ಜಮ್ಮು ಮತ್ತು ಕಾಶ್ಮೀರದ ನಮ್ಮ ದಲಿತ ಸಹೋದರ ಸಹೋದರಿಯರಿಗೆ ಕಳೆದ 75 ವರ್ಷಗಳಲ್ಲಿ ಮೀಸಲಾತಿ ಹಕ್ಕು ಸಿಕ್ಕಿರಲಿಲ್ಲ. ಹಾಗಾದರೆ ಅವರು ಏಕೆ ವಿರೋಧಿಸಲಿಲ್ಲ? ಜಮ್ಮು ಮತ್ತು ಕಾಶ್ಮೀರದಿಂದ (Jammu Kashmir) 370ನೇ ವಿಧಿಯನ್ನು ತೆಗೆದುಹಾಕುವ ಮೂಲಕ ನಾನು ಸಂವಿಧಾನದ ಶ್ರೇಷ್ಠ ಸೇವೆಯನ್ನು ಮಾಡಿದ್ದೇನೆ. ನಾನು ಜಮ್ಮು ಕಾಶ್ಮೀರದಲ್ಲಿ ಭಾರತ ಸಂವಿಧಾನ ಜಾರಿ ಮಾಡಿದ್ದೇನೆ. ನನಗೆ ಪ್ರತಿ ಶಾಲೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆಯಾಗಬೇಕು. ಹೊಸ ಪೀಳಿಗೆ ಶಿಕ್ಷಣ ಪಡೆಯಬೇಕು ಎಂಬ ಕನಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi Interview) ಹೇಳಿದ್ದಾರೆ.
ಟಿವಿ9 ನೆಟ್ವರ್ಕ್ನ ಸಂಪಾದಕರಿಗೆ ನೀಡಿದ ದುಂಡುಮೇಜಿನ ಸಂದರ್ಶನದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಸಂವಿಧಾನ 60 ವರ್ಷಗಳನ್ನು ಪೂರೈಸಿದಾಗ ನಾವು ಗುಜರಾತ್‌ನಲ್ಲಿ ಆನೆಯ ಮೇಲೆ ಸಂವಿಧಾನದ ದೊಡ್ಡ ಪದರವನ್ನು ಇಟ್ಟು ಪೂಜಿಸಿದ್ದೇವೆ. ಸಂಸತ್ತಿಗೆ ಬಂದಾಗ ಸಂವಿಧಾನ ದಿನ ಆಚರಿಸುವ ಪ್ರಸ್ತಾವನೆ ತಂದಿದ್ದಾಗ ಕಾಂಗ್ರೆಸ್ ಪಕ್ಷ ವಿರೋಧಿಸಿತ್ತು. ನನ್ನ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಸಂವಿಧಾನದ 75ನೇ ವರ್ಷವನ್ನು ದೇಶವು ಸಂವಿಧಾನದ ಪಾವಿತ್ರ್ಯತೆಯನ್ನು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಆಚರಿಸುವುದು ನನ್ನ ಮೊದಲ ಕಾರ್ಯವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: PM Modi Interview: 25 ವರ್ಷದ ರಾಜಕೀಯದಲ್ಲಿ ನನಗೆ ಒಂದೂ ಕಪ್ಪು ಚುಕ್ಕಿ ಅಂಟಿಲ್ಲ; ಪ್ರಧಾನಿ ಮೋದಿ
