ಅಯೋಧ್ಯೆ ರಾಮಮಂದಿರದ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ ಮೋದಿ

|

Updated on: Jan 18, 2024 | 1:46 PM

ಅಂಚೆ ಚೀಟಿ ಪುಸ್ತಕವು ಭಗವಾನ್ ರಾಮನ ಅಂತರರಾಷ್ಟ್ರೀಯ ಮನ್ನಣೆಯನ್ನು ಪ್ರದರ್ಶಿಸುವ ಪ್ರಯತ್ನವಾಗಿದೆ. 48 ಪುಟಗಳ ಪುಸ್ತಕವು ಯುಎಸ್, ನ್ಯೂಜಿಲೆಂಡ್, ಸಿಂಗಾಪುರ, ಕೆನಡಾ, ಕಾಂಬೋಡಿಯಾ ಮತ್ತು ಯುಎನ್‌ನಂತಹ ಸಂಸ್ಥೆಗಳು ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳು ಬಿಡುಗಡೆ ಮಾಡಿದ ಅಂಚೆಚೀಟಿಗಳನ್ನು ಒಳಗೊಂಡಿದೆ.

ಅಯೋಧ್ಯೆ ರಾಮಮಂದಿರದ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ ಮೋದಿ
ಅಂಚೆ ಚೀಟಿ ಬಿಡುಗಡೆ ಮಾಡಿದ ಮೋದಿ
Follow us on

ದೆಹಲಿ ಜನವರಿ 18: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಗುರುವಾರ ಅಯೋಧ್ಯೆಯ (Ayodhya) ರಾಮಮಂದಿರದ (Ram mandir) ಸ್ಮರಣಾರ್ಥ ಅಂಚೆ ಚೀಟಿಗಳನ್ನು ಮತ್ತು ವಿಶ್ವದಾದ್ಯಂತ ಭಗವಾನ್ ರಾಮನ ಕುರಿತು ಬಿಡುಗಡೆ ಮಾಡಲಾದ ಅಂಚೆಚೀಟಿಗಳ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಅಂಚೆಚೀಟಿಯಲ್ಲಿ ರಾಮ ಮಂದಿರ,  ರಾಮಾಯಣ ಚೌಪಾಯಿ ‘ಮಂಗಲ್ ಭವನ ಅಮಂಗಲ್ ಹರಿ’, ಸೂರ್ಯ, ಸರಯೂ ನದಿ ಮತ್ತು ದೇವಾಲಯದ ಸುತ್ತಮುತ್ತಲಿನ ಶಿಲ್ಪಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆರು ಅಂಚೆಚೀಟಿಗಳು ರಾಮ ಮಂದಿರ, ಗಣೇಶ, ಹನುಮಾನ್, ಜಟಾಯು, ಕೇವತ್ರಾಜ್ ಮತ್ತು ಮಾ ಶಬರಿ ಬಗ್ಗೆ ಇವೆ.

ಅಂಚೆ ಚೀಟಿ ಪುಸ್ತಕವು ಭಗವಾನ್ ರಾಮನ ಅಂತರರಾಷ್ಟ್ರೀಯ ಮನ್ನಣೆಯನ್ನು ಪ್ರದರ್ಶಿಸುವ ಪ್ರಯತ್ನವಾಗಿದೆ. 48 ಪುಟಗಳ ಪುಸ್ತಕವು ಯುಎಸ್, ನ್ಯೂಜಿಲೆಂಡ್, ಸಿಂಗಾಪುರ, ಕೆನಡಾ, ಕಾಂಬೋಡಿಯಾ ಮತ್ತು ಯುಎನ್‌ನಂತಹ ಸಂಸ್ಥೆಗಳು ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳು ಬಿಡುಗಡೆ ಮಾಡಿದ ಅಂಚೆಚೀಟಿಗಳನ್ನು ಒಳಗೊಂಡಿದೆ.

