AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mumbai: ಮುಂಬೈ ಪೆಂಟ್​ಹೌಸ್ 240 ಕೋಟಿಗೆ ಮಾರಾಟ; ದೇಶದ ಅತಿ ದುಬಾರಿ ಅಪಾರ್ಟ್​​ಮೆಂಟ್ ಡೀಲ್ ಇದು!

ದೇಶದ ವಾಣಿಜ್ಯ ನಗರಿ ಮುಂಬೈಯ ವರ್ಲಿಯಲ್ಲಿರುವ ಐಷಾರಾಮಿ ಪೆಂಟ್​ಹೌಸ್​ ಅನ್ನು ಉದ್ಯಮಿಯೊಬ್ಬರು 240 ಕೋಟಿ ರೂ.ಗೆ ಖರೀದಿಸಿದ್ದಾರೆ. ಇದನ್ನು ದೇಶದ ಅತಿ ದುಬಾರಿ ಅಪಾರ್ಟ್​​ಮೆಂಟ್ ಡೀಲ್ ಎಂದೇ ಹೇಳಲಾಗಿದೆ.

Mumbai: ಮುಂಬೈ ಪೆಂಟ್​ಹೌಸ್ 240 ಕೋಟಿಗೆ ಮಾರಾಟ; ದೇಶದ ಅತಿ ದುಬಾರಿ ಅಪಾರ್ಟ್​​ಮೆಂಟ್  ಡೀಲ್ ಇದು!
ಮುಂಬೈ ಪೆಂಟ್​ಹೌಸ್ 240 ಕೋಟಿಗೆ ಮಾರಾಟ; ದೇಶದ ಅತಿ ದುಬಾರಿ ಡೀಲ್ ಇದು!
Ganapathi Sharma
|

