2021ರ ಭಾರತದ ಅತ್ಯಂತ ಜನಪ್ರಿಯ ಸೆಲಿಬ್ರಿಟಿ ಪ್ರಧಾನಿ ಮೋದಿ; ಸಮೀಕ್ಷೆಯೊಂದರ ವರದಿ ಪಟ್ಟಿಯಲ್ಲಿ ಇನ್ಯಾರೆಲ್ಲ ಇದ್ದಾರೆ ನೋಡಿ !
ಸರ್ವೇ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆ್ಯಕ್ಸಿಸ್ ಮೈ ಇಂಡಿಯಾ ಸಿಎಂಡಿ ಪ್ರದೀಪ್ ಗುಪ್ತಾ, ಪ್ರಧಾನಿ ಮೋದಿ ದೇಶಾದ್ಯಂತ ಅಗಾಧವಾಗಿ ಮೆಚ್ಚುಗೆಗಳಿಸಿದ್ದಾರೆ. ಶೇ.40ರಷ್ಟು ಮಂದಿ ಅವರು ಜನಪ್ರಿಯ ವ್ಯಕ್ತಿ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ನಮ್ಮ ದೇಶದಲ್ಲಿ 2021ನೇ ವರ್ಷದ ಅತ್ಯಂತ ಜನಪ್ರಿಯ ಗಣ್ಯರಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ಹೊರಹೊಮ್ಮಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ ವ್ಯಕ್ತಿ ಎಂಬುದನ್ನು ಶೇ.40ರಷ್ಟು ಜನರು ಒಪ್ಪಿಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಅವರನ್ನು ಹೊರತುಪಡಿಸಿದರೆ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಕೂಡ ಜನಪ್ರಿಯ ಗಣ್ಯರ ಸಾಲಿನಲ್ಲಿ ಸೇರಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಅಂದಹಾಗೆ, ಈ ಸರ್ವೇ ನಡೆಸಿದ್ದು, ಮುಂಚೂಣಿಯಲ್ಲಿರುವ ಗ್ರಾಹಕರ ಡೇಟಾ ಗುಪ್ತಚರ ಕಂಪನಿ ಆ್ಯಕ್ಸಿಸ್ ಮೈ ಇಂಡಿಯಾ. ಇದು ಹಲವು ಸಮಸ್ಯೆಗಳ ಬಗ್ಗೆ ಗ್ರಾಹಕರ ಗ್ರಹಿಕೆಯ ಬಗ್ಗೆ ಮಾಸಿಕವಾಗಿ ವಿಶ್ಲೇಷಣೆ ಮಾಡುತ್ತದೆ.
ಸರ್ವೇ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆ್ಯಕ್ಸಿಸ್ ಮೈ ಇಂಡಿಯಾ ಸಿಎಂಡಿ ಪ್ರದೀಪ್ ಗುಪ್ತಾ, ಪ್ರಧಾನಿ ಮೋದಿ ದೇಶಾದ್ಯಂತ ಅಗಾಧವಾಗಿ ಮೆಚ್ಚುಗೆಗಳಿಸಿದ್ದಾರೆ. ಶೇ.40ರಷ್ಟು ಮಂದಿ ಅವರು ಜನಪ್ರಿಯ ವ್ಯಕ್ತಿ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಸಮೀಕ್ಷೆಯಲ್ಲಿ ಪಟ್ಟಿ ಮಾಡಿದ ಉಳಿದೆಲ್ಲ ವ್ಯಕ್ತಿಗಳಿಗಿಂತಲೂ ಪ್ರಧಾನಿ ಮೋದಿಯವರಿಗೆ ಬೆಂಬಲ ನೀಡಿದ ವ್ಯಕ್ತಿಗಳ ಪ್ರಮಾಣ ತುಂಬ ಹೆಚ್ಚು ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿಯವರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. ಆದರೆ ಅವರಿಗೆ ಶೇ.4ರಷ್ಟು ಜನರ ಬೆಂಬಲ ಮಾತ್ರ ಸಿಕ್ಕಿದೆ. ಮೂರನೇ ಸ್ಥಾನದಲ್ಲಿ ಯೋಗಿ ಆದಿತ್ಯನಾಥ್ ಇದ್ದು, ಅವರು ಜನಪ್ರಿಯ ವ್ಯಕ್ತಿ ಎಂಬುದನ್ನು ಶೇ.3ರಷ್ಟು ಜನರು ಒಪ್ಪಿಕೊಂಡಿದ್ದಾರೆ ಎಂದು ಸಿಎಂಡಿ ಮಾಹಿತಿ ನೀಡಿದ್ದಾರೆ. ಜಗತ್ತಿನ ಇತರ ನಾಯಕರು ತಮ್ಮ ಜನಪ್ರಿಯತೆಯನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚುತ್ತಿದೆ ಎಂದು ಗುಪ್ತಾ ತಿಳಿಸಿದ್ದಾರೆ. 36 ರಾಜ್ಯಗಳ 10,563 ಜನರನ್ನು ಒಳಗೊಂಡು, ಟೆಲಿಫೋನಿಕ್ ಸಂದರ್ಶನದ ಮೂಲಕ ಸರ್ವೇ ನಡೆಸಲಾಯಿತು. ಕಂಪ್ಯೂಟರ್ ನೆರವಿನ ಮೂಲಕ ನಡೆಸಲಾದ ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.71ರಷ್ಟು ಜನರು ಹಳ್ಳಿ ಜನರು. ಹಾಗೇ, ಶೇ.29ರಷ್ಟು ಮಂದಿ ನಗರ ಪ್ರದೇಶದವರಾಗಿದ್ದು. ಶೇ.64ರಷ್ಟು ಪುರುಷರಾಗಿದ್ದರು ಮತ್ತು ಶೇ.36ರಷ್ಟು ಮಹಿಳೆಯರಿದ್ದರು ಎಂದು ತಿಳಿಸಿದ್ದಾರೆ. ಅಂದಹಾಗೆ, ಪ್ರಧಾನಿ ನರೇಂದ್ರ ಮೋದಿ ಜಾಗತಿಕವಾಗಿಯೇ ಜನಪ್ರಿಯರಾಗಿದ್ದಾರೆ. ತಮ್ಮ ಅಧಿಕಾರ ಅವಧಿಯ ಎರಡು ಅವಧಿಗಳಲ್ಲಿ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಳವಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: Qatar Mail : ಚೈತ್ರಾ ಅರ್ಜುನಪುರಿಯವರ ಮರಳುಗಾಡಿನ ಪತ್ರಗಳು ‘ಕತಾರ್ ಮೇಲ್’ ಮೂಲಕ ನಾಳೆಯಿಂದ ನಿಮ್ಮ ಓದಿಗೆ