ಮೋದಿ ಭಾರತದ ಡೆಂಗ್ ಕ್ಸಿಯಾಪಿಂಗ್; ಭಾರತದ ಪ್ರಧಾನಿ ಬಗ್ಗೆ ಹೂಡಿಕೆ ಗುರು ರೇ ಡಾಲಿಯೊ ಮೆಚ್ಚುಗೆ

ಹೂಡಿಕೆ ಗುರು ರೇ ಡಾಲಿಯೊ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೀನಾದ ಮಾಜಿ ಅಧ್ಯಕ್ಷ ಡೆಂಗ್ ಕ್ಸಿಯಾಪಿಂಗ್ ಜೊತೆ ಹೋಲಿಸಿದ್ದಾರೆ. 40 ವರ್ಷಗಳ ಹಿಂದೆ ಚೀನಾ ಇದ್ದ ಜಾಗದಲ್ಲಿ ಇದೀಗ ಭಾರತ ನಿಂತಿದೆ ಎಂದು ಹೇಳಿದ್ದಾರೆ. ಭಾರತ ಜಾಗತಿಕ ಆರ್ಥಿಕ ಪವರ್​ಹೌಸ್ ಆಗುವ ಎಲ್ಲ ಸಾಮರ್ಥ್ಯವನ್ನೂ ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಭಾರತದ ಡೆಂಗ್ ಕ್ಸಿಯಾಪಿಂಗ್; ಭಾರತದ ಪ್ರಧಾನಿ ಬಗ್ಗೆ ಹೂಡಿಕೆ ಗುರು ರೇ ಡಾಲಿಯೊ ಮೆಚ್ಚುಗೆ
ರೇ ಡಾಲಿಯೊ
Follow us
ಸುಷ್ಮಾ ಚಕ್ರೆ
|

Updated on:Oct 01, 2024 | 10:17 PM

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ 3ನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ವಿವಿಧ ದೇಶಗಳಿಗೆ ಅಧಿಕೃತ ಭೇಟಿ ನೀಡುವ ಮೂಲಕ, ಜಾಗತಿಕ ನಾಯಕರೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಂಡಿರುವ ಪ್ರಧಾನಿ ಮೋದಿಯತ್ತ ವಿಶ್ವದ ನಾಯಕರು ತಿರುಗಿ ನೋಡುವಂತಾಗಿದೆ. ಇದೀಗ ಹೂಡಿಕೆ ಗುರು, ಬ್ರಿಡ್ಜ್ ವಾಟರ್ ಅಸೋಸಿಯೇಟ್ಸ್ ಸಂಸ್ಥಾಪಕ ರೇ ಡಾಲಿಯೊ ಕೂಡ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ.

40 ವರ್ಷದ ಹಿಂದೆ ಚೀನಾಕ್ಕೆ ಭೇಟಿ ನೀಡಿದಾಗ ಅಧ್ಯಕ್ಷ ಡೆಂಗ್ ಕ್ಸಿಯೋಪಿಂಗ್ ಅವರಂತೆಯೇ ಈಗ ಪ್ರಧಾನಿ ನರೇಂದ್ರ ಮೋದಿ ಅವರಿದ್ದಾರೆ ಎಂದು ರೇ ಡಾಲಿಯೋ ನೆನಪಿಸಿಕೊಂಡಿದ್ದಾರೆ. ಬ್ರಿಡ್ಜ್ ವಾಟರ್ ಅಸೋಸಿಯೇಟ್ಸ್ ಸಂಸ್ಥಾಪಕ ರೇ ಡಾಲಿಯೊ ಈ ಬಗ್ಗೆ ಮಾತನಾಡಿದ್ದು, ಚೀನಾಕ್ಕೆ ಕ್ಸಿಯೋಪಿಂಗ್ ಹೇಗೋ ಅದೇ ರೀತಿ ಭಾರತಕ್ಕೆ ನರೇಂದ್ರ ಮೋದಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಾತೀಯತೆ ಮೂಲಕ ದೇಶಭಕ್ತಿಯನ್ನು ಹತ್ತಿಕ್ಕಲು ಕಾಂಗ್ರೆಸ್ ಪ್ರಯತ್ನ; ಹರಿಯಾಣ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ

ಚೀನಾ ಅಧ್ಯಕ್ಷ ಡೆಂಗ್ ಕ್ಸಿಯೋಪಿಂಗ್ ಅವರು 40 ವರ್ಷಗಳ ಹಿಂದೆ ಚೀನಾಕ್ಕಾಗಿ ಏನು ಮಾಡಿದ್ದಾರೋ ಅದನ್ನು ಭಾರತಕ್ಕೆ ಮೋದಿ ಈಗ ಮಾಡುತ್ತಿದ್ದಾರೆ. ಭಾರತವು ಬೆಳವಣಿಗೆಗೆ ಸಿದ್ಧವಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಚೀನಾ ಮತ್ತು ಅಮೆರಿಕದ ನಡುವೆ ಭಾರತವು ವಿಶಿಷ್ಟ ಸ್ಥಾನದಲ್ಲಿದೆ. ಭಾರತದ ತಟಸ್ಥತೆಯು ಅದನ್ನು ಸೂಕ್ತ ಸ್ಥಾನದಲ್ಲಿ ಇರಿಸುತ್ತದೆ. ದೇಶೀಯ ಮಟ್ಟದಲ್ಲಿ ಶಿಕ್ಷಣ ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ತನ್ನ ಬೌದ್ಧಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಭಾರತವನ್ನು ಕೇಂದ್ರೀಕರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಮುಂದಿನ ದಶಕದಲ್ಲಿ ಭಾರತವು ಅತ್ಯಧಿಕ ನಿರೀಕ್ಷಿತ ಬೆಳವಣಿಗೆ ದರವನ್ನು ಹೊಂದಲಿದೆ. ಆದರೂ ದೇಶದಲ್ಲಿ ಗಮನಾರ್ಹ ಅಸಮಾನತೆ ಮುಂದುವರಿದಿದೆ. ಚೀನಾದ ಉತ್ಪಾದನೆಯೊಂದಿಗೆ ಸ್ಪರ್ಧಿಸಲು ಪ್ರಯತ್ನಿಸುವುದು ಮೂರ್ಖತನವಾಗುತ್ತದೆ. ಹೀಗಾಗಿ, ಭಾರತದ ಪ್ರಮುಖ ಗಮನವು ಆಂತರಿಕವಾಗಿ ದೇಶೀಯ ಶಿಕ್ಷಣ ಮತ್ತು ಉತ್ಪಾದಕತೆಯನ್ನು ಸುಧಾರಿಸುವತ್ತ ಇರಬೇಕು ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:16 pm, Tue, 1 October 24

ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕರ್ತವ್ಯನಿರತ ಪೊಲೀಸರ ಮೇಲೆ ಜೋರು ಮಾಡಲು ಮುಂದಾದ ಕಾಂಗ್ರೆಸ್ಸಿಗರು
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಸೋಮಶೇಖರ್ ಬಂದಿರುವರೇ?
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು