AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Global Investors Summit: ಯುಪಿ ಹೂಡಿಕೆದಾರರ ಸಭೆಗೆ ನರೇಂದ್ರ ಮೋದಿ ಚಾಲನೆ; ಅಭಿವೃದ್ಧಿಯತ್ತ ಭಾರತ ಎಂದ ಉದ್ಯಮಿಗಳು

PM Narendra Modi Inaugurates UP Global Investors Summit- ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ಲಕ್ನೋದಲ್ಲಿ ಉತ್ತರಪ್ರದೇಶ ಗ್ಲೋಬಲ್ ಇನ್ವೆಸ್ಟರ್ಸ್ ಸಮಿಟ್ 2023ಉದ್ಘಾಟನೆ ಮಾಡಿದ್ದಾರೆ. ಹಲವು ಕೇಂದ್ರ ಸಚಿವರು ಮತ್ತು ಉದ್ಯಮಿಗಳು ಉಪಸ್ಥಿತರಿದ್ದರು. 3 ದಿನಗಳ ಕಾಲ ಈ ಸಭೆ ನಡೆಯಲಿದೆ.

Global Investors Summit: ಯುಪಿ ಹೂಡಿಕೆದಾರರ ಸಭೆಗೆ ನರೇಂದ್ರ ಮೋದಿ ಚಾಲನೆ; ಅಭಿವೃದ್ಧಿಯತ್ತ ಭಾರತ ಎಂದ ಉದ್ಯಮಿಗಳು
ಪ್ರಧಾನಿ ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 10, 2023 | 12:13 PM

Share

ಲಕ್ನೋ: ಉತ್ತರಪ್ರದೇಶ ಸರ್ಕಾರ ಆಯೋಜಿಸಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಗೆ (UP Global Investors Summit 2023) ಚಾಲನೆ ಸಿಕ್ಕಿದೆ. ಲಕ್ನೋ ವಿಮಾನ ನಿಲ್ದಾಣ ಸಮೀಪದ ಬೃಂದಾವನ್ ಯೋಜನಾ ಪ್ರದೇಶದಲ್ಲಿ ನಡೆದಿರುವ ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಶುಕ್ರವಾರ ಬೆಳಗ್ಗೆ ಉದ್ಘಾಟಿಸಿದರು. ಈ ವೇಳೆ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಉದ್ಯಮಿಗಳಾದ ಮುಕೇಶ್ ಅಂಬಾನಿ, ಕೆಎಂ ಬಿರ್ಲಾ, ಆನಂದ್ ಮಹೀಂದ್ರ, ಎನ್ ಚಂದ್ರಶೇಖರನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಮಾತನಾಡಿದ ಟಾಟಾ ಅಂಡ್ ಸನ್ಸ್ ಸಂಸ್ಥೆಯ ಛೇರ್ಮನ್ ಎನ್ ಚಂದ್ರಶೇಖರನ್, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಕೊಂಡಾಡಿದರು.

ಭಾರತದ್ದು ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಆರ್ಥಿಕತೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಆರ್ಥಿಕ ಬೆಳವಣಿಗೆ ಸಾಧಿಸುವುದಲ್ಲದೇ 360 ಡಿಗ್ರಿ (ಸರ್ವಾಂಗೀಣ) ಅಭಿವೃದ್ಧಿಯನ್ನೂ ಹೊಂದುತ್ತದೆಎಂದು ಎನ್ ಚಂದ್ರಶೇಖರನ್ ಅಭಿಪ್ರಾಯಪಟ್ಟರು.

ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕೂಡ ಭಾರತ ಅಭಿವೃದ್ಧಿಪಥದಲ್ಲಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. “ಭಾರತ ವಿಶ್ವದಲ್ಲೇ ಅತಿ ಹೆಚ್ಚು ಯುವ ಸಮುದಾಯ ಹೊಂದಿದೆ. ಪ್ರಾದೇಶಿಕ ಅಸಮತೋಲನ ಬಹಳ ಬೇಗ ಕಣ್ಮರೆಯಾಗುತ್ತಿದೆ. ಭಾರತದ ಅಭಿವೃದ್ಧಿಗೆ ಈ ವರ್ಷದ ಬಜೆಟ್ ಅಡಿಗಲ್ಲು ಹಾಕಿದೆ. ಸುಭದ್ರ ಪ್ರಗತಿಯ ಹಾದಿಯಲ್ಲಿ ದೇಶ ಇದೆ. ಭಾರತೀಯರು ತಂತ್ರಜ್ಞಾನ ಅಭಿವೃದ್ಧಿಗೆ ಬಹಳ ಬೇಗ ಹೊಂದಿಕೊಳ್ಳುತ್ತಿದ್ದಾರೆ. ಅತಿ ವೇಗವಾಗಿ 5ಜಿ ಹೊರತರುತ್ತಿದ್ದೇವೆಎಂದು ಅಂಬಾನಿ ಹೇಳಿದರು.

ಇದನ್ನೂ ಓದಿ: Rajasthan Budget: ಹಳೆಯ ಬಜೆಟ್ ಓದಿ ನಗೆಪಾಟಲಿಗೆ ಗುರಿಯಾದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

27 ಲಕ್ಷ ಕೋಟಿ ಬಂಡವಾಳ?

ಉತ್ತರಪ್ರದೇಶ ರಾಜ್ಯಕ್ಕೆ ಬಂಡವಾಳ ಹರಿದುಬರಲು ಹೂಡಿಕೆದಾರರ ಸಮಾವೇಶ ಒಳ್ಳೆಯ ದಾರಿ ಮಾಡಿಕೊಟ್ಟಿದೆ. ಸರ್ಕಾರದ ಮಾಹಿತಿ ಪ್ರಕಾರ ಇನ್ವೆಸ್ಟರ್ಸ್ ಸಮಿಟ್​ನಿಂದ 10 ಲಕ್ಷ ಕೋಟಿ ರೂ ಮೊತ್ತದ ಹೂಡಿಕೆಗಳ ಗುರಿ ಇಡಲಾಗಿತ್ತು. ಆದರೆ, ಈಗಾಗಲೇ ಬಂದಿರುವ ಹೂಡಿಕೆ ಪ್ರಸ್ತಾವಗಳ ಮೊತ್ತ 27 ಲಕ್ಷ ಕೋಟಿ ರೂ ಗಡಿ ದಾಟಿದೆ. ಎಲ್ಲವೂ ಸುಸೂತ್ರವಾಗಿ ನಡೆದಲ್ಲಿ ಉತ್ತರಪ್ರದೇಶದಲ್ಲಿ ಎರಡು ಕೋಟಿಯಷ್ಟು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳುತ್ತಿವೆ.

ಮೂರು ದಿನಗಳ ಕಾಲ ನಡೆಯುವ ಶೃಂಗಸಭೆಯಲ್ಲಿ ಒಟ್ಟು 34 ಸೆಷೆನ್​ಗಳಿವೆ. ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಅಶ್ವಿನಿ ವೈಷ್ಣವ್ ಮೊದಲಾದವರು ಬೇರೆ ಬೇರೆ ಸೆಷನ್​ಗಳ ಅಧ್ಯಕ್ಷತೆ ವಹಿಸಲಿದ್ದಾರೆ.

Published On - 12:13 pm, Fri, 10 February 23