ಈ ದೇಶದಲ್ಲಿ 75 ವರ್ಷದಿಂದ ಸಂವಿಧಾನ ಜಾರಿಯಾಗಿತ್ತಾ? ಯಾರು ಹೀಗೆ ಹೇಳ್ತಿದ್ದಾರೋ ಅವರು ಅಪ್ರಾಮಾಣಿಕರಾಗಿದ್ದಾರೆ. 60 ವರ್ಷಗಳ ಕಾಲ ಇವರು ಅಧಿಕಾರ ನಡೆಸಿದರು. ಆಗ ಕಾಶ್ಮೀರದಲ್ಲಿ ಭಾರತದ ಸಂವಿಧಾನ ಜಾರಿ ಆಗಿರಲಿಲ್ಲ. ನಿಮಗೆ ಸಂವಿಧಾನ ಇಷ್ಟೊಂದು ಪವಿತ್ರ ಅಂತಾ ಅನಿಸಿದರೆ ಕಾಶ್ಮೀರದಲ್ಲಿ ಸಂವಿಧಾನ ಏಕೆ ಜಾರಿ ಆಗಲಿಲ್ಲ? 370ರ ಗೋಡೆ ಮಾಡಿ ಇಷ್ಟೊಂದು ದಿನ ಸಂವಿಧಾನ ಜಾರಿ ಆಗಲು ಅಡ್ಡಿ ಮಾಡಿದ್ದು ಏಕೆ? ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದಂತೆ ಅಲ್ಲವೇ? ಎಂದು ಮೋದಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಸಂವಿಧಾನದ ಗೌರವವನ್ನ ಹಾಳು ಮಾಡಿದೆ. ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಸಂಜೀವ್ ರೆಡ್ಡಿ ಅವರನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಲು ನಿರ್ಧಾರ ಮಾಡಿತ್ತು. ಆದರೆ, ಅವರ ಹೊಟ್ಟೆ ಉರಿಯಿಂದಾಗಿ ಅವರನ್ನ ಸೋಲಿಸಲಾಯ್ತು. ಇದು ಇವರ ಆಟವಾಗಿದೆ. ಇವರು ಸಂವಿಧಾನದ ಜೊತೆಗೂ ಆಟವಾಡಿದ್ದಾರೆ. ನೆಹರೂ ಅವರು ಇಷ್ಟೊಂದು ದೊಡ್ಡ ಪ್ರಜಾಪ್ರಭುತ್ವದ ನಿರ್ಮಾತೃ ಎಂದು ಹೇಳುತ್ತೀರಲ್ಲ? ಸಂಸತ್ತಿನಲ್ಲಿ ಕೂರಲು ಮೊಟ್ಟ ಮೊದಲು ಸಂವಿಧಾನವನ್ನು ಯಾರು ಸಂಶೋಧನೆ ಮಾಡಿದರೋ ಅವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಬೇಕೆಂದು ಹೇಳಿದ್ದರು. ಇದು ಪ್ರಜಾಪ್ರಭುತ್ವ ವಿರೋಧಿ ನೆಹರು ಅವರು ಮಾಡಿದ್ದು. ಅನುಭವಿ ಜನರು ಕೂತು, ಭಾರತದ ಜಡತ್ವದ ಬಗ್ಗೆ ಅರಿವಿದ್ದ ಜನರು ಕೂತು ಸಂವಿಧಾನ ಮಾಡಿದ್ದಾರೆ. ಹೀಗಾಗಿ ಇದರಲ್ಲಿ ಭಾರತದ ಒಂದು ಸುಗಂಧವಿದೆ. ಹೀಗಾಗಿ ಇದನ್ನು ಸಾಮಾಜಿಕ ದಾಖಲೆ ಎಂದೂ ಕರೆಯುತ್ತಾರೆ. ಆ ಜನರು ಭವಿಷ್ಯದ ದೃಷ್ಟಿಯಿಂದ ದೇಶ ಮುಂದೆ ಚೆನ್ನಾಗಿ ನಡೆಯಬೇಕೆನ್ನುವ ವ್ಯವಸ್ಥೆ ನಿರ್ಮಿಸಲು ಸಂವಿಧಾನವನ್ನು ರಚಿಸಿದರು ಎಂದಿದ್ದಾರೆ.