Updated on:Feb 10, 2023 | 3:28 PM

Share

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈ(Mumbai) ವರ್ಲಿಯಲ್ಲಿರುವ ಐಷಾರಾಮಿ ಪೆಂಟ್​ಹೌಸ್​ (Penthouse) ಅನ್ನು ಉದ್ಯಮಿಯೊಬ್ಬರು 240 ಕೋಟಿ ರೂ.ಗೆ ಖರೀದಿಸಿದ್ದಾರೆ. ಇದನ್ನು ದೇಶದ ಅತಿ ದುಬಾರಿ ಅಪಾರ್ಟ್​​ಮೆಂಟ್ ಡೀಲ್ ಎಂದೇ ಹೇಳಲಾಗಿದೆ. ವರ್ಲಿಯ ಅನ್ನಿ ಬೆಸೆಂಟ್​ ರಸ್ತೆಯಲ್ಲಿರುವ ‘ತ್ರೀ ಸಿಕ್ಸ್​ಟಿ ವೆಸ್ಟ್ (Three Sixty West)’ ಐಷಾರಾಮಿ ಪೆಂಟ್​ಹೌಸ್​ ಅನ್ನು ‘ವೆಲ್ಸ್​​ಪನ್ ಗ್ರೂಪ್​’ನ ಅಧ್ಯಕ್ಷ ಬಿ.ಕೆ. ಗೋಯೆಂಕಾ (BK Goenka) ಖರೀದಿಸಿದ್ದಾರೆ. ಮಾರುಕಟ್ಟೆ ಮೂಲಗಳ ಪ್ರಕಾರ ಪೆಂಟ್​ಹೌಸ್​​​ ಗಗನಚುಂಬಿ ಕಟ್ಟಡದ ಟವರ್ ಬಿ ವಿಭಾಗದ 63, 64 ಮತ್ತು 65ನೇ ಮಹಡಿಯಲ್ಲಿದೆ. ದುಬಾರಿ ಪೆಂಟ್​ಹೌಸ್ 30,000 ಚದರ ಅಡಿ ವ್ಯಾಪ್ತಿಯಲ್ಲಿದೆ. ಸರ್ಕಾರದ ಕೊಳೆಗೇರಿ ಪುನರ್ವಸತಿ ಯೋಜನೆಯಡಿ ರೂಪಿಸಲಾದ 300 ಚದರ ಅಡಿ ವಠಾರಕ್ಕಿಂತ ಸುಮಾರು 100 ಪಟ್ಟು ದೊಡ್ಡದಾಗಿದೆ ಎಂದು ವರದಿ ಉಲ್ಲೇಖಿಸಿದೆ. ಬುಧವಾರ (ಫೆಬ್ರವರಿ 8) ಖರೀದಿ ವಹಿವಾಟು ನಡೆದಿದೆ. ಖರೀದಿದಾರರು ಪೆಂಟ್​​ಹೌಸ್​ನಲ್ಲಿ ವಾಸಿಸುವ ಉದ್ದೇಶ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ದೇಶದಲ್ಲಿ ಈವರೆಗೆ ಮಾರಾಟವಾದ ಅಪಾರ್ಟ್​​ಮೆಂಟ್​ಗಳ ಪೈಕಿ ಇದುವೇ ಅತಿ ದುಬಾರಿಯದ್ದಾಗಿದೆ. ಅಲ್ಟ್ರಾ-ಲಕ್ಷುರಿ ಸೆಗ್ಮೆಂಟ್​ನಲ್ಲಿ ಮುಂದಿನ ಎರಡು ತಿಂಗಳ ಒಳಗಾಗಿ ಇನ್ನಷ್ಟು ವಹಿವಾಟಿನ ಗುರಿ ಹೊಂದಿದ್ದೇವೆ. ಯಾಕೆಂದರೆ 2023ರ ಏಪ್ರಿಕ್​ ಬಳಿಕ ತೆರಿಗೆ ಕಾಯ್ದೆಯ ಸೆಕ್ಷನ್ 54ರ ಅಡಿ ಬಂಡವಾಳ ಗಳಿಕೆಯ ಮಿತಿಯನ್ನು 10 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಗಳಿಕೆಗೆ ತೆರಿಗೆ ಪಾವತಿಸಬೇಕಾಗುತ್ತದೆ’ ಎಂದು ರಿಯಲ್ ಎಸ್ಟೇಟ್ ಸಂಸ್ಥೆ ಲೈಸೆಸ್ ಫೋರಸ್​ನ ಎಂಡಿ ಪಂಕಜ್ ಕಪೂರ್ ಹೇಳಿದ್ದಾರೆ.

ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಬಿಲ್ ಇಎಂಐಗೆ ಪರಿವರ್ತಿಸುವುದು ಒಳ್ಳೆಯದೇ? ಇಲ್ಲಿವೆ ಸಾಧಕ ಬಾಧಕಗಳ ವಿವರ

‘ತ್ರೀ ಸಿಕ್ಸ್​ಟಿ ವೆಸ್ಟ್’ ಟವರ್​ಗೆ ಹೊಂದಿಕೊಂಡಂತಿರುವ ಮತ್ತೊಂದು ಪೆಂಟ್​​ಹೌಸ್​ ಅನ್ನು ಬ್ಯುಲ್ಡರ್ ವಿಕಾಸ್ ಒಬೆರಾಯ್ 240 ಕೋಟಿ ರೂ.ಗೆ ಖರೀದಿಸಿದ್ದಾರೆ. ಬ್ಯುಲ್ಡರ್ ಹಾಗೂ ಉದ್ಯಮಿ ಸುಧಾಕರ್ ಶೆಟ್ಟಿ ಸಹಭಾಗಿತ್ವದಲ್ಲಿ ಒಬೆರಾಯ್ ಅವರು ಐಷಾರಾಮಿ ಪೆಂಟ್​​ಹೌಸ್ ಅಭಿವೃದ್ಧಿಪಡಿಸಿದ್ದಾರೆ. ಇದನ್ನು ತಮ್ಮ ಕಂಪನಿ ಆರ್​​.ಎಸ್​​. ಎಂಟರ್​ಪ್ರೈಸಸ್ ಲಿಮಿಟೆಡ್​ನಿಂದ ಒಬೆರಾಯ್ ಖರೀದಿಸಿದ್ದಾರೆ ಎನ್ನಲಾಗಿದೆ.