ಸೂರ್ಯನ ಕಿರಣಗಳ ಚಿನ್ನದ ಎಲೆ ಮತ್ತು ‘ರಾಮಾಯಣ ಚೌಪಾಯಿ’ ಈ ಚಿಕ್ಕ ಹಾಳೆಯಲ್ಲಿ ಮೂಡಿ ಬಂದಿದೆ. ಇದು ಐದು ಭೌತಿಕ ಅಂಶಗಳಾದ ಆಕಾಶ, ಗಾಳಿ, ಬೆಂಕಿ, ಭೂಮಿ ಮತ್ತು ನೀರು ವಿವಿಧ ವಿನ್ಯಾಸದ ಅಂಶಗಳ ಮೂಲಕ ಪ್ರತಿಫಲಿಸುತ್ತದೆ.


“ಇಂದು, ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಸಂಬಂಧಿಸಿದ ಮತ್ತೊಂದು ಕಾರ್ಯಕ್ರಮದಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ನನಗೆ ಅವಕಾಶ ಸಿಕ್ಕಿತು. ಇಂದು, ರಾಮಮಂದಿರಕ್ಕೆ ಸಮರ್ಪಿತವಾದ ಆರು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ, ವಿಶ್ವದಾದ್ಯಂತ ಭಗವಾನ್ ರಾಮನ ಮೇಲೆ ಬಿಡುಗಡೆಯಾದ ಅಂಚೆಚೀಟಿಗಳ ಪುಸ್ತಕವನ್ನು ಸಹ ಬಿಡುಗಡೆ ಮಾಡಲಾಯಿತು.ಎಂದು ರಾಮಮಂದಿರದ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ ನಂತರ ಪ್ರಧಾನಿ ಮೋದಿ ಹೇಳಿದರು.

“ರಾಮ, ಸೀತಾ ದೇವತೆ ಮತ್ತು ರಾಮಾಯಣದ ಕಥೆಗಳು ಅವನ / ಅವಳ ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ಪ್ರತಿಯೊಬ್ಬರೊಂದಿಗೆ ಸಂಪರ್ಕ ಹೊಂದಿವೆ. ರಾಮಾಯಣವು ಎಲ್ಲಾ ಸವಾಲುಗಳ ನಡುವೆಯೂ ಪ್ರೀತಿಯ ವಿಜಯದ ಬಗ್ಗೆ ನಮಗೆ ಕಲಿಸುತ್ತದೆ. ಇದು ಇಡೀ ಮಾನವೀಯತೆಯನ್ನು ತನ್ನೊಂದಿಗೆ ಸಂಪರ್ಕಿಸುತ್ತದೆ. ಅದಕ್ಕಾಗಿಯೇ ಅದು ಇಡೀ ಪ್ರಪಂಚದಾದ್ಯಂತ ಗಮನ ಸೆಳೆದಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ಸಮೀಪ 2 ಎಕರೆ ಜಾಗ ಖರೀದಿಸಿ ತುಳಸಿ ಕೃಷಿ ಮಾಡಿದ ಬೆಂಗಳೂರಿನ ಭಕ್ತ; ಪ್ರಭು ಶ್ರೀರಾಮನಿಗೆ ಸಿದ್ಧವಾಗುತ್ತಿದೆ ವಿಶೇಷ ತುಳಸಿ ಮಾಲೆ

ಜನವರಿ 22 ರಂದು ಅಯೋಧ್ಯೆಯಲ್ಲಿ ಬೃಹತ್ ರಾಮಮಂದಿರದಲ್ಲಿ ರಾಮಲಲ್ಲಾ ‘ಪ್ರಾಣ ಪ್ರತಿಷ್ಠಾ’ (ಪ್ರತಿಷ್ಠಾಪನೆ) ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ದೇವಸ್ಥಾನದ ಟ್ರಸ್ಟ್ ಪ್ರಕಾರ, ರಾಜಕಾರಣಿಗಳು, ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳು, ಸಂತರು ಸೇರಿದಂತೆ 7,000 ಕ್ಕೂ ಹೆಚ್ಚು ಜನರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:34 pm, Thu, 18 January 24