WITT Tv9 Global Summit 2024: ಪ್ರಧಾನಿ ಮೋದಿ ಅವರಲ್ಲಿರುವ ಸರಳತೆ, ಸೌಮ್ಯತೆ ನನ್ನಲ್ಲಿಲ್ಲ, ಅವರು ನಿರಹಂಕಾರ ಸ್ವಭಾವದವರು: ರಾಜನಾಥ ಸಿಂಗ್ ರಕ್ಷಣಾ ಸಚಿವ
ಉಕ್ರೆನ್ ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಪ್ರಧಾನಿ ಮೋದಿ ಹೇಗೆ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದರು ಅನ್ನೋದು ಎಲ್ಲರಿಗೂ ಗೊತ್ತಿದೆ. ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿ ಸುಮಾರು 4-5 ಗಂಟೆಗಳ ಕಾಲ ಯುದ್ಧ ನಿಲ್ಲಿಸಿ ನಮ್ಮ ವಿದ್ಯಾರ್ಥಿಗಳನ್ನು ವಾಪಸ್ಸು ಕರೆತಂದರು ಎಂದ ಸಿಂಗ್ ಬೇರೆ ಯಾವುದೇ ರಾಷ್ಟ್ರಾಧ್ಯಕ್ಷನಿಗೆ ಸಾಧ್ಯವಾಗದ್ದು ಮೋದಿಗೆ ಸಾಧ್ಯವಾಗುತ್ತದೆ ಅಂತ ಹೇಳಿದರು.
ದೆಹಲಿ: ಟಿವಿ9 ನೆಟ್‌ವರ್ಕ್‌ನ ವ್ಹಾಟ್ ಇಂಡಿಯಾ ಥಿಂಕ್ಸ್ ಟುಡೇ (What India Thinks Today) ಕಾನ್ಕ್ಲೇವ್‌ನ ಮೂರನೇ ದಿನವಾಗಿರುವ ಇಂದು ಸತ್ತಾ ಸಮಾವೇಶದಲ್ಲಿ ಭಾಗವಹಿಸಿ ಮಾತಾಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್ (Rajnath Singh) ಅವರು, ತಾನು ಸರಳ ಮತ್ತು ಸೌಮ್ಯ ಸ್ವಭಾವದ ವ್ಯಕ್ತಿಯಲ್ಲ ಎಂದು ಹೇಳಿ ಅಂಥ ವ್ಯಕ್ತಿತ್ವ ಕೇವಲ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗೆ ಮಾತ್ರ ಇದೆ ಎಂದು ಹೇಳಿದರು. ಅವರಲ್ಲಿರುವಷ್ಟು ಸಹನಶೀಲತೆ, ಸರಳತೆ, ನಿರಂಹಂಕಾರ ಭಾವ ತಮ್ಮಲ್ಲಿ ಖಂಡಿತ ಇಲ್ಲ, ಮೋದಿಯವರಂಥ ಸರಳ ಸಜ್ಜನಿಕೆಯ ವ್ಯಕ್ತಿ ಮಾತ್ರ ಒಬ್ಬ ಪೌರಕಾರ್ಮಿಕನ ಪಾದತೊಳೆಯುವುದು ಮತ್ತು ಬಡಜನರೊಂದಿಗೆ ಅವರದ್ದೇ ಕುಟುಂಬದ ಒಬ್ಬ ಸದಸ್ಯನ ಹಾಗೆ ಮಾತಾಡುವದು ಸಾಧ್ಯವಾಗುತ್ತದೆ ಸಾಧ್ಯವಾಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು. ಪ್ರಧಾನಿ ಮೋದಿಯವರಲ್ಲಿ ಅಹಂಕಾರ ಅನ್ನೋದು ಲವಲೇಶದಷ್ಟೂ ಇಲ್ಲ, ಅಹಂಕಾರವಿದ್ದರೆ ಗೌರವ ಸಿಗಲ್ಲ, ಒಬ್ಬ ಅಹಂಕಾರಿಯ ವ್ಯಕ್ತಿತ್ವ ಕುಬ್ಜವೆನಿಸುತ್ತದೆ, ಸಮಾಜ ಅಂಥ ವ್ಯಕ್ತಿಯನ್ನು ಗೌರವಿಸದು, ಆದರೆ ನಮ್ಮ ಪ್ರಧಾನಿಯನ್ನು ದೇಶದ ಎಲ್ಲ ವರ್ಗಗಳ ಜನ ಗೌರವಿಸುತ್ತಾರೆ ಮತ್ತು ವಿದೇಶಗಳಲ್ಲಿ ಅವರಿಗೆ ಸಿಗುವ ಮನ್ನಣೆ ಹೇಗಿದೆ ಅಂತ ಎಲ್ಲರಿಗೂ ಗೊತ್ತಿದೆ ಎಂದು ಸಿಂಗ್ ಹೇಳಿದರು.
