ಜಾತೀಯತೆ ಮೂಲಕ ದೇಶಭಕ್ತಿಯನ್ನು ಹತ್ತಿಕ್ಕಲು ಕಾಂಗ್ರೆಸ್ ಪ್ರಯತ್ನ; ಹರಿಯಾಣ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಪ್ರತಿಪಕ್ಷ ಕಾಂಗ್ರೆಸ್ ದೇಶದ "ದಲಿತ ವಿರೋಧಿ ಪಕ್ಷ" ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮೀಸಲಾತಿಯನ್ನು ಕೊನೆಗೊಳಿಸಲು ಪ್ರತಿಜ್ಞೆ ಮಾಡಿದೆ ಮತ್ತು ಹರಿಯಾಣದಲ್ಲಿ ಈ ಬಗ್ಗೆ ಪ್ರಯೋಗ ನಡೆಸಲು ಮುಂದಾಗಿದೆ ಎಂದು ಮೋದಿ ಆರೋಪಿಸಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು (ಮಂಗಳವಾರ) ರಾಜ್ಯ ವಿಧಾನಸಭಾ ಚುನಾವಣೆಗಾಗಿ ಹರಿಯಾಣದ ಪಲ್ವಾಲ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಜಾತಿ ರಾಜಕೀಯ, ಭ್ರಷ್ಟಾಚಾರ ಮತ್ತು ಮೀಸಲಾತಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜಾತಿ, ಧರ್ಮವನ್ನು ಬೇಧಿಸುವ ಮೂಲಕ ದೇಶದ ಏಕತೆಯನ್ನು ಒಡೆಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ತನ್ನ ಜಾತಿ ರಾಜಕಾರಣದ ಬಗ್ಗೆ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ದೇಶಭಕ್ತಿಯನ್ನು ಹತ್ತಿಕ್ಕಲು ಬಯಸುತ್ತದೆ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜನೆಯನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಕಾಂಗ್ರೆಸ್ ಬಿಡಲಿಲ್ಲ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೆ ತರಲು ಕಾಂಗ್ರೆಸ್ ಬಿಡಲಿಲ್ಲ. ಅವರು ನಮ್ಮ ಸಹೋದರಿಯರಿಗೆ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮೀಸಲಾತಿಯನ್ನು ಕಸಿದುಕೊಂಡರು. ಕಾಂಗ್ರೆಸ್ ದೇಶದ ಮತ್ತು ಪ್ರಜೆಗಳ ಸಮಸ್ಯೆಗಳನ್ನು ಬಗೆಹರಿಸಲಿಲ್ಲ ಎಂದು ಮೋದಿ ಆರೋಪಿಸಿದ್ದಾರೆ.
हरियाणा के मेरे परिवारजन भाजपा के सेवा, सुशासन और किसान कल्याण के संकल्प के साथ हैं। पलवल में विशाल जनसभा को संबोधित कर रहा हूं।https://t.co/0tA2uztQwh
— Narendra Modi (@narendramodi) October 1, 2024
ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಹರ್ಯಾಣದ ತಳಮಟ್ಟದ ರಾಜಕೀಯವನ್ನು ದೀರ್ಘಕಾಲ ಗಮನಿಸಿದ್ದೇನೆ. ಇತ್ತೀಚೆಗೆ, ಚುನಾವಣಾ ಪ್ರಚಾರಕ್ಕಾಗಿ ಹರಿಯಾಣದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಲು ನನಗೆ ಅವಕಾಶ ಸಿಕ್ಕಿತು. ಇಂದು ಇದು ನನ್ನ ಚುನಾವಣಾ ರ‍್ಯಾಲಿ. ನೀವೆಲ್ಲರೂ ಈ ಕೊನೆಯ ರ್ಯಾಲಿಯನ್ನು ಇನ್ನಷ್ಟು ವಿಶೇಷಗೊಳಿಸಿದ್ದೀರಿ ಎಂದು ಪ್ರಧಾನಿ ಮೋದಿ ರ್ಯಾಲಿಯಲ್ಲಿ ಹೇಳಿದರು.
