂಚಾಮೃತ ಕಲಶವನ್ನು ಉತ್ತಮ ಗುಣಮಟ್ಟದ ಬೆಳ್ಳಿಯಿಂದ ತಯಾರಿಸಲಾಗುತ್ತದೆ. ಈ ಕಲಶವನ್ನು ಕೌಶಲ್ಯದಿಂದ ರೂಪಿಸಲಾಗಿದೆ.

ಇದನ್ನೂ ಓದಿ: 17 ವರ್ಷಗಳ ನಂತರ ನೈಜೀರಿಯಾಕ್ಕೆ , 50 ವರ್ಷಗಳ ನಂತರ ಗಯಾನಾಕ್ಕೆ, ಮೂರು ದೇಶಕ್ಕೆ ಪ್ರಧಾನಿ ಮೋದಿ ಪ್ರವಾಸ

ಈ ಕಲಶವು ಕೊಲ್ಹಾಪುರದ ಹೆಸರಾಂತ ಮೆಟಲ್‌ವರ್ಕ್‌ನ ವಿಶಿಷ್ಟವಾದ ಸೊಗಸಾದ ಕೆತ್ತನೆಗಳನ್ನು ಹೊಂದಿದೆ. ಈ ಹೂವಿನ ಪಾಟ್ ದೇವತೆಗಳು ಮತ್ತು ಸಾಂಪ್ರದಾಯಿಕ ಕೊಲ್ಹಾಪುರ ವಿನ್ಯಾಸಗಳನ್ನು ಒಳಗೊಂಡಿದೆ. ಈ ಕಲಶದ ಹಿಡಿಕೆ ಮತ್ತು ಮುಚ್ಚಳವನ್ನು ಧಾರ್ಮಿಕ ಸಮಾರಂಭಗಳಲ್ಲಿ ಬಳಸಲು ಸುಲಭವಾಗುವಂತೆ ರಚಿಸಲಾಗಿದೆ. ಅದರಲ್ಲಿ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯ ಪವಿತ್ರ ಮಿಶ್ರಣವಾದ ಪಂಚಾಮೃತವನ್ನು ಸಂಗ್ರಹಿಸಬಹುದು.


ನೈಜೀರಿಯಾ ರಾಜಧಾನಿ ಅಬುಜಾಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರು ಆರ್ಥಿಕತೆ, ಇಂಧನ, ಕೃಷಿ, ಭದ್ರತೆ, ಫಿನ್‌ಟೆಕ್, ಸಣ್ಣ ಮತ್ತು ಮಧ್ಯಮ ರಾಜ್ಯ ಉದ್ಯಮಗಳ ಕುರಿತು ವ್ಯಾಪಕ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಗೌರವ

ನೈಜೀರಿಯ ಮತ್ತು ಭಾರತದ ನಾಯಕರು ಜಂಟಿಯಾಗಿ ಭಯೋತ್ಪಾದನೆ, ಕಡಲ್ಗಳ್ಳತನ ಮತ್ತು ಮೂಲಭೂತವಾದದ ವಿರುದ್ಧ ಹೋರಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಕಳೆದ ತಿಂಗಳ ಪ್ರವಾಹದಿಂದ ಹಾನಿಗೊಳಗಾದ ನೈಜೀರಿಯಾದ ಜನರಿಗೆ ಭಾರತವು 20 ಟನ್ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಿದೆ ಎಂದು ಪ್ರಧಾನಿ ಘೋಷಿಸಿದರು.


ತಮ್ಮ ಪ್ರವಾಸದ ಮೂರನೇ ಮತ್ತು ಅಂತಿಮ ಹಂತದಲ್ಲಿ ನರೇಂದ್ರ ಮೋದಿ ನವೆಂಬರ್ 19ರಿಂದ 21ರವರೆಗೆ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅಲಿ ಅವರ ಆಹ್ವಾನದ ಮೇರೆಗೆ ಗಯಾನಾಗೆ ಭೇಟಿ ನೀಡಲಿದ್ದಾರೆ. ಇದು 50 ವರ್ಷಗಳ ನಂತರ ಗಯಾನಾಕ್ಕೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:41 pm, Mon, 18 November 24