Aadhaar: ಆಧಾರ್ ಕಾರ್ಡ್ನಲ್ಲಿ ಹೆಸರು ತಪ್ಪಾಗಿದೆಯೇ? ಆನ್ಲೈನ್ನಲ್ಲಿ ಸರಿಪಡಿಸುವ ವಿಧಾನ ಇಲ್ಲಿದೆ
ಆನ್ಲೈನ್ ಮೂಲಕ ಆಧಾರ್ ಕಾರ್ಡ್ನಲ್ಲಿರುವ ತಪ್ಪುಗಳನ್ನು ಸರಿಪಡಿಸುವ, ಮಾಹಿತಿ ಅಪ್ಡೇಟ್ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಆಧಾರ್ ಕಾರ್ಡ್ನಲ್ಲಿ (Aadhaar) ಏನಾದರೂ ಬದಲಾವಣೆ ಮಾಡಬೇಕಿದ್ದರೆ, ಹೆಸರು ಅಥವಾ ಕಾಗುಣಿತ (Spelling) ತಪ್ಪಾಗಿದ್ದರೆ ಆನ್ಲೈನ್ ಮೂಲಕವೇ ಅದನ್ನು ಸರಿ ಮಾಡಲು ಭಾರತೀಯ ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ ಅಥವಾ ಯುಐಡಿಎಐ (UIDAI) ಅವಕಾಶ ಕಲ್ಪಿಸಿದೆ. ಯುಐಡಿಎಐ ವೆಬ್ಸೈಟ್ ಮೂಲಕ ಅಪ್ಡೇಟ್ ಮಾಡಬಹುದಾಗಿದೆ. ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಹಾಗೂ ವಿವಿಧ ದಾಖಲಾತಿ ಉದ್ದೇಶಗಳಿಗೆ ಆಧಾರ್ ಮಹತ್ವದ ದಾಖಲೆಯಾದ್ದರಿಂದ ಅದನ್ನು ಸರಿಯಾಗಿ ಇಟ್ಟುಕೊಳ್ಳಬೇಕಾದದ್ದು ಅತೀ ಅನಿವಾರ್ಯವಾಗಿದೆ.
ಆಧಾರ್ ಕಾರ್ಡ್ನಲ್ಲಿ ಹೆಸರು, ಜನ್ಮದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ, ವಿಳಾಸ, ಫೋಟೊ ಹಾಗೂ ಇನ್ನಿತರ ನಮ್ಮ ವೈಯಕ್ತಿಕ ಮಾಹಿತಿಗಳೂ ಅಡಕವಾಗಿರುತ್ತವೆ. ಪಡಿತರ, ಇಪಿಎಫ್ಒ ಇತ್ಯಾದಿ ಬಹು ಮುಖ್ಯ ಸೌಲಭ್ಯಗಳ ಪ್ರಯೋಜನ ಪಡೆಯಲು ಆಧಾರ್ ಅಗತ್ಯವಾಗಿದೆ. ಹೀಗಾಗಿ ಆಧಾರ್ನಲ್ಲಿ ನಮ್ಮ ವೈಯಕ್ತಿಕ ಮಾಹಿತಿ ತಪ್ಪಾಗಿದ್ದರೆ ಅದನ್ನು ತಕ್ಷಣವೇ ಸರಿಪಡಿಸಿಕೊಳ್ಳುವುದು ಉತ್ತಮ. ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಆಧಾರ್ ಸೇವಾ ಕೇಂದ್ರಕ್ಕೆ ತೆರಳಲೇಬೇಕಾಗಿಲ್ಲ. ಇರುವಲ್ಲಿಂದಲೇ ಮೊಬೈಲ್ ಮೂಲಕವೇ ಅಪ್ಡೇಟ್ ಮಾಡಬಹುದು.
ಆನ್ಲೈನ್ ಮೂಲಕ ಆಧಾರ್ ಅಪ್ಡೇಟ್ ಮಾಡುವುದು ಹೇಗೆ?