ಇದನ್ನೂ ಓದಿ: ದೇವರೇಕೆ ಮೋದಿಗೆ ಅದಾನಿಗೆ ಮಾತ್ರ ಸಹಾಯ ಮಾಡಲು ಹೇಳುತ್ತಿದ್ದಾನೆ?; ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಕಿಡಿ
ಭಾರತದಲ್ಲಿ ಕಾಂಗ್ರೆಸ್ ಮೀಸಲಾತಿಯನ್ನು ಕೊನೆಗೊಳಿಸಲು ಯೋಜಿಸಿದೆ. ಈ ನಿಟ್ಟಿನಲ್ಲಿ ಹರಿಯಾಣ ಅವರ ಪರೀಕ್ಷಾ ರಾಜ್ಯವಾಗಿದೆ. ಆದರೆ, ನರೇಂದ್ರ ಮೋದಿ ಮತ್ತು ಬಿಜೆಪಿ ಇರುವವರೆಗೆ ಯಾರೂ ಮೀಸಲಾತಿಯನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್ನವರು ನನ್ನನ್ನು ಮತ್ತು ಹರಿಯಾಣ ಮುಖ್ಯಮಂತ್ರಿ ಸೈನಿ ಅವರನ್ನು ಹಗಲು ರಾತ್ರಿ ನಿಂದಿಸುತ್ತಾರೆ ಎಂದು ಮೋದಿ ಹರಿಯಾಣ ರಾಜ್ಯದ ಪಲ್ವಾಲ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.
#WATCH | Palwal: Prime Minister Narendra Modi says, “You all have come here in large numbers to give us your blessings…Today’s gathering shows the result of the Haryana election…We are grateful for your blessings and support. The election campaign is going on in Haryana. But… pic.twitter.com/8ibGlNTVX7
— ANI (@ANI) October 1, 2024
ಕಾಂಗ್ರೆಸ್ ಮತದಾರರ ಹೆಸರಿನಲ್ಲಿ ಜನರನ್ನು ಧ್ರುವೀಕರಿಸಿದೆ. ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕೊನೆಗೊಳಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. “ಅವರು ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಅದೇ ರೀತಿ ಮಾಡಿದರು. ಅವರು ಮೀಸಲಾತಿಯನ್ನು ಕಸಿದುಕೊಂಡರು ಎಂದು ಆರೋಪಿಸಿದ್ದಾರೆ.
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಇಲ್ಲಿನ ಜನರು ಸಹ ನೋಡುತ್ತಿದ್ದಾರೆ. ದಲಿತ, ಹಿಂದುಳಿದ ಮತ್ತು ವಂಚಿತ ಸಮುದಾಯದವರೇ ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ನಮ್ಮ ಜಗತ್ತಿನಲ್ಲಿ ಭಯೋತ್ಪಾದನೆಗೆ ಜಾಗವಿಲ್ಲ; ಇಸ್ರೇಲ್ ಪಿಎಂ ನೆತನ್ಯಾಹು ಜೊತೆ ಪ್ರಧಾನಿ ಮೋದಿ ಚರ್ಚೆ
“ಒಗ್ಗಟ್ಟಿನ ಭಾವನೆ ಹೆಚ್ಚಾದಷ್ಟೂ ತಮ್ಮ ಗೆಲುವು ಕಷ್ಟವಾಗುತ್ತದೆ ಎಂದು ಕಾಂಗ್ರೆಸ್ಗೆ ಗೊತ್ತಾಗಿದೆ. ಅದಕ್ಕಾಗಿಯೇ ದೇಶಭಕ್ತರ ಒಗ್ಗಟ್ಟಿನ ಮುರಿಯಲು ಕಾಂಗ್ರೆಸ್ ಹೊಸ ಪ್ರಯೋಗಗಳನ್ನು ಮಾಡುತ್ತಿದೆ” ಎಂದು ಪ್ರಧಾನಿ ಟೀಕಿಸಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇದೇ ಸುಳ್ಳಿನ ಪ್ರಯೋಗವನ್ನು ಕಾಂಗ್ರೆಸ್ ಮಾಡಿತ್ತು. ಇಡೀ ಹರಿಯಾಣ, ಭಾರತವನ್ನು ಪ್ರೀತಿಸುವವರು ಒಗ್ಗಟ್ಟಿನಿಂದ ಇರುತ್ತೇವೆ ಎಂದು ನಾವು ಪ್ರತಿಜ್ಞೆ ಮಾಡಬೇಕಾಗಿದೆ. ನಾವು ಒಂದಾಗಿ ದೇಶಕ್ಕಾಗಿ ಮತ ಹಾಕುತ್ತೇವೆ. ಒಂದಾಗಿ ಎಂದು ಪ್ರತಿಜ್ಞೆ ಮಾಡಬೇಕು” ಎಂದು ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