ದೆಹಲಿಯಲ್ಲಿ 10, 12ನೇ ತರಗತಿ ಮುಚ್ಚಲು ಸುಪ್ರೀಂ ಕೋರ್ಟ್ ಆದೇಶ; ಶಾಲೆಗಳಲ್ಲಿ ಆನ್​ಲೈನ್ ಕ್ಲಾಸ್​ಗೆ ಸೂಚನೆ

ಅಪಾಯಕಾರಿ ವಾಯು ಮಾಲಿನ್ಯದ ಮಟ್ಟದಿಂದಾಗಿ ದೆಹಲಿ-ಎನ್‌ಸಿಆರ್‌ನಲ್ಲಿರುವ ಎಲ್ಲಾ ಶಾಲೆಗಳು ಈಗ ಆನ್‌ಲೈನ್ ಮೋಡ್‌ಗೆ ಬದಲಾಗಬೇಕಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಈ ಕ್ರಮ ಜಾರಿಗೆ ಬಂದಿದೆ. ನಾಳೆಯಿಂದ ದೆಹಲಿಯಲ್ಲಿ ಎಲ್ಲ ಶಾಲಾ-ಕಾಲೇಜುಗಳಲ್ಲಿ ಆನ್​ಲೈನ್​ನಲ್ಲಿ ತರಗತಿಗಳನ್ನು ಡನೆಸಲು ಸೂಚಿಸಲಾಗಿದೆ.

ದೆಹಲಿಯಲ್ಲಿ 10, 12ನೇ ತರಗತಿ ಮುಚ್ಚಲು ಸುಪ್ರೀಂ ಕೋರ್ಟ್ ಆದೇಶ; ಶಾಲೆಗಳಲ್ಲಿ ಆನ್​ಲೈನ್ ಕ್ಲಾಸ್​ಗೆ ಸೂಚನೆ
ವಾಯುಮಾಲಿನ್ಯ
Follow us
ಸುಷ್ಮಾ ಚಕ್ರೆ
|

Updated on:Nov 18, 2024 | 9:15 PM

ನವದೆಹಲಿ: ದೆಹಲಿಯಲ್ಲಿ ಹದಗೆಟ್ಟ ಗಾಳಿಯ ಗುಣಮಟ್ಟದಿಂದಾಗಿ ದೆಹಲಿ-ಎನ್‌ಸಿಆರ್​ನಲ್ಲಿ 10 ಮತ್ತು 12ನೇ ತರಗತಿ ತರಗತಿಗಳನ್ನು ಮುಚ್ಚುವಂತೆ ಭಾರತದ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅಪಾಯಕಾರಿ ವಾಯು ಮಾಲಿನ್ಯ ಮಟ್ಟಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿಗಳಿಗೆ ಬದಲಾಯಿಸುವ ಅಗತ್ಯವನ್ನು ನ್ಯಾಯಾಲಯ ಒತ್ತಿಹೇಳಿದೆ. ಈ ಮೊದಲು 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲ ವಿದ್ಯಾರ್ಥಿಗಳಿಗೆ ದೈನಂದಿನ ತರಗತಿಗಳನ್ನು ಸ್ಥಗಿತಗೊಳಿಸಲಾಗಿತ್ತು. ನ್ಯಾಯಾಲಯದ ಹೊಸ ಆದೇಶದ ಪ್ರಕಾರ ಇದೀಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲ ತರಗತಿಗಳನ್ನು ಆನ್‌ಲೈನ್‌ನಲ್ಲಿ ಮುಂದುವರಿಸಲಾಗುವುದು.

GRAP 4 ನಿರ್ಬಂಧಗಳನ್ನು ಜಾರಿಗೊಳಿಸಲು ತಂಡಗಳನ್ನು ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. AQI 450ಕ್ಕಿಂತ ಕಡಿಮೆಯಿದ್ದರೂ ಸಹ ಜಾರಿಯಲ್ಲಿರುವ GRAP 4 ನಿರ್ಬಂಧಗಳನ್ನು ಜಾರಿಗೊಳಿಸಲು ತಕ್ಷಣವೇ ತಂಡಗಳನ್ನು ಸ್ಥಾಪಿಸಲು ದೆಹಲಿ, ಎನ್​ಸಿಆರ್​ಗೆ ಸುಪ್ರೀಂ ಕೋರ್ಟ್ ಕೇಳಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಇದು ಸಾಂವಿಧಾನಿಕ ಎಂದು ಹೇಳಿದೆ.