ಆನ್ಲೈನ್ ಮೂಲಕ ಆಧಾರ್ ಕಾರ್ಡ್ನಲ್ಲಿರುವ ತಪ್ಪುಗಳನ್ನು ಸರಿಪಡಿಸುವ, ಮಾಹಿತಿ ಅಪ್ಡೇಟ್ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
- ಆಧಾರ್ ಸ್ವಯಂಸೇವಾ ಅಪ್ಡೇಟ್ ಪೋರ್ಟಲ್ಗೆ (https://ssup.uidai.gov.in/ssup/) ಭೇಟಿ ನೀಡಿ
- ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ ಒಟಿಪಿ ಜನರೇಟ್ ಮಾಡಿ.
- ಒಟಿಪಿ ನಮೂದಿಸಿ ಲಾಗಿನ್ ಆಗಿ.
- ‘ಅಪ್ಡೇಟ್ ಆಧಾರ್ ಆನ್ಲೈನ್’ ಎಂಬ ಮೆನುವನ್ನು ಆಯ್ಕೆ ಮಾಡಿ ‘ಸರ್ವೀಸ್’ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ.
- ಹೆಸರು ಬದಲಾಯಿಸುವುದಕ್ಕಾದರೆ ‘ಎಡಿಟ್ ನೇಮ್’ ಆಯ್ಕೆಯನ್ನು ಕ್ಲಿಕ್ ಮಾಡಿ. ಸರಿಯಾದ ಸ್ಪೆಲ್ಲಿಂಗ್ ನಮೂದಿಸಿ.
- ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ. ಸರಿಯಾಗಿದ್ದರೆ ‘ಸಬ್ಮಿಟ್’ ಬಟನ್ ಕ್ಲಿಕ್ ಮಾಡಿ.
- ಆಧಾರ್ ಅಪ್ಡೇಟ್ ಮಾಡುವುದಾದರೆ ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ‘ಸಬ್ಮಿಟ್’ ಬಟನ್ ಕ್ಲಿಕ್ ಮಾಡಿದ ಬಳಿಕ ದಾಖಲೆ ಅಪ್ಲೋಡ್ ಮಾಡುವ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ದಾಖಲೆಯನ್ನು ಅಪ್ಲೋಡ್ ಮಾಡಿ.
- ನಂತರ ಆನ್ಲೈನ್ ಪಾವತಿ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅಪ್ಡೇಟ್ ಸೇವಾ ಶುಲ್ಕವಾಗಿ 50 ರೂ. ಅಪ್ಡೇಟ್ ಮಾಡಬೇಕಿರುತ್ತದೆ. ಯುಪಿಐ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಮೂಲಕ ಪಾವತಿ ಮಾಡಲು ಅವಕಾಶವಿದೆ.
ಆಧಾರ್ ಸೇವೆಗಾಗಿ ಪಾವತಿ ಮಾಡಿದ ಹಣ ರಿಫಂಡ್ ಆಗುವುದಿಲ್ಲ ಎಂಬುದು ಗಮನದಲ್ಲಿರಲಿ. ಪಾವತಿ ಮಾಡಿದ ನಂತರ ನಿಮ್ಮ ಮೊಬೈಲ್ಗೆ ‘ಸರ್ವೀಸ್ ರಿಕ್ವೆಸ್ಟ್ ನಂಬರ್’ ಎಸ್ಎಂಎಸ್ ಮೂಲಕ ಬರುತ್ತದೆ. ಈ ‘ಸರ್ವೀಸ್ ರಿಕ್ವೆಸ್ಟ್ ನಂಬರ್’ ಮೂಲಕ ಅಪ್ಡೇಟ್ ಸ್ಥಿತಿಗತಿ ತಿಳಿದುಕೊಳ್ಳಲು ಸಾಧ್ಯವಿದೆ.