ಪೆಂಟ್​ಹೌಸ್​ ಎಂದರೇನು?

ಗಗನಚುಂಬಿ ಕಟ್ಟದ ಅತಿ ಎತ್ತರದ ಮಹಡಿಯಲ್ಲಿರುವ ಫ್ಲ್ಯಾಟ್​ ಅನ್ನು ಸಾಮಾನ್ಯವಾಗಿ ಪೆಂಟ್​ಹೌಸ್ ಎಂದು ಕರೆಯಲಾಗುತ್ತದೆ. ಪೆಂಟ್​ಹೌಸ್ ಎಂದು ಕರೆಯಲ್ಪಡುವ ಈ ಫ್ಲ್ಯಾಟ್​ಗಳು ಅತ್ಯಂತ ಐಷಾರಾಮಿಯಾಗಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Fri, 10 February 23

ಮಾತೃ ಭಾಷೆ ತೆಲುಗು, ಜೀವನದ ಭಾಷೆ ಕನ್ನಡ: ಸಾಯಿಕುಮಾರ್
ಮಾತೃ ಭಾಷೆ ತೆಲುಗು, ಜೀವನದ ಭಾಷೆ ಕನ್ನಡ: ಸಾಯಿಕುಮಾರ್
ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​: 80 ಅರ್ಜಿಗಳು ರಿಜೆಕ್ಟ್​
ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​: 80 ಅರ್ಜಿಗಳು ರಿಜೆಕ್ಟ್​
ಗಣರಾಜ್ಯೋತ್ಸವ 2026: ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳ ಉಪಹಾರ ವಿತರಣೆ
ಗಣರಾಜ್ಯೋತ್ಸವ 2026: ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳ ಉಪಹಾರ ವಿತರಣೆ
ರೈತರ ಪ್ರತಿಭಟನೆ ವೇಳೆ ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ
ರೈತರ ಪ್ರತಿಭಟನೆ ವೇಳೆ ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ
ಚೋರ್ಲಾ ಘಾಟ್‌ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್​​ ವರಿಷ್ಠಾಧಿಕಾರಿ
ಚೋರ್ಲಾ ಘಾಟ್‌ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್​​ ವರಿಷ್ಠಾಧಿಕಾರಿ
ಬಿಬಿಎಲ್​ನಲ್ಲಿ ದಾಖಲೆಯ 6ನೇ ಬಾರಿಗೆ ಪ್ರಶಸ್ತಿ ಗೆದ್ದ ಪರ್ತ್ ಸ್ಕಾರ್ಚರ್ಸ್
ಬಿಬಿಎಲ್​ನಲ್ಲಿ ದಾಖಲೆಯ 6ನೇ ಬಾರಿಗೆ ಪ್ರಶಸ್ತಿ ಗೆದ್ದ ಪರ್ತ್ ಸ್ಕಾರ್ಚರ್ಸ್
ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ
ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ
ರಾಜ್ಯಪಾಲರ ಭಾಷಣದ ಕುರಿತು ಸಿದ್ದರಾಮಯ್ಯ ರಿಯಾಕ್ಷನ್ ಹೀಗಿತ್ತು!
ರಾಜ್ಯಪಾಲರ ಭಾಷಣದ ಕುರಿತು ಸಿದ್ದರಾಮಯ್ಯ ರಿಯಾಕ್ಷನ್ ಹೀಗಿತ್ತು!
ಪೊಲೀಸರಿಗೆ ನೀಡಿದ್ದ ವಿಡಿಯೋ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನರೆಡ್ಡಿ
ಪೊಲೀಸರಿಗೆ ನೀಡಿದ್ದ ವಿಡಿಯೋ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನರೆಡ್ಡಿ
ಹೌಸ್​ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ
ಹೌಸ್​ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