ಇದನ್ನೂ ಓದಿ: ವಾಯುಮಾಲಿನ್ಯದಿಂದ ನಿಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳಲು ಈ ರೀತಿ ಮಾಡಿ

ಎಲ್ಲಾ ನಾಗರಿಕರು ಮಾಲಿನ್ಯ ಮುಕ್ತ ವಾತಾವರಣದಲ್ಲಿ ಬದುಕುವುದನ್ನು ಖಚಿತಪಡಿಸಿಕೊಳ್ಳುವುದು ಎಲ್ಲಾ ರಾಜ್ಯಗಳ ಕರ್ತವ್ಯ. “AQI ಮಟ್ಟವು 450ಕ್ಕಿಂತ ಕಡಿಮೆಯಿದ್ದರೂ ಸಹ ಮುಂದುವರಿಯಲು GRAPಯ ಹಂತ 4ರ ಅಡಿಯಲ್ಲಿ ನಾವು ನಿರ್ಬಂಧಗಳನ್ನು ನಿರ್ದೇಶಿಸುತ್ತೇವೆ” ಎಂದು ನ್ಯಾಯಪೀಠ ಹೇಳಿದೆ.

ವಾಯುಮಾಲಿನ್ಯವನ್ನು ಪರಿಶೀಲಿಸಲು ತಡೆಗಟ್ಟುವ ಕ್ರಮಗಳ ಅನುಷ್ಠಾನದ ಕುರಿತು ನವೆಂಬರ್ 22ರೊಳಗೆ ತಮ್ಮ ಅನುಸರಣೆ ಅಫಿಡವಿಟ್ ಅನ್ನು ಸಲ್ಲಿಸುವಂತೆ ನ್ಯಾಯಾಲಯವು ದೆಹಲಿ ಸರ್ಕಾರ ಮತ್ತು ಎನ್‌ಸಿಆರ್‌ನ ಅಕ್ಕಪಕ್ಕದ ಪ್ರದೇಶಗಳಿಗೆ ಸೂಚಿಸಿದೆ. ಗ್ರಾಮ ಪಂಚಾಯತ್ ಅಡಿಯಲ್ಲಿ ಸೂಚಿಸಿರುವ ಕ್ರಮಗಳನ್ನು ಹೊರತುಪಡಿಸಿ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಪೀಠ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:11 pm, Mon, 18 November 24

ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ ಸಿಎನ್​ ಮಂಜುನಾಥ್
ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ ಸಿಎನ್​ ಮಂಜುನಾಥ್
ನಮ್ಮ ಸರ್ಕಾರದ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ: ಚಲುವರಾಯಸ್ವಾಮಿ
ನಮ್ಮ ಸರ್ಕಾರದ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ: ಚಲುವರಾಯಸ್ವಾಮಿ
ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು
ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು
ಕುಮಾರಸ್ವಾಮಿ ವಿರುದ್ಧ ಸಾವಿರಾರು ಕೋಟಿ ರೂ. ಗಿಫ್ಟ್​ ಆರೋಪ
ಕುಮಾರಸ್ವಾಮಿ ವಿರುದ್ಧ ಸಾವಿರಾರು ಕೋಟಿ ರೂ. ಗಿಫ್ಟ್​ ಆರೋಪ
ಚನ್ನಪಟ್ಟಣ ಜೊತೆ ದೇವೇಗೌಡರ ನಂಟು, ಮತ್ತೊಮ್ಮೆ ಇಸವಿ ತಪ್ಪು ಹೇಳಿದ ನಿಖಿಲ್
ಚನ್ನಪಟ್ಟಣ ಜೊತೆ ದೇವೇಗೌಡರ ನಂಟು, ಮತ್ತೊಮ್ಮೆ ಇಸವಿ ತಪ್ಪು ಹೇಳಿದ ನಿಖಿಲ್
ಪತ್ನಿ ರೇವತಿಯವರ ಇಚ್ಛೆಯ ಮೇರೆಗೆ ಹರದನಹಳ್ಳಿಗೆ ಭೇಟಿ ನೀಡಿದ ನಿಖಿಲ್
ಪತ್ನಿ ರೇವತಿಯವರ ಇಚ್ಛೆಯ ಮೇರೆಗೆ ಹರದನಹಳ್ಳಿಗೆ ಭೇಟಿ ನೀಡಿದ ನಿಖಿಲ್