ಶಹಜಾನ್ಪುರ: ಉತ್ತರ ಪ್ರದೇಶದ (Uttar Pradesh) ಶಹಜಹಾನ್‌ಪುರ ಜಿಲ್ಲೆಯಲ್ಲಿ (Shajanpura) 594 ಕಿಮೀ ಉದ್ದದ ಸುಮಾರು ₹ 36,230 ಕೋಟಿ ರೂ ವೆಚ್ಚದ ಗಂಗಾ ಎಕ್ಸ್‌ಪ್ರೆಸ್‌ವೇಗೆ (Ganga Expressway) ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಡಿಸೆಂಬರ್ 18) ಶಿಲಾನ್ಯಾಸ ನೆರವೇರಿಸಿದರು. ನಂತರ ಮಾತನಾಡಿದ ಅವರು, ಗಂಗಾ ಎಕ್ಸ್ಪ್ರೆಸ್ ಹೈವೇ ಉತ್ತರ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಯುವಕರಿಗೆ ಉದ್ಯೋಗ ಪಡೆಯಲು ಇದು ಸಹಕಾರಿಯಾಗಿದೆ. ಜತೆಗೆ ಗಂಗಾ ಎಕ್ಸ್ಪ್ರೆಸ್ ಹೈವೇ ಕೆಲಸ ಇಂದಿನಿಂದಲೇ ಪ್ರಾರಂಭವಾಗಲಿದೆ ಎಂದು ಹೇಳಿದರು. ಎಕ್ಸ್ಪ್ರೆಸ್ ವೇ ಕುರಿತು ಮಾತನಾಡಿದ ಪ್ರಧಾನಿ, ‘‘ಮೀರತ್, ಹಾಪುರ್, ಬುಲಂದ್‌ಶಹರ್, ಅಮ್ರೋಹಾ, ಸಂಭಾಲ್, ಬದೌನ್, ಶಹಜಹಾನ್‌ಪುರ್, ಹರ್ದೋಯಿ, ಉನ್ನಾವೋ, ರಾಯ್‌ಬರೇಲಿ, ಪ್ರತಾಪ್‌ಗಢ್ ಮತ್ತು ಪ್ರಯಾಗ್‌ರಾಜ್‌ನಲ್ಲಿರುವ ಪ್ರತಿಯೊಬ್ಬರನ್ನು ನಾನು ಅಭಿನಂದಿಸುತ್ತೇನೆ. ಸುಮಾರು 600 ಕಿಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇಗೆ 36,000 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಲಿದೆ. ಗಂಗಾ ಎಕ್ಸ್‌ಪ್ರೆಸ್‌ವೇ ಈ ಪ್ರದೇಶದಲ್ಲಿ ಹೊಸ ಕೈಗಾರಿಕೆಗಳನ್ನು ತರುತ್ತದೆ’’ ಎಂದಿದ್ದಾರೆ.
ಎಕ್ಸ್‌ಪ್ರೆಸ್‌ವೇ ಸಾವಿರಾರು ಯುವಕರಿಗೆ ಹಲವಾರು ಉದ್ಯೋಗಗಳು ಮತ್ತು ಹಲವಾರು ಹೊಸ ಅವಕಾಶಗಳನ್ನು ತರುತ್ತದೆ. ಮುಂದಿನ ಪೀಳಿಗೆಯಲ್ಲಿ ಮೂಲಸೌಕರ್ಯಗಳನ್ನು ಹೊಂದಿರುವ ಅತ್ಯಂತ ಆಧುನಿಕ ರಾಜ್ಯವಾಗಿ ಉತ್ತರ ಪ್ರದೇಶ ಗುರುತಿಸಲ್ಪಡುವ ದಿನ ದೂರವಿಲ್ಲ. ಯುಪಿಯಲ್ಲಿ ಹೆದ್ದಾರಿಗಳ ಸಮೂಹ, ನಿರ್ಮಿಸಲಾಗುತ್ತಿರುವ ಹೊಸ ವಿಮಾನ ನಿಲ್ದಾಣಗಳು, ಹೊಸ ರೈಲು ಮಾರ್ಗಗಳು ಮುಂದೆ ಜನರಿಗೆ ಏಕಕಾಲದಲ್ಲಿ ಹಲವಾರು ಉಪಯೋಗಗಳನ್ನು ಒದಗಿಸಲಿವೆ ಎಂದು ಮೋದಿ ನುಡಿದಿದ್ದಾರೆ.
#WATCH | Shahjahanpur: PM says, “Yogi ji was saying that in Kashi, Modi ji offered prayers to Lord Shiva & then worshipped workers, soon after. They were felicitated with showering of flower petals. You came to know this as there was camera but our govt works for poor day&night.” pic.twitter.com/7sw2RCdLFb
— ANI UP (@ANINewsUP) December 18, 2021
‘‘ಇಂದು ಉತ್ತರ ಪ್ರದೇಶದಲ್ಲಿ ಆಧುನಿಕ ಮೂಲಸೌಕರ್ಯಕ್ಕಾಗಿ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಲಾಗಿದೆ ಎಂಬುದು ಕಾಣಸಿಗುತ್ತದೆ. ಈ ಹಿಂದೆ ಸಾರ್ವಜನಿಕರ ಹಣವನ್ನು ಹೇಗೆ ಬಳಸಲಾಗಿದೆ ಎಂಬುದನ್ನು ನೀವು ನೋಡಿದ್ದೀರಿ. ಆದರೆ ಇಂದು ಉತ್ತರ ಪ್ರದೇಶದ ಹಣವನ್ನು ರಾಜ್ಯದ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಈ ಹಿಂದೆ ತಮ್ಮ ಖಜಾನೆಯನ್ನು ತಾವೇ ತುಂಬಿಸಿಕೊಳ್ಳಲು ದೊಡ್ಡ ದೊಡ್ಡ ಯೋಜನೆಗಳನ್ನು ಕಾಗದದಲ್ಲಿ ಆರಂಭಿಸಲಾಗುತ್ತಿತ್ತು’’ ಎಂದು ಪ್ರಧಾನಿ ವಿಪಕ್ಷಗಳನ್ನು ಕುಟುಕಿದ್ದಾರೆ. ಪ್ರಸ್ತುತ ಜನರ ಹಣವನ್ನು ಯೋಜನೆಗಳಿಗೆ ಬಳಸಲಾಗುತ್ತಿದೆ. ಇದರ ಹಣ ಜನರಲ್ಲೇ ಉಳಿಯಲಿದೆ ಎಂದು ಮೋದಿ ನುಡಿದಿದ್ದಾರೆ.
