ಮಂಗಳೂರು-ಮಡಗಾಂವ್‌ ಹಾಗೂ ಕೊಯಮತ್ತೂರು-ಬೆಂಗಳೂರು ವಂದೇ ಭಾರತ್​ ರೈಲಿಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ

ಮಂಗಳೂರು-ಮಡಗಾಂವ್‌ ವಂದೇ ಭಾರತ್ ರೈಲು ಹಾಗೂ ಕೊಯಮತ್ತೂರು-ಬೆಂಗಳೂರು ವಂದೇ ಭಾರತ್​ಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ಸಿಕ್ಕಿದೆ. ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು.

ಮಂಗಳೂರು-ಮಡಗಾಂವ್‌ ಹಾಗೂ ಕೊಯಮತ್ತೂರು-ಬೆಂಗಳೂರು ವಂದೇ ಭಾರತ್​ ರೈಲಿಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ
ವಂದೇ ಭಾರತ್ ರೈಲು
Edited By: ಆಯೇಷಾ ಬಾನು

Updated on: Dec 30, 2023 | 1:45 PM

ದೆಹಲಿ, ಡಿ.30: ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 2 ಹೊಸ ಅಮೃತ್ ಭಾರತ್ ರೈಲುಗಳು ಮತ್ತು ಆರು ಹೊಸ ವಂದೇ ಭಾರತ್ ರೈಲುಗಳಿಗೆ (Vande Bharat Train) ಹಸಿರು ನಿಶಾನೆ ತೋರಿಸಿದ್ದಾರೆ. ಇಂದು ಒಂದೇ ದಿನ 8 ಟ್ರೈನ್​ಗಳನ್ನು ಉದ್ಘಾಟನೆ ಮಾಡಿದ್ದಾರೆ. ಈ 8 ಟ್ರೈನ್​ಗಳ ಪೈಕಿ ನಮ್ಮ ರಾಜ್ಯಕ್ಕೆ ಎರಡು ಟ್ರೈನ್​ಗಳನ್ನು ನೀಡಲಾಗಿದೆ. ಮಂಗಳೂರು-ಮಡಗಾಂವ್‌ ವಂದೇ ಭಾರತ್ ರೈಲು ಹಾಗೂ ಕೊಯಮತ್ತೂರು-ಬೆಂಗಳೂರು ವಂದೇ ಭಾರತ್​ಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ಸಿಕ್ಕಿದೆ.

ಬೆಳಗ್ಗೆ 5 ಗಂಟೆಗೆ ಕೊಯಮತ್ತೂರಿನಿಂದ ಹೊರಟ ರೈಲು 11.30ಕ್ಕೆ ಬೆಂಗಳೂರು ತಲುಪಲಿದೆ. ಮಧ್ಯಾಹ್ನ 1.40ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 8 ಗಂಟೆಗೆ ಕೊಯಮತ್ತೂರು ತಲುಪಿದೆ. ಅಂತಾರಾಜ್ಯಗಳ ನಡುವೆ ಸಂಚರಿಸುವ ನಾಲ್ಕನೇ ವಂದೇ ಭಾರತ್‌ ರೈಲು ಇದಾಗಿದೆ. ಇನ್ನು ಮಂಗಳೂರು ಮಡಗಾಂವ್ ರೈಲು ಬೆಳಗ್ಗೆ 11 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟಿ ಸಂಜೆ 4.40ಕ್ಕೆ ಮಡ್ಗಾಂವ್‌ ತಲುಪಲಿದೆ.

ಇದನ್ನೂ ಓದಿ: ಮಂಗಳೂರು ಗೋವಾ ವಂದೇ ಭಾರತ್ ರೈಲು ವೇಳಾಪಟ್ಟಿ, ಪ್ರಯಾಣದ ಸಮಯ: ಇಲ್ಲಿದೆ ಪೂರ್ಣ ವಿವರ

ಇನ್ನು ವಂದೇ ಭಾರತ್ ರೈಲಿಗೆ ಚಾಲನೆ ಹಿನ್ನೆಲೆ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಸಂತಸ ಹಂಚಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಗಂಟೆಗೆ 160 ಕಿ.ಮೀ ವೇಗದಲ್ಲಿ ವಂದೇ ಭಾರತ್ ರೈಲು ಸಂಚರಿಸುತ್ತೆ. ಮಂಗಳವಾರ ಹೊರತುಪಡಿಸಿ ವಾರದ ಆರು ದಿನವೂ ಸಂಚಾರ ಮಾಡಲಿದೆ. ಬೆ.8.30ಕ್ಕೆ ಮಂಗಳೂರಿನಿಂದ ಆರಂಭಿಸಿ ಮಧ್ಯಾಹ್ನ 1.15ಕ್ಕೆ ಗೋವಾದ ಮಡಗಾಂವ್ ತಲುಪಲಿದೆ. ಮತ್ತೆ ಸಂಜೆ ಮಡಗಾಂವ್ ನಿಂದ 6.10ಕ್ಕೆ ಹೊರಟು ರಾತ್ರಿ 10.45ಕ್ಕೆ ಮಂಗಳೂರು ರೀಚ್ ಆಗುತ್ತೆ. ಒಂದು ದಿನದ ಗೋವಾ ಪ್ರಯಾಣಕ್ಕೆ ಇದು ನೆರವಾಗಲಿದೆ.

