ನಮ್ಮ ದೇಶದ ಭೂಮಿಯನ್ನು ಭಾರತದ ವಿರುದ್ಧ ಬಳಸಲು ಬಿಡುವುದಿಲ್ಲ; ಮೋದಿಗೆ ಶ್ರೀಲಂಕಾ ಅಧ್ಯಕ್ಷ ಭರವಸೆ

ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಆನಾಯಕೆ ಭಾರತಕ್ಕೆ ಆಗಮಿಸಿದ್ದಾರೆ. ಮಂಗಳವಾರದವರೆಗೆ ಅವರು ಭಾರತ ಪ್ರವಾಸದಲ್ಲಿರಲಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮಾತುಕತೆ ನಡೆಸಿದ ಅವರು ಬಳಿಕ ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿದ್ದಾರೆ. ಎರಡೂ ದೇಶಗಳ ನಡುವಿನ ಮೀನುಗಾರರ ಸಮಸ್ಯೆಯನ್ನು ಬಗೆಹರಿಸಲು ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಇಚ್ಛೆ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಸಮಸ್ಯೆ ಎರಡೂ ದೇಶಗಳಿಗೆ "ಪ್ಲೇಗ್" ಆಗಿ ಪರಿಣಮಿಸಿದೆ ಎಂದು ಅವರು ಹೇಳಿದ್ದಾರೆ.

ನಮ್ಮ ದೇಶದ ಭೂಮಿಯನ್ನು ಭಾರತದ ವಿರುದ್ಧ ಬಳಸಲು ಬಿಡುವುದಿಲ್ಲ; ಮೋದಿಗೆ ಶ್ರೀಲಂಕಾ ಅಧ್ಯಕ್ಷ ಭರವಸೆ
ಪ್ರಧಾನಿ ನರೇಂದ್ರ ಮೋದಿ- ಅನುರಾ ಕುಮಾರ ದಿಸಾನಾಯಕೆ
Follow us
ಸುಷ್ಮಾ ಚಕ್ರೆ
|

Updated on: Dec 16, 2024 | 4:16 PM

ನವದೆಹಲಿ: ಶ್ರೀಲಂಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿರುವ ಅನುರಾ ಕುಮಾರ ದಿಸಾನಾಯಕೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಬರಮಾಡಿಕೊಂಡರು. ಇಂದು ಸಂಜೆ ದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಲಂಕಾ ಅಧ್ಯಕ್ಷ ದಿಸಾನಾಯಕೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ನಮ್ಮ ಭೂಮಿಯನ್ನು ಯಾವುದೇ ರೀತಿಯಲ್ಲಿ ಹಾನಿಕಾರಕ ರೀತಿಯಲ್ಲಿ ಬಳಸಲು ನಾವು ಅನುಮತಿಸುವುದಿಲ್ಲ ಎಂದು ನಾನು ಭಾರತದ ಪ್ರಧಾನಿಗೆ ಭರವಸೆ ನೀಡಿದ್ದೇನೆ ಎಂದಿದ್ದಾರೆ.

ಭಾರತದ ಹಿತದೃಷ್ಟಿಯಿಂದ ಭಾರತದೊಂದಿಗಿನ ಸಹಕಾರವು ಖಂಡಿತವಾಗಿಯೂ ಅಭಿವೃದ್ಧಿ ಹೊಂದುತ್ತದೆ. ಭಾರತಕ್ಕೆ ನಮ್ಮ ನಿರಂತರ ಬೆಂಬಲವನ್ನು ಭರವಸೆ ನೀಡಲು ನಾನು ಬಯಸುತ್ತೇನೆ. ಭಾರತ ಯಾವಾಗಲೂ ಶ್ರೀಲಂಕಾಕ್ಕೆ ಸಹಾಯ ಮಾಡುತ್ತಾ ಬಂದಿದೆ. ಭಾರತದ ವಿದೇಶಾಂಗ ನೀತಿಯಲ್ಲಿ ದ್ವೀಪ ರಾಷ್ಟ್ರವು ಬಹಳ ಮಹತ್ವದ ಸ್ಥಾನವನ್ನು ಹೊಂದಿದೆ ಎಂದು ದಿಸಾನಾಯಕೆ ಹೇಳಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ

