ಎರಡನೇ ರಾಷ್ಟ್ರೀಯ ಯುವ ಸಂಸತ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ ಮೋದಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 10, 2021 | 9:30 PM

ಈ ವರ್ಷ ನಡೆದ ಎರಡನೇ ರಾಷ್ಟ್ರೀಯ ಯುವ ಸಂಸತ್ ಉತ್ಸವ 2021, ಡಿಸೆಂಬರ್ 23, 2020ಇಂದ ಆರಂಭವಾಗಿದ್ದು, ಜನವರಿ 12ಕ್ಕೆ ಪೂರ್ಣಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ 23 ಲಕ್ಷಕ್ಕೂ ಹೆಚ್ಚು ಯುವಕರು ಭಾಗಿಯಾಗಿದ್ದರು.

ಎರಡನೇ ರಾಷ್ಟ್ರೀಯ ಯುವ ಸಂಸತ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ ಮೋದಿ
ಪ್ರಧಾನಿ ಮೋದಿ
Follow us on

ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಜನವರಿ 12 ರಂದು ಬೆಳಿಗ್ಗೆ 10:30ಕ್ಕೆ ಎರಡನೇ ರಾಷ್ಟ್ರೀಯ ಯುವ ಸಂಸತ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಇದೇ ವೇಳೆ ಉತ್ಸವದ ಮೂವರು ವಿಜೇತರು ಪ್ರಧಾನಿ ಮೋದಿ ಎದುರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿದ್ದಾರೆ.

ಈ ವರ್ಷ ನಡೆದ ಎರಡನೇ ರಾಷ್ಟ್ರೀಯ ಯುವ ಸಂಸತ್ ಉತ್ಸವ 2021, ಡಿಸೆಂಬರ್ 23, 2020ಇಂದ ಆರಂಭವಾಗಿದ್ದು, ಜನವರಿ 12ಕ್ಕೆ ಪೂರ್ಣಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ 23 ಲಕ್ಷಕ್ಕೂ ಹೆಚ್ಚು ಯುವಕರು ಭಾಗಿಯಾಗಿದ್ದರು.

ಸಾರ್ವಜನಿಕ ಸೇವೆ ಒಳಗೊಂಡಂತೆ ವಿವಿಧ ವೃತ್ತಿಗಳಿಗೆ ಸೇರುವ 18 ರಿಂದ 25 ವಯೋಮಾನದ ಯುವಜನತೆಯ ಧ್ವನಿಯನ್ನು ಆಲಿಸುವುದು ರಾಷ್ಟ್ರೀಯ ಯುವ ಸಂಸತ್ ಉತ್ಸವದ ಉದ್ದೇಶವಾಗಿದೆ. 2017 ರ ಡಿಸೆಂಬರ್ 31 ರಂದು ಪ್ರಧಾನಿಯವರು ತಮ್ಮ ಮನ್ ಕಿ ಬಾತ್ ನಲ್ಲಿ ಯುವ ಸಂಸತ್ತು ಉತ್ಸವ (ಎನ್‌ವೈಪಿಎಫ್) ಆರಂಭಿಸಲು ಸಲಹೆ ನೀಡಿದ್ದರು. ಅಂತೆಯೇ ಮೊದಲ ಬಾರಿಗೆ 2019 ರಂದು ಈ ಕಾರ್ಯಕ್ರಮ ಆರಂಭಿಸಲಾಗಿತ್ತು.

ರಾಷ್ಟ್ರೀಯ ಯುವಜನೋತ್ಸವ
ರಾಷ್ಟ್ರೀಯ ಯುವಜನೋತ್ಸವವನ್ನು ಪ್ರತಿವರ್ಷ ಜನವರಿ 12 ರಿಂದ 16 ರವರೆಗೆ ಆಚರಿಸಲಾಗುತ್ತದೆ. ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮ ದಿನವಾದ್ದರಿಂದ ಇದನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ, ರಾಷ್ಟ್ರೀಯ ಯುವ ಉತ್ಸವದ ಜೊತೆಗೆ ಎನ್‌ವೈಪಿಎಫ್ ಸಹ ಆಯೋಜಿಸಲಾಗುತ್ತಿದೆ.

ದೇಶದ ಯುವಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಗ್ಗೂಡಿಸುವುದು ರಾಷ್ಟ್ರೀಯ ಯುವ ಉತ್ಸವದ ಉದ್ದೇಶವಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ, 24 ನೇ ರಾಷ್ಟ್ರೀಯ ಯುವ ಉತ್ಸವವನ್ನು ವರ್ಚುವಲ್ ಮಾದರಿಯಲ್ಲಿ ನಡೆಸಲಾಗುತ್ತಿದೆ. 24 ನೇ ರಾಷ್ಟ್ರೀಯ ಯುವ ಉತ್ಸವದ ಸಮಾರೋಪ ಸಮಾರಂಭವು 2021 ರ ಜನವರಿ 16 ರಂದು ನವದೆಹಲಿಯ ಡಾ.ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಗೋಏರ್ ಪೈಲಟ್ ವಜಾ