Rajasthan Budget: ಹಳೆಯ ಬಜೆಟ್ ಓದಿ ನಗೆಪಾಟಲಿಗೆ ಗುರಿಯಾದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್
ರಾಜ್ಯಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಮೂರನೇ ಅವಧಿಯ ಕೊನೆಯ ಬಜೆಟ್ ಅನ್ನು ಮಂಡಿಸಬೇಕಿತ್ತು, ಆದರೆ ವಿಧಾನಸಭೆಯಲ್ಲಿ ಹಳೆಯ ಬಜೆಟ್ ಓದಿ ನಗೆಪಾಟಲಿಗೆ ಗುರಿಯಾದರು
ರಾಜ್ಯಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಮೂರನೇ ಅವಧಿಯ ಕೊನೆಯ ಬಜೆಟ್ ಅನ್ನು ಮಂಡಿಸಬೇಕಿತ್ತು, ಆದರೆ ವಿಧಾನಸಭೆಯಲ್ಲಿ ಹಳೆಯ ಬಜೆಟ್ ಓದಿ ನಗೆಪಾಟಲಿಗೆ ಗುರಿಯಾದರು. ತಕ್ಷಣವೇ ಸಚಿವ ಮಹೇಶ್ ಜೋಶಿ ಗೆಹ್ಲೋಟ್ರನ್ನು ಮಧ್ಯದಲ್ಲೇ ತಡೆದರು, ಇದರಿಂದ ಸನದಲ್ಲಿ ಭಾರಿ ಕೋಲಾಹಲ ಉಂಟಾಯಿತು, ಕಲಾಪವನ್ನು ಮುಂದೂಡಲಾಯಿತು.
ಮೊದಲ ಬಾರಿಗೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಬಜೆಟ್ ಅನ್ನು ನೇರಪ್ರಸಾರ ಮಾಡಲಾಗುತ್ತಿತ್ತು. ರಾಜ್ಯದ ಜನಸಂಖ್ಯೆಯ ಶೇಕಡಾ 4 ರಷ್ಟಿರುವ ರಾಜ್ಯದ ಯುವಜನರ ಮತವನ್ನು ಗುರಿಯಾಗಿಟ್ಟುಕೊಂಡು ಗೆಹ್ಲೋಟ್ ಸರ್ಕಾರವು ಎಲ್ಲಾ ಕಾಲೇಜುಗಳಿಗೆ ಬಜೆಟ್ ಅನ್ನು ನೇರಪ್ರಸಾರ ಮಾಡಲು ವ್ಯವಸ್ಥೆ ಮಾಡಲು ಸುತ್ತೋಲೆ ಹೊರಡಿಸಿತ್ತು.
ಸುಮಾರು 7 ನಿಮಿಷಗಳ ಕಾಲ ಓದಿದ್ದರು, ಆಗ ಹಿಂದೆ ಕುಳಿತಿದ್ದ ಸಚಿವರು ಅವರ ಹಿಂದೆ ಬಂದು ಕಿವಿಯಲ್ಲಿ ಬಜೆಟ್ ಮಂಡನೆ ನಿಲ್ಲಿಸುವಂತೆ ಹೇಳಿದರು.
ತಕ್ಷಣ ದಿನಾಂಕ ನೋಡಿದ ಸಿಎಂ ಶಾಕ್ ಆಗಿದ್ದಾರೆ, ನಂತರ ಅವರೇ ನಗಲು ಪ್ರಾರಂಭಿಸಿದ್ದಾರೆ. ಬಜೆಟ್ ಸೋರಿಕೆಯಾಗಿದೆ ಎಂದು ಈಗಾಗಲೇ ದಾಳಿ ನಡೆಸುತ್ತಿರುವ ಬಿಜೆಪಿ ಗದ್ದಲವನ್ನು ತೀವ್ರಗೊಳಿಸಿದರು. ಹಲವು ಬಾರಿ ಮನವಿ ಮಾಡಿದರೂ ಗದ್ದಲ ನಿಲ್ಲದ ಕಾರಣ ಕಲಾಪವನ್ನು ಅರ್ಧಗಂಟೆ ಮುಂದೂಡಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