ಇದನ್ನೂ ಓದಿ: PM Modi Interview: ಪಶ್ಚಿಮ ಬಂಗಾಳ ಬಿಜೆಪಿಗೆ ಮಾತ್ರವಲ್ಲ ದೇಶಕ್ಕೇ ಸವಾಲಾಗಿದೆ; ಮೋದಿ ಟೀಕೆ
ನಮ್ಮ ಸಂವಿಧಾನವನ್ನು ಮೊದಲು ಮಾಡಿದಾಗ ಅದರ ಪ್ರತಿ ಪುಟದಲ್ಲೂ ಒಂದು ಚಿತ್ರಕಲೆ ಇತ್ತು. ಆ ಚಿತ್ರ ಸಾವಿರಾರು ವರ್ಷಗಳ ಜೊತೆ ನಮ್ಮನ್ನ ಜೋಡಿಸುವ ಒಂದು ಕೊಂಡಿ ಇದೆ. ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ ಇದೆಲ್ಲವೂ ಆ ಚಿತ್ರಗಳಲ್ಲಿ ಇವೆ. ನಿನ್ನೆ, ಇಂದು, ನಾಳೆಯ ಅತ್ಯಂತ ಪವಿತ್ರ ದಾಖಲೆ ನಮ್ಮ ಸಂವಿಧಾನವಾಗಿದೆ. ಕಾಂಗ್ರೆಸ್ನವರು ಎಲ್ಲದಕ್ಕಿಂದ ಮೊದಲು ಸಂವಿಧಾನದ ಮೂಲ ಪ್ರತಿಯಲ್ಲಿ ಏನು ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯ ಭಾವ ಇತ್ತೋ ಅದನ್ನ ಹಾಳು ಮಾಡಿದರು. ಅದನ್ನು ಹೊಸ ಪ್ರತಿಗಳನ್ನ ಮಾಡಿಸಿದರು. ಅದಾದ್ಮೇಲೆ ಸಂವಿಧಾನದ ಒಂದೇ ಒಂದು ಪ್ರತಿ ಪ್ರಿಂಟ್ ಆಗಲಿಲ್ಲ. ನಾವು ಈಗ ಹೊಸ ಸಂಸತ್ ಭವನ ಉದ್ಘಾಟನೆ ಆದಾಗ ಹಳೇ ಅಸಲಿ ಸಂವಿಧಾನದ ಪ್ರತಿಯನ್ನು ಸಂಸದರಿಗೆ ನೀಡಿದೆವು. ನಾನು ಯಾವ ರೀತಿ ಸಂಸತ್ತಿನಲ್ಲಿ ಸೆಂಗೋಲ್ ಅನ್ನು ಅಳವಡಿಸಿದೆನೋ ಅದೇ ರೀತಿ ನಾನು ಸಂವಿಧಾನದ ಅಸಲಿ ಪ್ರತಿಯನ್ನೂ ಪ್ರಿಂಟ್ ಮಾಡಿಸಿ ಕೊಟ್ಟಿದ್ದೆ. ಕಾಂಗ್ರೆಸ್ನವರು ವೋಟ್ ಬ್ಯಾಂಕ್ಗಾಗಿ ಸಂವಿಧಾನವನ್ನ ಸಮರ್ಪಣೆ ಮಾಡಿದರು. ಸುಪ್ರೀಂಕೋರ್ಟ್ ಸಂವಿಧಾನದ ಅತಿದೊಡ್ಡ ಆಸ್ತಿ ಆಗಿದೆ. ಅದರ ಭಾವನೆಯನ್ನ ಹಾಳು ಮಾಡಿ ಸಂವಿಧಾನವನ್ನೇ ಬದಲು ಮಾಡಿದರು. ಅಲಹಾಬಾದ್ ಕೋರ್ಟ್ ತೀರ್ಪು ನೀಡಿತ್ತು, ಅವರ ಆಯ್ಕೆಯನ್ನು ರದ್ದು ಮಾಡಿತ್ತು. ಆದರೆ ಕಾಂಗ್ರೆಸ್ನವರು ಸಂವಿಧಾನವನ್ನು ಕೆಳಗೆ ಹಾಕಿ, ತುರ್ತು ಪರಿಸ್ಥಿತಿ ಘೋಷಿಸಿದರು. ಹಿಂದೂಸ್ತಾನವನ್ನು ಜೈಲಿನಲ್ಲಿ ಕೂಡಿಟ್ಟರು. ಅವರು ಸಂವಿಧಾನದ ಉಪಯೋಗವನ್ನ ಕೇವಲ ತಮ್ಮ ಅಧಿಕಾರಕ್ಕೆ ಬಳಕೆ ಮಾಡಿಕೊಂಡರು. ದೇಶದ ಒಬ್ಬ ಪ್ರಧಾನಿಯೇ ಒಬ್ಬರೇ 50 ಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