The modern infrastructure coming up in UP today shows how resources are utilised. You have seen how public’s money was used earlier. But today, UP’s money is being used for UP’s development. Earlier, big projects were started on paper so that they can fill their own coffers: PM pic.twitter.com/rAUe1fpYuG
— ANI UP (@ANINewsUP) December 18, 2021
ಏನಿದು ಗಂಗಾ ಎಕ್ಸ್‌ಪ್ರೆಸ್‌ವೇ?
ಉತ್ತರಪ್ರದೇಶದ ಪಶ್ಚಿಮ ಮತ್ತು ಪೂರ್ವ ಭಾಗವನ್ನು ಸಂಪರ್ಕಿಸುವ ‘ಗಂಗಾ ಎಕ್ಸ್ಪ್ರೆಸ್ ವೇ’, ದೆಹಲಿ, ಹರ್ಯಾಣ ಮತ್ತು ಬಿಹಾರಕ್ಕೆ ಉತ್ತರಪ್ರದೇಶವನ್ನು ಇನ್ನಷ್ಟು ಸಮೀಪ ಮಾಡಲಿದೆ. ಗಂಗಾ ಎಕ್ಸ್ಪ್ರೆಸ್ ವೇ 594 ಕಿಮೀ ಉದ್ದ ಇರಲಿದ್ದು, 2020ರ ನವೆಂಬರ್ 26ರಂದು ಯೋಗಿ ಆದಿತ್ಯನಾಥ್ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿತ್ತು. ಸುಮಾರು ₹ 36,000 ಕೋಟಿ ಅನುದಾನದಲ್ಲಿ ಈ ಯೋಜನೆ ನಿರ್ಮಾಣವಾಗುತ್ತಿದೆ.
ಗಂಗಾ ಎಕ್ಸ್ಪ್ರೆಸ್ ವೇ ಮೀರತ್ನಿಂದ ಪ್ರಾರಂಭವಾಗಲಿದ್ದು, ಹಾಪುರ, ಬುಲಂದ್‌ಶಹರ್, ಅಮ್ರೋಹಾ, ಸಂಭಲ್, ಬಾದೌನ್, ಶಹಜಹಾನ್‌ಪುರ, ಹರ್ದೋಯಿ, ಉನ್ನಾವೋ, ರಾಯ್ ಬರೇಲಿ ಮತ್ತು ಪ್ರತಾಪ್‌ಗಢಗಳ ಮೂಲಕ ಹಾದುಹೋಗಲಿದೆ. ರಾಜ್ಯದಲ್ಲಿರುವ ಉಳಿದ ಎಕ್ಸ್ಪ್ರೆಸ್ವೇಗಳಂತೆ ಈ ಎಕ್ಸ್ಪ್ರೆಸ್ ವೇ ಕೂಡ ಏರ್ಸ್ಟ್ರಿಪ್ ಹೊಂದಿರಲಿದ್ದು, ವಿಮಾನಗಳ ತುರ್ತು ಭೂಸ್ಪರ್ಶಕ್ಕೆ ಅವಕಾಶ ಇರಲಿದೆ.
ಯೋಜನೆಯ ವಿನ್ಯಾಸದ ಪ್ರಕಾರ ಎಕ್ಸ್ಪ್ರೇಸ್ ವೇಗೆ ಘರ್ಮುಕ್ತೇಶ್ವರ್ನಲ್ಲಿ ಸೇತುವೆ ನಿರ್ಮಾಣವಾಗಲಿದೆ. ಇದು ಹಾಪುರ ಮತ್ತು ಬುಲಂದ್‌ಶಹರ್ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಅದರ ಹೊರತಾಗಿ ಗಂಗಾ ಎಕ್ಸ್ಪ್ರೆಸ್ ವೇ ಮಧ್ಯೆ, 9 ಸಾರ್ವಜನಿಕ ಅನುಕೂಲ ಕೇಂದ್ರಗಳು, 7 ರೈಲ್ವೆ ಮೇಲ್ಸೇತುವೆಗಳು, 14 ದೊಡ್ಡ ಸೇತುವೆಗಳು, 126 ಚಿಕ್ಕ ಸೇತುವೆಗಳು, 381 ಅಂಡರ್ಪಾಸ್ಗಳು ನಿರ್ಮಾಣವಾಗಲಿವೆ.
ಇದನ್ನೂ ಓದಿ:
ಮದ್ಯದ ದೊರೆ ವಿಜಯ್ಮಲ್ಯ ಜೀವನಾಧಾರಿತ ಬಯೋಪಿಕ್ ಚಿತ್ರೀಕರಣ ಶೀಘ್ರದಲ್ಲೇ ಆರಂಭ
Published On - 2:32 pm, Sat, 18 December 21