AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ: ಮೂರು ಪ್ರಮುಖ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ

ಗಗನ್‌ಯಾನ್ ಮಿಷನ್‌ನ ಪ್ರಗತಿಯನ್ನು ಪರಿಶೀಲಿಸಿದ ಪ್ರಧಾನಿ ದೇಶದ ಮೊದಲ ಮಾನವ ಬಾಹ್ಯಾಕಾಶ ಯಾನಕ್ಕಾಗಿ ತರಬೇತಿ ಪಡೆಯುತ್ತಿರುವ ನಾಲ್ಕು ಗಗನಯಾತ್ರಿಗಳ ಹೆಸರನ್ನು ಘೋಷಿಸಿದರು. ಈ ಬಗ್ಗೆ ಮಾತನಾಡಿದ ಅವರು ಇದು ಕೇವಲ 4 ಹೆಸರುಗಳು ಅಥವಾ 4 ಮನುಷ್ಯರಲ್ಲ, 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲು ಹೊರಟಿರುವ ನಾಲ್ಕು ಶಕ್ತಿಗಳು. 40 ವರ್ಷಗಳ ನಂತರ ಭಾರತೀಯನೊಬ್ಬ ಬಾಹ್ಯಾಕಾಶಕ್ಕೆ ಹೋಗುತ್ತಿದ್ದಾನೆ ಎಂದಿದ್ದಾರೆ

ಕೇರಳ: ಮೂರು ಪ್ರಮುಖ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Feb 27, 2024 | 1:31 PM

ತಿರುವನಂತಪುರಂ ಫೆಬ್ರವರಿ 27: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು(ಮಂಗಳವಾರ) ಕೇರಳದಲ್ಲಿ (Kerala) ಮೂರು ಪ್ರಮುಖ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ PSLV ಇಂಟಿಗ್ರೇಷನ್ ಫೆಸಿಲಿಟಿ (PIF), ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ ಹೊಸ ‘ಸೆಮಿ-ಕ್ರಯೋಜೆನಿಕ್ಸ್ ಇಂಟಿಗ್ರೇಟೆಡ್ ಇಂಜಿನ್ ಮತ್ತು ಸ್ಟೇಜ್ ಟೆಸ್ಟ್ ಸೌಲಭ್ಯ’, ತಿರುವನಂತಪುರದ VSSC ನಲ್ಲಿ ‘ಟ್ರೈಸಾನಿಕ್ ವಿಂಡ್ ಟನಲ್’ ಈ ಮೂರು ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ಪ್ರಸ್ತುತ ಯೋಜನೆಗಳನ್ನ ಸುಮಾರು ₹1,800 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಗಗನ್‌ಯಾನ್ ಮಿಷನ್‌ನ ಪ್ರಗತಿಯನ್ನು ಪರಿಶೀಲಿಸಿದ ಪ್ರಧಾನಿ ದೇಶದ ಮೊದಲ ಮಾನವ ಬಾಹ್ಯಾಕಾಶ ಯಾನಕ್ಕಾಗಿ ತರಬೇತಿ ಪಡೆಯುತ್ತಿರುವ ನಾಲ್ಕು ಗಗನಯಾತ್ರಿಗಳ ಹೆಸರನ್ನು ಘೋಷಿಸಿದರು.

ನಾಲ್ವರು ಗಗನಯಾತ್ರಿಗಳು: ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ಶುಭಾಂಶು ಶುಕ್ಲಾ.

ಮೋದಿ ಮಾತು

ಕೇರಳ ರಾಜ್ಯದ ರಾಜಧಾನಿ ಬಳಿಯ ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (VSSC) ಮೋದಿ ಈ ಹೆಸರು ಘೋಷಿಸಿದ್ದಾರೆ. ಈ ಅವರು ನಾಲ್ವರಿಗೆ ಮೋದಿ astronaut wings ನೀಡಿದ್ದಾರೆ. ‘ಅವರು ಕೇವಲ 4 ಹೆಸರುಗಳು ಅಥವಾ 4 ಮನುಷ್ಯರಲ್ಲ, 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲು ಹೊರಟಿರುವ ನಾಲ್ಕು ಶಕ್ತಿಗಳು. 40 ವರ್ಷಗಳ ನಂತರ ಭಾರತೀಯನೊಬ್ಬ ಬಾಹ್ಯಾಕಾಶಕ್ಕೆ ಹೋಗುತ್ತಿದ್ದಾನೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಮೋದಿ

ಗಗನ್‌ಯಾನ್ ಮಿಷನ್ ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾಗಿದ್ದು, ಇದಕ್ಕಾಗಿ ವಿವಿಧ ಇಸ್ರೋ ಕೇಂದ್ರಗಳಲ್ಲಿ ವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ.

ಇದನ್ನೂ ಓದಿ: ಇಂದಿನಿಂದ ಮೂರು ರಾಜ್ಯಗಳಿಗೆ ಮೋದಿ ಪ್ರವಾಸ; ಇಲ್ಲಿದೆ ಎರಡು ದಿನಗಳ ಕಾರ್ಯಕ್ರಮದ ಪಟ್ಟಿ

ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ (ವಿಎಸ್‌ಎಸ್‌ಸಿ) ಭೇಟಿ ನೀಡಿದ ಪ್ರಧಾನಿ ಮೋದಿ ಜತೆ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇರಳ ಸಿಎಂ ಪಿಣರಾಯಿ ವಿಜಯನ್, ಎಂಒಎಸ್ ಮುರಳೀಧರನ್ ಕೂಡಾ ಇದ್ದರು. ಈ ಸಂದರ್ಭದಲ್ಲಿ ಇಸ್ರೋ ಅಧ್ಯಕ್ಷ ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್
ನೀವು ನೀರು ನಿಲ್ಲಿಸಿದ್ರೆ, ನಾವು ನಿಮ್ಮ ಉಸಿರು ನಿಲ್ಲಿಸ್ತೇವೆ: ಪಾಕ್