ಕೊಚ್ಚಿ: ₹4,000 ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ

ಹೊಸ ಯೋಜನೆಗಳು ಅಭಿವೃದ್ಧಿಯ ಮೈಲುಗಲ್ಲುಗಳಾಗಿವೆ. ಕೊಚ್ಚಿಯಲ್ಲಿ ದೇಶದಲ್ಲೇ ಅತಿ ದೊಡ್ಡ ಡ್ರೈ ಡಾಕ್ ಯಾರ್ಡ್ ಇದೆ. ಕಳೆದ 10 ವರ್ಷಗಳಲ್ಲಿ, ಹಡಗು ವಲಯದಲ್ಲಿ ಭಾರಿ ಅಭಿವೃದ್ಧಿ ಕಂಡುಬಂದಿದೆ. ಕೇಂದ್ರ ಸುಧಾರಣಾ ಕ್ರಮಗಳಿಂದ ಬಂದರು ವಲಯದಲ್ಲಿ ಹೂಡಿಕೆ ಹೆಚ್ಚಿದೆ. ಸರಕು ಸಾಗಣೆ ಹಡಗುಗಳು ಇನ್ನು ಮುಂದೆ ಕಾಯಬೇಕಾಗಿಲ್ಲ. ಉದ್ಯೋಗಾವಕಾಶಗಳು ಹೆಚ್ಚಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ

ಕೊಚ್ಚಿ: ₹4,000 ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Jan 17, 2024 | 2:02 PM

ಕೊಚ್ಚಿ ಜನವರಿ 17: ಇಂದು ನನ್ನ ಪಾಲಿಗೆ ಸೌಭಾಗ್ಯದ ದಿನವಾಗಿದ್ದು, ಕೇರಳದ ಅಭಿವೃದ್ಧಿ ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ವಿಲ್ಲಿಂಗ್ಡನ್ ಐಲ್ಯಾಂಡ್‌ನಲ್ಲಿ ಕೊಚ್ಚಿ (kochi)ಅಂತಾರಾಷ್ಟ್ರೀಯ ಹಡಗು ದುರಸ್ತಿ ಕೇಂದ್ರ, ಡ್ರೈ ಡಾಕ್ (Dry Dock) ಮತ್ತು ಐಒಸಿಯ ಎಲ್‌ಪಿಜಿ ಆಮದು ಟರ್ಮಿನಲ್‌ನಂತಹ ರೂ 4000 ಕೋಟಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರವರು. ಹೊಸ ಯೋಜನೆಯಿಂದ ಹಡಗುಕಟ್ಟೆಯ ಸಾಮರ್ಥ್ಯ ಹಲವು ಪಟ್ಟು ಹೆಚ್ಚಾಗಲಿದೆ ಎಂದು ಪ್ರಧಾನಿ ಹೇಳಿದರು.

ಹೊಸ ಯೋಜನೆಗಳು ಅಭಿವೃದ್ಧಿಯ ಮೈಲುಗಲ್ಲುಗಳಾಗಿವೆ. ಕೊಚ್ಚಿಯಲ್ಲಿ ದೇಶದಲ್ಲೇ ಅತಿ ದೊಡ್ಡ ಡ್ರೈ ಡಾಕ್ ಯಾರ್ಡ್ ಇದೆ. ಕಳೆದ 10 ವರ್ಷಗಳಲ್ಲಿ, ಹಡಗು ವಲಯದಲ್ಲಿ ಭಾರಿ ಅಭಿವೃದ್ಧಿ ಕಂಡುಬಂದಿದೆ. ಕೇಂದ್ರ ಸುಧಾರಣಾ ಕ್ರಮಗಳಿಂದ ಬಂದರು ವಲಯದಲ್ಲಿ ಹೂಡಿಕೆ ಹೆಚ್ಚಿದೆ. ಸರಕು ಸಾಗಣೆ ಹಡಗುಗಳು ಇನ್ನು ಮುಂದೆ ಕಾಯಬೇಕಾಗಿಲ್ಲ. ಉದ್ಯೋಗಾವಕಾಶಗಳು ಹೆಚ್ಚಿವೆ. ಸಾಗಾಟ ವೇಗವಾಗಿದೆ. ಹೊಸ ಡ್ರೈ ಡಾಕ್ ರಾಷ್ಟ್ರದ ಹೆಮ್ಮೆ. ಹಡಗು ರಿಪೇರಿಗೆ ಹೊರ ದೇಶಗಳನ್ನು ಅವಲಂಬಿಸುವ ಪರಿಸ್ಥಿತಿಯನ್ನು ತಪ್ಪಿಸಲಾಗುವುದು. ಭಾರತ-ಗಲ್ಫ್ ಯುರೋಪ್ ಆರ್ಥಿಕ ಕಾರಿಡಾರ್ ಅಭಿವೃದ್ಧಿಯ ಉತ್ತೇಜನಕಾರಿಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇಂದು ಭಾರತವು ಜಾಗತಿಕ ವ್ಯಾಪಾರದ ಕೇಂದ್ರವಾಗುತ್ತಿರುವಾಗ ನಾವು ನಮ್ಮ ಸಮುದ್ರ ಶಕ್ತಿಯನ್ನು ಹೆಚ್ಚಿಸುತ್ತಿದ್ದೇವೆ.  ಇಂದು ದೇಶವು ತನ್ನ ಅತಿದೊಡ್ಡ ಡ್ರೈ ಡಾಕ್ (ಎನ್‌ಡಿಡಿ) ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ, ಹಡಗು ನಿರ್ಮಾಣ, ಹಡಗು ದುರಸ್ತಿ ಮೂಲಸೌಕರ್ಯಗಳು ಮತ್ತು LPG ಆಮದು ಟರ್ಮಿನಲ್ ಅನ್ನು ಸಹ ಉದ್ಘಾಟಿಸಲಾಗಿದೆ. ಈ ಹೊಸ ವೈಶಿಷ್ಟ್ಯಗಳೊಂದಿಗೆ, ಹಡಗುಕಟ್ಟೆಯ ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಈ ಸೌಲಭ್ಯಗಳಿಗಾಗಿ ನಾನು ಕೇರಳದ ಜನರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ ಮೋದಿ.

