AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani Row: ಹಿಂಡನ್​ಬರ್ಗ್ ವಿರುದ್ಧ ಅಮೆರಿಕದಲ್ಲಿ ಕಾನೂನು ಹೋರಾಟಕ್ಕೆ ಅಣಿಯಾದ ಅದಾನಿ; ಕಾನೂನು ಸಲಹಾ ಸಂಸ್ಥೆಗೆ ಮೊರೆ

ವಾಚೆಲ್ ಅಮೆರಿಕದ ದುಬಾರಿ ಮತ್ತು ಪ್ರತಿಷ್ಠಿತ ಕಾನೂನು ಸಂಸ್ಥೆಯಾಗಿದ್ದು, ಕಾರ್ಪೊರೇಟ್ ದಿಗ್ಗಜರ ವಿರುದ್ಧದ ಅನಿರೀಕ್ಷಿತ ಆರೋಪಗಳು ಮತ್ತು ದಾಳಿಗಳ ವಿರುದ್ಧ ಕಾನೂನು ಹೋರಾಟ ನಡೆಸಿದ ಹಿನ್ನೆಲೆ ಹೊಂದಿದೆ.

Adani Row: ಹಿಂಡನ್​ಬರ್ಗ್ ವಿರುದ್ಧ ಅಮೆರಿಕದಲ್ಲಿ ಕಾನೂನು ಹೋರಾಟಕ್ಕೆ ಅಣಿಯಾದ ಅದಾನಿ; ಕಾನೂನು ಸಲಹಾ ಸಂಸ್ಥೆಗೆ ಮೊರೆ
ಅದಾನಿ ಗ್ರೂಪ್ ಮತ್ತು ಗೌತಮ್ ಅದಾನಿ (ಸಂಗ್ರಹ ಚಿತ್ರ)
Ganapathi Sharma
|

Updated on:Feb 10, 2023 | 1:02 PM

Share

ನವದೆಹಲಿ: ಅದಾನಿ ಸಮೂಹದ (Adani Group) ಷೇರುಗಳ ಮೌಲ್ಯದಲ್ಲಿ ಭಾರೀ ಕುಸಿತಕ್ಕೆ ಕಾರಣವಾದ ಹಿಂಡನ್​ಬರ್ಗ್ ರಿಸರ್ಚ್ ವಿರುದ್ಧ ಅಮೆರಿಕದಲ್ಲಿ ಕಾನೂನು ಹೋರಾಟ ನಡೆಸಲು ಉದ್ಯಮಿ ಗೌತಮ್ ಅದಾನಿ (Gautam Adani) ಮುಂದಾಗಿದ್ದಾರೆ. ಅದಕ್ಕಾಗಿ ಅಮೆರಿಕದ ದುಬಾರಿ ಕಾನೂನು ಸಲಹಾ ಸಂಸ್ಥೆ ವಾಚೆಲ್ (Wachtell) ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ. ವಾಚೆಲ್​ನ ನ್ಯೂಯಾರ್ಕ್​ ಘಟಕದ ಹಿರಿಯ ವಕೀಲರನ್ನು ಅದಾನಿ ಸಮೂಹದ ಕಾನೂನು ಸೇವೆಗೆ ನಿಯೋಜಿಸಲಾಗಿದೆ ಎಂದು ‘ಫೈನಾನ್ಶಿಯಲ್ ಟೈಮ್ಸ್’ ವರದಿ ಮಾಡಿದೆ. ಷೇರು ಮೌಲ್ಯ ತಿರುಚಿದ ಮತ್ತು ಅಕ್ರಮ ಎಸಗಿದ ಬಗ್ಗೆ ಹಿಂಡನ್​ಬರ್ಗ್ ರಿಸರ್ಚ್ ಮಾಡಿರುವ ಆರೋಪದ ವಿರುದ್ಧ ಅದಾನಿ ಸಮೂಹದ ಪರವಾಗಿ ವಾಚೆಲ್ ವಕೀಲರು ಕಾನೂನು ಹೋರಾಟ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.

ಅದಾನಿ ಸಮೂಹದ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಸಿರಿಲ್ ಅಮರಚಂದ್ ಮಂಗಲದಾಸ್ ಸಂಸ್ಥೆ ತನ್ನನ್ನು ಸಂಪರ್ಕಿಸಿದೆ ಎಂದು ವಾಚೆಲ್ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಸಿರಿಲ್ ಅಮರಚಂದ್ ಮಂಗಲದಾಸ್ ಸಂಸ್ಥೆಯನ್ನು ಹಿರಿಯ ವಕೀಲ ಸಿರಿಲ್ ಶ್ರಾಫ್ ಮುನ್ನಡೆಸುತ್ತಿದ್ದು, ಅವರ ಮಗಳನ್ನು ಅದಾನಿ ಅವರ ಪುತ್ರ ವಿವಾಹವಾಗಿದ್ದಾರೆ.

ವಾಚೆಲ್ ಅಮೆರಿಕದ ದುಬಾರಿ ಮತ್ತು ಪ್ರತಿಷ್ಠಿತ ಕಾನೂನು ಸಂಸ್ಥೆಯಾಗಿದ್ದು, ಕಾರ್ಪೊರೇಟ್ ದಿಗ್ಗಜರ ವಿರುದ್ಧದ ಅನಿರೀಕ್ಷಿತ ಆರೋಪಗಳು ಮತ್ತು ದಾಳಿಗಳ ವಿರುದ್ಧ ಕಾನೂನು ಹೋರಾಟ ನಡೆಸಿದ ಹಿನ್ನೆಲೆ ಹೊಂದಿದೆ.

