Deepavali 2021: ದೇಶದ ಜನರಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ
ಗೃಹ ಸಚಿವ ಅಮಿತ್ ಶಾ ಅವರೂ ಕೂಡ ದೇಶದ ಜನರಿಗೆ ಇಂದು ಬೆಳಗ್ಗೆ ಟ್ವೀಟ್ ಮೂಲಕ ದೀಪಾವಳಿ ಶುಭಾಶಯ ಕೋರಿದ್ದಾರೆ. ಬೆಳಕು ಮತ್ತು ಸಂತೋಷದ ಈ ಹಬ್ಬ ಪ್ರತಿಯೊಬ್ಬರ ಜೀವನದಲ್ಲೂ ಹೊಸ ಶಕ್ತಿ, ಬೆಳಕು, ಆರೋಗ್ಯ, ಸಮೃದ್ಧಿ ನೀಡಲಿ ಎಂದು ಆಶಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ದೇಶದ ಜನರಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ. ಬೆಳಗ್ಗೆಯೇ ಟ್ವೀಟ್ ಮಾಡಿರುವ ಅವರು, ದೇಶದ ಜನರಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ಈ ಬೆಳಕಿನ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಹೊತ್ತು ತರಲಿ ಎಂದು ನಾನು ಆಶಿಸುತ್ತೇನೆ ಎಂದು ಹೇಳಿದ್ದಾರೆ.
ಹಾಗೇ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದು, ದೀಪಾವಳಿ ಶುಭ ಸಂದರ್ಭದಲ್ಲಿ ನಾನು ಎಲ್ಲ ದೇಶವಾಸಿಗಳಿಗೆ ಶುಭಾಶಯ ತಿಳಿಸುತ್ತೇನೆ. ಕೆಡುಕಿನ ಮೇಲೆ ಒಳ್ಳೆಯದು, ಕತ್ತಲೆಯ ಮೇಲೆ ಬೆಳಕು ವಿಜಯಿಸುವ ಹಬ್ಬವಾಗಿದೆ. ನಾವೆಲ್ಲರೂ ಒಟ್ಟಾಗಿ ಈ ಹಬ್ಬವನ್ನು ಸುರಕ್ಷಿತವಾಗಿ ಆಚರಿಸೋಣ. ಪರಿಸರ ಸಂರಕ್ಷಿಸೋಣ ಎಂದು ಹೇಳಿದ್ದಾರೆ.
Wishing everyone a very Happy Diwali.
— Narendra Modi (@narendramodi) November 4, 2021
दीपावली के शुभ अवसर पर मैं सभी देशवासियों को बधाई और शुभकामनाएं देता हूं। दीपावली बुराई पर अच्छाई की और अंधकार पर प्रकाश की विजय का पर्व है। आइए, हम सब मिलकर, इस त्योहार को स्वच्छ और सुरक्षित तरीके से मनाएं और पर्यावरण की रक्षा में योगदान करने का संकल्प लें।
— President of India (@rashtrapatibhvn) November 4, 2021
ಗೃಹ ಸಚಿವ ಅಮಿತ್ ಶಾ ಅವರೂ ಕೂಡ ದೇಶದ ಜನರಿಗೆ ಇಂದು ಬೆಳಗ್ಗೆ ಟ್ವೀಟ್ ಮೂಲಕ ದೀಪಾವಳಿ ಶುಭಾಶಯ ಕೋರಿದ್ದಾರೆ. ಬೆಳಕು ಮತ್ತು ಸಂತೋಷದ ಈ ಹಬ್ಬ ಪ್ರತಿಯೊಬ್ಬರ ಜೀವನದಲ್ಲೂ ಹೊಸ ಶಕ್ತಿ, ಬೆಳಕು, ಆರೋಗ್ಯ, ಸಮೃದ್ಧಿ ನೀಡಲಿ ಎಂದು ಆಶಿಸಿದ್ದಾರೆ.ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ದೇಶದ ಜನತೆಗೆ ದೀಪಾವಳಿ ಶುಭ ಕೋರಿದ್ದಾರೆ.
सभी को “दीपावली” की हार्दिक शुभकामनाएं।
प्रकाश व खुशियों का यह महापर्व सभी के जीवन को नई उर्जा, प्रकाश, आरोग्य और समृद्धि से आलोकित करे। pic.twitter.com/RwwXv3nB0A
— Amit Shah (@AmitShah) November 4, 2021
ಅಂದಹಾಗೆ, ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತೀಯ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ನವೆಂಬರ್ 4) ಜಮ್ಮು ಮತ್ತು ಕಾಶ್ಮೀರದ ರಜೌರಿಯ ನೌಶೇರಾ ಸೆಕ್ಟರ್‌ನ ಮುಂಭಾಗದ ಪ್ರದೇಶದಲ್ಲಿ ಭಾರತೀಯ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಪ್ರಧಾನಿ ಮೋದಿ ಸಾಮಾನ್ಯವಾಗಿ ದೀಪಾವಳಿ ಹಬ್ಬನ್ನು ದೇಶದ ಸೈನಿಕರೊಂದಿಗೆ ಆಚರಿಸಿ, ಅವರಿಗೆ ತಮ್ಮ ಕೈಯಲ್ಲಿ ಸಿಹಿ ತಿನಿಸುತ್ತಾರೆ.
ಇದನ್ನೂ ಓದಿ: 2020ನೇ ಇಸವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ 10ಕ್ಕೆ 6 ಜನರ ಆದಾಯ 1 ಲಕ್ಷ ರೂ.ಗಿಂತ ಕಮ್ಮಿ
Deepavali 2021: ಅಮವಾಸೆ ದಿನ ಲಕ್ಷ್ಮಿ ಪೂಜೆ ಮಾಡುವುದೇಕೆ ಹಾಗೂ ಹೇಗೆ?
Published On - 9:17 am, Thu, 4 November 21