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯೋಜನೆ ಉದ್ಘಾಟನೆಗೆ ಆಗಮಿಸಿದ್ದಕ್ಕಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು. ಕೇರಳದ ನೆಲದಲ್ಲಿ 4000 ಕೋಟಿ ರೂ.ಗಳ ಯೋಜನೆಗಳನ್ನು ಜಾರಿಗೊಳಿಸಲು ಹೆಮ್ಮೆಪಡುತ್ತೇನೆ. ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಮೇಡ್ ಇನ್ ಕೇರಳದ ಕೊಡುಗೆ ಸಣ್ಣದಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಇದನ್ನೂ ಓದಿಕೇರಳದ ಗುರುವಾಯೂರು ಶ್ರೀಕೃಷ್ಣ ದೇವಾಲಯದಲ್ಲಿ ಮೋದಿ ಪ್ರಾರ್ಥನೆ; ಬಿಜೆಪಿ ನಾಯಕ ಸುರೇಶ್ ಗೋಪಿ ಮಗಳ ಮದುವೆಯಲ್ಲಿ ಭಾಗಿ

ಗುರುವಾಯೂರ್ ದೇವಸ್ಥಾನ ಮತ್ತು ತ್ರಿಪ್ರಯಾರ್ ಶ್ರೀ ರಾಮಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಪ್ರಧಾನಿ ಕೊಚ್ಚಿಗೆ ಆಗಮಿಸಿದ್ದಾರೆ. ಈ ಕಾರ್ಯಕ್ರಮದ ನಂತರ ಮರೇನ್ ಡ್ರೈವ್‌ನಲ್ಲಿ ಬಿಜೆಪಿಯ ‘ಶಕ್ತಿಕೇಂದ್ರ ಪ್ರಮುಖ್’ ಸಭೆಯಲ್ಲಿ ಭಾಗವಹಿಸಿ ಪ್ರಧಾನಿ ಹಿಂತಿರುಗಲಿದ್ದಾರೆ. ಗುರುವಾಯೂರು ದೇವಸ್ಥಾನಕ್ಕೆ ಆಗಮಿಸಿದ ಪ್ರಧಾನಿಯನ್ನು ದೇವಸ್ವಂ ಅಧಿಕಾರಿಗಳು ಬರಮಾಡಿಕೊಂಡರು. ದೇವಸ್ಥಾನದಲ್ಲಿ ಕಮಲದ ಮೊಗ್ಗುಗಳನ್ನು ಎತ್ತಿ ತುಲಾಭಾರ ಮಾಡಲಾಯಿತು. ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ, ನಟ ಮತ್ತು ಬಿಜೆಪಿ ನಾಯಕ ಸುರೇಶ್ ಗೋಪಿ ಅವರ ಪುತ್ರಿ ಭಾಗ್ಯಾ ಸುರೇಶ್ ಅವರ ವಿವಾಹದಲ್ಲಿ ಪ್ರಧಾನಿ ಭಾಗವಹಿಸಿದರು.

ಎರಡು ದಿನಗಳ ಕೇರಳ ಪ್ರವಾಸಕ್ಕಾಗಿ ಪ್ರಧಾನಿ ನಿನ್ನೆ ಕೊಚ್ಚಿಗೆ ಆಗಮಿಸಿದ್ದರು. ಸಂಜೆ 6.50ಕ್ಕೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬರಮಾಡಿಕೊಂಡರು. ಹೆಲಿಕಾಪ್ಟರ್ ಮೂಲಕ ಕೊಚ್ಚಿ ನೌಕಾ ವಿಮಾನ ನಿಲ್ದಾಣ ತಲುಪಿದ ಅವರು ಎಂ.ಜಿ.ರಸ್ತೆ ಮೂಲಕ ರಸ್ತೆ ಮೂಲಕ ಕೆಪಿಸಿಸಿ ಜಂಕ್ಷನ್ ತಲುಪಿದರು. ಅಲ್ಲಿಂದ ಆಸ್ಪತ್ರೆ ರಸ್ತೆ, ಪಾರ್ಕ್ ಅವೆನ್ಯೂ ರಸ್ತೆ ಮೂಲಕ ಸರ್ಕಾರಿ ಅತಿಥಿಗೃಹದವರೆಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:49 pm, Wed, 17 January 24