ಉಡುಪಿ ಮತ್ತು ಕಾರವಾರದಲ್ಲಿ ಮಾತ್ರ ಎರಡು ಕಡೆ ನಿಲುಗಡೆ ಇರಲಿದೆ. ಎಂಟು ಬೋಗಿಗಳ ಹವಾನಿಯಂತ್ರಿತ ವ್ಯವಸ್ಥೆಯನ್ನು ವಂದೇ ಭಾರತ್ ರೈಲು ಹೊಂದಿದೆ. ಏರ್ ಲೈನ್ ಮಾದರಿ ಸೀಟುಗಳ ಜೊತೆಗೆ ಎಕ್ಸಿಕ್ಯುಟಿವ್ ಚೇರ್ ಗಳ ವ್ಯವಸ್ಥೆ ಇದೆ. ಆನ್ ಬೋರ್ಡ್ ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆ‌ ಇದೆ. ಆನ್‌ಬೋರ್ಡ್ ವೈ-ಫೈ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಔಟ್‌ಲೆಟ್‌ಗಳು ಮತ್ತು ರೀಡಿಂಗ್ ಲೈಟ್‌ಗಳ ಸೌಲಭ್ಯ ಇದೆ. ಸ್ವಯಂಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್, ಸಿಸಿಟಿವಿ ಕ್ಯಾಮೆರಾಗಳು, ಸೆನ್ಸಾರ್ ಆಧರಿತ ವಾಶ್ ಬೇಸಿನ್ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: Vande Bharat: ಕರ್ನಾಟಕಕ್ಕೆ ನಾಲ್ಕನೇ ವಂದೇ ಭಾರತ್ ಟ್ರೈನ್; ಬೆಂಗಳೂರಿಂದ ತಮಿಳುನಾಡಿನ ಕೊಯಮತ್ತೂರಿಗೆ ಸಾಗಲಿದೆ ಎಕ್ಸ್​ಪ್ರೆಸ್ ರೈಲು

ಮಾತು ಮುಂದುವರೆಸಿದ ಸಂಸದ ನಳೀನ್ ಕುಮಾರ್, ಹಿಂದೆ ಕ್ರಿ.ಶ, ಕ್ರಿ.ಪೂ ಅನ್ನುತ್ತಿದ್ರು. ಬಳಿಕ ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯ ನಂತರ ಅಂತಾ ಹೇಳುತ್ತಿದ್ರು. ಈಗ 2014ರ ಪೂರ್ವ, 2014ರ ನಂತರ ಎನ್ನೊ ಹಾಗೆ ನರೇಂದ್ರ ಮೋದಿ ಅಭಿವೃದ್ಧಿ ಮಾಡಿದ್ದಾರೆ. ಹಿಂದಿನ ಅವಧಿಯಲ್ಲಿ ರೈಲ್ವೇ ಅಭಿವೃದ್ಧಿ ಆಮೆಗತಿಯಲ್ಲಿ ಸಾಗುತ್ತಿದ್ದವು. ಪ್ರಧಾನಿ ಮೋದಿ ಅದನ್ನು ನಾಗಾಲೋಟ ಮಾಡಿದ್ದಾರೆ. ಮಂಗಳೂರು-ಬೆಂಗಳೂರು, ಮಂಗಳೂರು-ಕೊಚ್ಚಿಗೆ ವಂದೇ ಭಾರತ್ ರೈಲು ಆರಂಭಿಸಲಿದ್ದೇವೆ‌. ಮಾರ್ಚ್ ನಲ್ಲಿ ಎಲೆಕ್ಟ್ರಿಕ್ ಲೈನ್ ಪೂರ್ಣಗೊಂಡರೇ ಏಪ್ರಿಲ್​ನಲ್ಲಿ ವಂದೇ ಭಾರತ್ ರೈಲು ಆರಂಭವಾಗುತ್ತೆ. ಯಾರೆಲ್ಲಾ ಗೋವಾಕ್ಕೆ ಹೋಗುವರಿದ್ದಾರೆ ಅವರೆಲ್ಲಾ ವಂದೇ ಭಾರತ್ ರೈಲು ಹತ್ತಿ ಎಂದು ಸಭಿಕರನ್ನು ಉದ್ದೇಶಿಸಿ ನಳಿನ್ ಕುಮಾರ್ ಕಟೀಲ್ ಹೇಳಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:24 pm, Sat, 30 December 23

Web contact

TV9 Kannada

Read More
Follow Us