“ನಮ್ಮ ಎರಡೂ ದೇಶಗಳಿಗೆ ಪಿಡುಗಾಗಿ ಪರಿಣಮಿಸಿರುವ ಮೀನುಗಾರರ ಸಮಸ್ಯೆಗೆ ನಾವು ಸುಸ್ಥಿರ ಪರಿಹಾರವನ್ನು ಕಂಡುಕೊಳ್ಳಲು ಬಯಸುತ್ತೇವೆ. ಆ ಪ್ರದೇಶದಲ್ಲಿ ಮೀನುಗಾರರಿಂದ ಕೆಳಭಾಗದ ಟ್ರಾಲಿಂಗ್ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಅದನ್ನು ಕೊನೆಗೊಳಿಸಬೇಕಾಗಿದೆ. ಏಕೆಂದರೆ ಇದು ಮೀನುಹಾರಿಕಾ ಉದ್ಯಮಕ್ಕೆ ತೊಂದರೆ ಉಂಟುಮಾಡುತ್ತದೆ ಎಂದು ಅನುರಾ ದಿಸಾನಾಯಕೆ ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಸಹಾಯವನ್ನು ಸ್ಮರಿಸಿದ ದಿಸಾನಾಯಕೆ, “ನಾವು 2 ವರ್ಷಗಳ ಹಿಂದೆ ಅಭೂತಪೂರ್ವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ್ದೇವೆ. ಭಾರತವು ಆ ಕೆಸರೆರಚಾಟದಿಂದ ಹೊರಬರಲು ನಮಗೆ ಅಪಾರವಾಗಿ ಬೆಂಬಲ ನೀಡಿತು. ಅದರ ನಂತರ ವಿಶೇಷವಾಗಿ ಸಾಲಮುಕ್ತಗೊಳಿಸಲು ಭಾರತ ನಮಗೆ ಬಹಳ ಸಹಾಯ ಮಾಡಿದೆ. ಭಾರತದ ವಿದೇಶಾಂಗ ನೀತಿಯಲ್ಲಿ ಶ್ರೀಲಂಕಾ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ ಎಂದು ನನಗೆ ತಿಳಿದಿದೆ. ಭಾರತ ಶ್ರೀಲಂಕಾದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಯಾವಾಗಲೂ ರಕ್ಷಿಸುತ್ತದೆ.” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿದ ಕಾರ್ಮಿಕ
ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿದ ಕಾರ್ಮಿಕ
ರೇಣುಕಾಸ್ವಾಮಿ ಹತ್ಯೆ ಕೇಸ್​; ದರ್ಶನ್ ವಿಚಾರಣೆಯ ನೇರ ಪ್ರಸಾರ ಇಲ್ಲಿದೆ..
ರೇಣುಕಾಸ್ವಾಮಿ ಹತ್ಯೆ ಕೇಸ್​; ದರ್ಶನ್ ವಿಚಾರಣೆಯ ನೇರ ಪ್ರಸಾರ ಇಲ್ಲಿದೆ..
ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದ ಪ್ರತಿಭಟನೆಕಾರರು
ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದ ಪ್ರತಿಭಟನೆಕಾರರು
ಸಿದ್ದರಾಮಯ್ಯನವರ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ, ಬಗ್ಗಲ್ಲ: ವಿಜಯೇಂದ್ರ
ಸಿದ್ದರಾಮಯ್ಯನವರ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ, ಬಗ್ಗಲ್ಲ: ವಿಜಯೇಂದ್ರ
ವಿಜಯೇಂದ್ರ-ಭೈರೇಗೌಡ ನಡುವೆ ವಾಗ್ವಾದ, ಸ್ಪೀಕರ್ ಯುಟಿ ಖಾದರ್ ಅಸಹಾಯಕ
ವಿಜಯೇಂದ್ರ-ಭೈರೇಗೌಡ ನಡುವೆ ವಾಗ್ವಾದ, ಸ್ಪೀಕರ್ ಯುಟಿ ಖಾದರ್ ಅಸಹಾಯಕ
ಅಧಿಕಾರದಲ್ಲಿರೋದು ಮುಸ್ಲಿಂ ಓಲೈಕೆಯ ಹಿಂದೂ ವಿರೋಧಿ ಸರ್ಕಾರ: ಯತ್ನಾಳ್
ಅಧಿಕಾರದಲ್ಲಿರೋದು ಮುಸ್ಲಿಂ ಓಲೈಕೆಯ ಹಿಂದೂ ವಿರೋಧಿ ಸರ್ಕಾರ: ಯತ್ನಾಳ್
150 ಕೋಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ: ವಿಜಯೇಂದ್ರ ಆಗ್ರಹ
150 ಕೋಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ: ವಿಜಯೇಂದ್ರ ಆಗ್ರಹ
ಚೌಲಗೆರೆ ಬಳಿ ಹೊಸ ಟೋಲ್​ಗೆ ತೀವ್ರ ವಿರೋಧ, ಹೆದ್ದಾರಿ ತಡೆದು ಪ್ರತಿಭಟನೆ
ಚೌಲಗೆರೆ ಬಳಿ ಹೊಸ ಟೋಲ್​ಗೆ ತೀವ್ರ ವಿರೋಧ, ಹೆದ್ದಾರಿ ತಡೆದು ಪ್ರತಿಭಟನೆ
ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ: ಆರ್ ಅಶೋಕ
ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ: ಆರ್ ಅಶೋಕ