ರಷ್ಯ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ, ಹಮಾಸ್ ಮೇಲೆ ಇಸ್ರೇಲ್ ದಾಳಿ ನಡೆಸಿದೆ, ವಿಶ್ವದ ನಾನಾ ಭಾಗಗಳಲ್ಲಿ ಅಶಾಂತಿ ತಲೆದೋರಿದೆ, ಅದರೆ ಈ ಎಲ್ಲ ದೇಶಗಳಿಗೆ ಶಾಂತಿಯ ಸಂದೇಶ ನೀಡುವುದು ಮತ್ತು ವಿಶ್ವಶಾಂತಿಯನ್ನು ಪ್ರತಿಪಾದಿಸುವುದು ಕೇವಲ ಮೋದಿ ನೇತೃತ್ವದ ಭಾರತದಿಂದ ಮಾತ್ರ ಸಾಧ್ಯ. ಉಕ್ರೆನ್ ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಪ್ರಧಾನಿ ಮೋದಿ ಹೇಗೆ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದರು ಅನ್ನೋದು ಎಲ್ಲರಿಗೂ ಗೊತ್ತಿದೆ. ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿ ಸುಮಾರು 4-5 ಗಂಟೆಗಳ ಕಾಲ ಯುದ್ಧ ನಿಲ್ಲಿಸಿ ನಮ್ಮ ವಿದ್ಯಾರ್ಥಿಗಳನ್ನು ವಾಪಸ್ಸು ಕರೆತಂದರು ಎಂದ ಸಿಂಗ್ ಬೇರೆ ಯಾವುದೇ ರಾಷ್ಟ್ರಾಧ್ಯಕ್ಷನಿಗೆ ಸಾಧ್ಯವಾಗದ್ದು ಮೋದಿಗೆ ಸಾಧ್ಯವಾಗುತ್ತದೆ ಅಂತ ಹೇಳಿದರು.
ಕೋವಿಡ್ ಸಮಯದಲ್ಲಿ ವಿಶ್ವದ ಎಲ್ಲ ಇಕಾನಮಿಗಳು ಪಾತಾಳಕ್ಕೆ ಮುಟ್ಟಿದರೂ ಭಾರತದ ಇಕಾನಮಿ ಶೇಕಡ 6-7 ರಷ್ಟು ಪ್ರಗತಿ ತೋರಿಸುತಿತ್ತು ಮತ್ತು ಪ್ರಸ್ತುತವಾಗಿ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಇಕಾನಮಿಯಾಗಿದೆ ಎಂದು ರಾಜನಾಥ ಸಿಂಗ್ ಹೇಳಿದರು. ಮುಂದುವರಿದು ಮಾತಾಡಿದ ಅವರು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು. ಪ್ರತಿ ದಿನ ಪ್ರತಿಪಕ್ಷಗಳು ಒಂದಷ್ಟು ವಿವಾದಗಳನ್ನು ಹುಟ್ಟು ಹಾಕುತ್ತಲೇ ಇರುತ್ತವೆ ಎಂದ ಅವರು ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡಿ, ಅವರು ಭಯಗೊಂಡಿದ್ದಾರೆ, ಅದಕ್ಕೇ ಹೆದರಬೇಡಿ ಎಂದು ಬೇರೆಯವರಿಗೆ ಹೇಳುತ್ತಾರೆ, ನಮ್ಮ ಸರ್ಕಾರ ಯಾರಿಗೂ ಹೆದರುವುದಿಲ್ಲ ಎಂದು ಸಿಂಗ್ ಹೇಳಿದರು. ನಮ್ಮ ಸರ್ಕಾರ ಎಲ್ಲರನ್ನೂ ಜೊತೆಯಾಗಿ ಕರೆದೊಯ್ಯುವ ಕೆಲಸ ಮಾಡುತ್ತಿದೆ ಆದರೆ ರಾಹುಲ್‌ಗೆ ಯಾಕೆ ಭಯವಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ ಎಂದು ಸಿಂಗ್ ಕಿಡಿಕಾರಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: WITT TV9 Global Summit 2024: ಅಸಾದುದ್ದೀನ್ ಓವೈಸಿ ಮಾತನಾಡಿದಷ್ಟು ಪ್ರಧಾನಿ ಮೋದಿಗೆ ಲಾಭ ಹೆಚ್ಚು: ಬಾಬಾ ರಾಮ್ದೇವ್