ತಮಿಳು ಮೀನುಗಾರರ ಸಮಸ್ಯೆಗೆ ಬಗ್ಗೆ ಚರ್ಚೆ; ಶ್ರೀಲಂಕಾ ಅಧ್ಯಕ್ಷರ ಭೇಟಿ ಬಳಿಕ ಮೋದಿ ಹೇಳಿಕೆ

|

Updated on: Dec 16, 2024 | 4:50 PM

ಭಾನುವಾರ ಸಂಜೆ ದೆಹಲಿಗೆ ಬಂದಿಳಿದ ಶ್ರೀಲಂಕಾ ಅಧ್ಯಕ್ಷ ದಿಸಾನಾಯಕೆ ಮಂಗಳವಾರದವರೆಗೆ ಭಾರತ ಪ್ರವಾಸದಲ್ಲಿದ್ದಾರೆ. ಶ್ರೀಲಂಕಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಅಧ್ಯಕ್ಷೀಯ ಮತ್ತು ಸಂಸತ್ತಿನ ಚುನಾವಣೆಯ ನಂತರ ಅಧ್ಯಕ್ಷ ದಿಸಾನಾಯಕೆ ಭಾರತಕ್ಕೆ ನೀಡಿರುವ ಮೊದಲ ಭೇಟಿ ಇದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಆತ್ಮೀಯವಾಗಿ ಅವರನ್ನು ಸ್ವಾಗತಿಸಿದರು.

ತಮಿಳು ಮೀನುಗಾರರ ಸಮಸ್ಯೆಗೆ ಬಗ್ಗೆ ಚರ್ಚೆ; ಶ್ರೀಲಂಕಾ ಅಧ್ಯಕ್ಷರ ಭೇಟಿ ಬಳಿಕ ಮೋದಿ ಹೇಳಿಕೆ
ಪ್ರಧಾನಿ ಮೋದಿ- ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ
Follow us on

ನವದೆಹಲಿ: ಭಾರತ ಮತ್ತು ಶ್ರೀಲಂಕಾ ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಅವರ ಸಮ್ಮುಖದಲ್ಲಿ ತಿಳುವಳಿಕೆ ಪತ್ರ (ಎಂಒಯು) ವಿನಿಮಯ ಮಾಡಿಕೊಂಡವು. ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ತಮಿಳು ಮೀನುಗಾರರ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಶ್ರೀಲಂಕಾದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ದ್ವೀಪ ರಾಷ್ಟ್ರವನ್ನು ಪ್ರವೇಶಿಸಿದ ಭಾರತೀಯ ಮೀನುಗಾರರನ್ನು ಬಂಧಿಸಿದ ವಿಷಯವನ್ನು ಕೂಡ ಪ್ರಧಾನಿ ಎತ್ತಿ ತೋರಿಸಿದರು.

ನಾವು ಮೀನುಗಾರರ ಜೀವನೋಪಾಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚಿಸಿದ್ದೇವೆ. ಈ ವಿಷಯದಲ್ಲಿ ನಾವು ಮಾನವೀಯ ಧೋರಣೆಯೊಂದಿಗೆ ಮುಂದುವರಿಯಬೇಕೆಂದು ನಾವು ಒಪ್ಪಿಕೊಂಡಿದ್ದೇವೆ. ನಾವು ಶ್ರೀಲಂಕಾದಲ್ಲಿ ನಿರ್ಮಾಣ ಮತ್ತು ಸಾಮರಸ್ಯದ ಬಗ್ಗೆಯೂ ಮಾತನಾಡಿದ್ದೇವೆ ಎಂದಿದ್ದಾರೆ. ಹಾಗೇ, ದೋಣಿ ಸೇವೆಗಳನ್ನು ವಿಸ್ತರಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.


ಶ್ರೀಲಂಕಾ ದೇಶದಲ್ಲಿ “ಸಾಮರಸ್ಯ ಮತ್ತು ಪುನರ್ನಿರ್ಮಾಣ” ಕುರಿತು ಚರ್ಚಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಶ್ರೀಲಂಕಾ ಸರ್ಕಾರವು ತಮಿಳು ಅಲ್ಪಸಂಖ್ಯಾತರ ಆಕಾಂಕ್ಷೆಗಳನ್ನು ಈಡೇರಿಸುತ್ತದೆ ಎಂದು ಭರವಸೆಯಿದೆ. ನಮ್ಮ ಆರ್ಥಿಕ ಸಹಕಾರದಲ್ಲಿ ನಾವು ಹೂಡಿಕೆ ನೇತೃತ್ವದ ಬೆಳವಣಿಗೆ ಮತ್ತು ಸಂಪರ್ಕಕ್ಕೆ ಒತ್ತು ನೀಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ

“ಭೌತಿಕ, ಡಿಜಿಟಲ್ ಮತ್ತು ಇಂಧನ ಸಂಪರ್ಕವು ನಮ್ಮ ಪಾಲುದಾರಿಕೆಯ ಪ್ರಮುಖ ಸ್ತಂಭಗಳಾಗಿವೆ ಎಂದು ನಾವು ನಿರ್ಧರಿಸಿದ್ದೇವೆ. ವಿದ್ಯುತ್ ಗ್ರಿಡ್ ಸಂಪರ್ಕ ಮತ್ತು ಬಹು ಪೆಟ್ರೋಲಿಯಂ ಪೈಪ್‌ಲೈನ್‌ಗಾಗಿ ಕೆಲಸ ಮಾಡಲಾಗುವುದು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ವೇಳೆ ತಮಿಳು ಮೀನುಗಾರರ ಸಮಸ್ಯೆಯನ್ನು ಪ್ರಧಾನಿ ಮೋದಿ ಎತ್ತಿ ತೋರಿಸಿದ್ದಾರೆ.


ತಮಿಳರ ಆಕಾಂಕ್ಷೆಗಳನ್ನು ಈಡೇರಿಸುವುದಾಗಿ ಮತ್ತು ಶ್ರೀಲಂಕಾದ ಸಂವಿಧಾನದ ಸಂಪೂರ್ಣ ಅನುಷ್ಠಾನಕ್ಕೆ ಮತ್ತು ಪ್ರಾಂತೀಯ ಕೌನ್ಸಿಲ್ ಚುನಾವಣೆಗಳನ್ನು ನಡೆಸುವ ತನ್ನ ಬದ್ಧತೆಯನ್ನು ಈಡೇರಿಸುವುದಾಗಿ ಅಧ್ಯಕ್ಷರು ಭರವಸೆ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೋಣಿ ಸಂಪರ್ಕ ವಿಸ್ತರಣೆ:

ಇದಲ್ಲದೆ, ಭಾರತವು ಪಾಲಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಿದ ದಿನವನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು. ನೆರೆಯ ರಾಷ್ಟ್ರದಲ್ಲೂ ಈ ನಿರ್ಧಾರವನ್ನು ಹೇಗೆ ಆಚರಿಸಲಾಯಿತು ಎಂಬ ಬಗ್ಗೆ ಮಾತನಾಡಿದರು. ಪ್ರವಾಸೋದ್ಯಮ ಕ್ಷೇತ್ರವನ್ನು ವಿಸ್ತರಿಸುವ ಸಲುವಾಗಿ ಸಂಪರ್ಕವನ್ನು ಹೆಚ್ಚಿಸಲು ಪ್ರಧಾನಿ ಮೋದಿ ಒತ್ತು ನೀಡಿದರು. ಅವರು ಭಾರತದ ರಾಮೇಶ್ವರಂ ಮತ್ತು ಶ್ರೀಲಂಕಾದ ತಲೈಮನ್ನಾರ್ ನಡುವೆ ದೋಣಿ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಪ್ರಸ್ತುತ, ದೋಣಿ ಸೇವೆಗಳು ನಾಗಪಟ್ಟಿಣಂ ಮತ್ತು ಕಂಕಸಂತುರೈಗೆ ಸೀಮಿತವಾಗಿವೆ.


ಇದನ್ನೂ ಓದಿ: ನಮ್ಮ ದೇಶದ ಭೂಮಿಯನ್ನು ಭಾರತದ ವಿರುದ್ಧ ಬಳಸಲು ಬಿಡುವುದಿಲ್ಲ; ಮೋದಿಗೆ ಶ್ರೀಲಂಕಾ ಅಧ್ಯಕ್ಷ ಭರವಸೆ

“ದೋಣಿ ಸೇವೆ ಮತ್ತು ಚೆನ್ನೈ-ಜಫ್ನಾ ವಿಮಾನ ಸಂಪರ್ಕವು ಪ್ರವಾಸೋದ್ಯಮವನ್ನು ಹೆಚ್ಚಿಸಿದೆ ಮತ್ತು ನಮ್ಮ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸಿದೆ. ನಾಗಪಟ್ಟಿಣಂ ಮತ್ತು ಕಂಕಸಂತುರೈ ದೋಣಿ ಸೇವೆಗಳ ಯಶಸ್ವಿ ಪ್ರಾರಂಭದ ನಂತರ ಈಗ ಭಾರತದ ರಾಮೇಶ್ವರಂ ಮತ್ತು ತಲೈಮನ್ನಾರ್ ನಡುವೆ ದೋಣಿ ಸೇವೆಯನ್ನು ಪ್ರಾರಂಭಿಸಲು ನಾವು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