ಇದನ್ನೂ ಓದಿ: Hindenburg Research: ಹಿಂಡನ್​​ಬರ್ಗ್​ ವರದಿಗೆ ಕಿಮ್ಮತ್ತೇ ನೀಡಿರಲಿಲ್ಲ ಅಮೆರಿಕದ ನ್ಯಾಯಾಲಯ; ಕಾರಣ ಇಲ್ಲಿದೆ ನೋಡಿ

ಹಿಂಡನ್​ಬರ್ಗ್ ರಿಸರ್ಚ್ ಮಾಡಿರುವ ಆರೋಪದ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹ ಕಂಪನಿಗಳ ಷೇರು ಮೌಲ್ಯದಲ್ಲಿ ಗಣನೀಯ ಕುಸಿತವಾಗಿತ್ತು. ಅದಾನಿ ಸಂಪತ್ತು ಕೂಡ ಮಂಜಿನಂತೆ ಕರಗಿತ್ತು. ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಅದಾನಿ ಕೇವಲ ಒಂದು ವಾರದ ಅವಧಿಯಲ್ಲಿ 20ನೇ ಸ್ಥಾನಕ್ಕಿಂತಲೂ ಹೆಚ್ಚು ಕುಸಿದಿದ್ದರು. ಇದಾಗಿ ಕೆಲವು ದಿನಗಳ ನಂತರ ಕಂಪನಿ ಷೇರು ಮೌಲ್ಯ ಮತ್ತೆ ವೃದ್ಧಿಯಾಗತೊಡಗಿತ್ತು. ಈ ವಾರದ ಆರಂಭದಲ್ಲಿ ಅಪ್ಪರ್​​ ಸರ್ಕ್ಯೂಟ್​​ನಲ್ಲಿದ್ದ ಷೇರು ಮೌಲ್ಯ ಈಗ ಮತ್ತೆ ಕುಸಿಯತೊಡಗಿದೆ. ಅದಾನಿ ಸಮೂಹದ ಕಂಪನಿಗಳ ಫ್ರೀ ಫ್ಲೋಟ್ ಸ್ಟೇಟಸ್ ಪರಿಶೀಲನೆ ನಡೆಸುವುದಾಗಿ ಮಾರ್ಗನ್‌ ಸ್ಟ್ಯಾನ್ಲಿ (MSCI) ಹೇಳಿಕೆ ನೀಡಿದ್ದೇ ಇದಕ್ಕೆ ಕಾರಣ.

ಅಮೆರಿಕದ ಕಾನೂನು ಹೋರಾಟದಲ್ಲಿ ಅದಾನಿಗೆ ಸಿಗಲಿದೆಯೇ ಜಯ?

ಅಮೆರಿಕದ ಸ್ಪೋರ್ಟ್ಸ್​ ಬೆಟ್ಟಿಂಗ್ ಕಂಪನಿ ‘ಡ್ರಾಫ್ಟ್​​ಕಿಂಗ್ಸ್’ ವಿರುದ್ಧದ ಅಕ್ರಮದ ಆರೋಪವೊಂದರಲ್ಲಿ ಹಿಂಡನ್​​ಬರ್ಗ್ ರಿಸರ್ಚ್ ವರದಿಗೆ ಹಿನ್ನಡೆಯಾಗಿತ್ತು. ಶಾರ್ಟ್​ ಸೆಲ್ಲರ್​​ಗಳ (ಹೂಡಿಕೆದಾರರು ಷೇರುಗಳನ್ನು ಎರವಲು ಪಡೆದು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ನಂತರ ಕಡಿಮೆ ಹಣಕ್ಕೆ ಖರೀದಿ ಮಾಡಲು ಮುಂದಾಗುವುದನ್ನು ಶಾರ್ಟ್​​ ಸೆಲ್ಲಿಂಗ್ ಎನ್ನಲಾಗುತ್ತದೆ.) ವರದಿ ಆಧಾರದಲ್ಲಿ ಮಾಡಿದ ಆರೋಪಗಳನ್ನು ಒಪ್ಪಲಾಗದು ಎಂದು ಅಮೆರಿಕದ ಮ್ಯಾನ್​ಹಾಟನ್ ನ್ಯಾಯಾಲಯದ ಡಿಸ್ಟ್ರಿಕ್ಟ್ ಜಡ್ಜ್ ಪಾಲ್ ಎಂಗಲ್​ಮೇಯರ್ ಹೇಳಿದ್ದರು. ಈ ಲೆಕ್ಕಾಚಾರದಲ್ಲಿ ತುಲನೆ ಮಾಡುವುದಾದರೆ ಅದಾನಿಗೆ ಕಾನೂನು ಹೋರಾಟದಲ್ಲಿ ಗೆಲುವು ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ: Adani Group: ಫೆ.10 ರಂದು ಸುಪ್ರೀಂನಲ್ಲಿ ಅದಾನಿ ಸಂಸ್ಥೆಗಳ ವಿರುದ್ಧದ ಹಿಂಡನ್‌ಬರ್ಗ್ ವರದಿಯ ತನಿಖೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ

ಈ ಮಧ್ಯೆ, ಅದಾನಿ ಸಂಸ್ಥೆಗಳ ಮೇಲಿನ ಹಿಂಡನ್‌ಬರ್ಗ್ ಸಂಶೋಧನಾ ವರದಿಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ ಮನವಿಯನ್ನು ಫೆಬ್ರವರಿ 10 ರಂದು ವಿಚಾರಣೆ ಮಾಡಲು ಸುಪ್ರೀಂಕೋರ್ಟ್​ ಒಪ್ಪಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Fri, 10 February 23

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು